Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದ ಪಾರ್ಕ್​​​ನಲ್ಲಿ ಸತ್ತುಬಿದ್ದ ಪಕ್ಷಿಗಳು: ರಾಜ್ಯಕ್ಕೂ ವಕ್ಕರಿಸಿತಾ ಹಕ್ಕಿ ಜ್ವರ?

ಹೀಗಾಗಿ ಕೂಡಲೇ ಎಚ್ಚೆತ್ತುಕೊಂಡಿರುವ ಪಾಲಿಕೆ ಆರೋಗ್ಯ ಅಧಿಕಾರಿಗಳು, ಮೃತ ಹಕ್ಕಿಗಳನ್ನು ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಆದರೆ ಇದುವರೆಗೂ ಹಕ್ಕಿಗಳು ಮೃತಪಟ್ಟಿರುವ ಬಗ್ಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ವರದಿ ಬಳಿಕವಷ್ಟೇ ಹಕ್ಕಿಗಳ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸತ್ತು ಬಿದ್ದಿರುವ ಪಕ್ಷಿ
Follow us
ಪೃಥ್ವಿಶಂಕರ
|

Updated on:Jan 07, 2021 | 4:00 PM

ಶಿವಮೊಗ್ಗ: ನಗರದ ಸವಳಂಗ ರಸ್ತೆಯ ರೋಟರಿ ಯುವಕೇಂದ್ರ ಹಾಗೂ ಅದರ ಪಕ್ಕದ ಪಾರ್ಕ್​ನಲ್ಲಿ ಐದಕ್ಕೂ ಹೆಚ್ಚು ಹಕ್ಕಿಗಳ ಸಾವನ್ನಪ್ಪಿದೆ. ಇದರಿಂದ ರಾಜ್ಯಕ್ಕೂ ಹಕ್ಕಿ ಜ್ವರ ವಕ್ಕರಿಸಿದೆಯಾ ಎಂಬ ಅನುಮಾನ ಹುಟ್ಟುಹಾಕಿದೆ.

ದೇಶದಲ್ಲಿ ಕೊರೊನಾ ಸೋಂಕಿನ ಹಾವಳಿಯ ಜೊತೆಗೆ ಈಗ ಹಕ್ಕಿ ಜ್ವರ ಕೂಡ ತನ್ನ ಆರ್ಭಟ ಶುರು ಮಾಡಿದೆ. ಹೀಗಾಗಿ ದೇಶದ ಎಲ್ಲಾ ರಾಜ್ಯಗಳು ಇದರ ಬಗ್ಗೆ ಕಟ್ಟೇಚ್ಚರವಹಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ರಾಜ್ಯದ ಶಿವಮೊಗ್ಗ ಜಿಲ್ಲೆಯ ಪಾರ್ಕ್​ ಒಂದರಲ್ಲಿ ಐದಕ್ಕೂ ಹೆಚ್ಚು ಹಕ್ಕಿಗಳು ಸಾವನ್ನಪ್ಪಿರುವುದು ಆ ಭಾಗದ ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

ಹೀಗಾಗಿ ಕೂಡಲೇ ಎಚ್ಚೆತ್ತುಕೊಂಡಿರುವ ಪಾಲಿಕೆ ಆರೋಗ್ಯ ಅಧಿಕಾರಿಗಳು, ಮೃತ ಹಕ್ಕಿಗಳನ್ನು ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಆದರೆ ಇದುವರೆಗೂ ಹಕ್ಕಿಗಳು ಮೃತಪಟ್ಟಿರುವ ಬಗ್ಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ವರದಿ ಬಳಿಕವಷ್ಟೇ ಹಕ್ಕಿಗಳ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರಕ್ಕೂ ಕಾಲಿಟ್ಟಿದೆಯಾ ಹಕ್ಕಿ ಜ್ವರ? ಚಿಕ್ಕಬಳ್ಳಾಪುರದಲ್ಲಿ ಇದ್ದಕ್ಕಿದ್ದಂತೆ ಪಕ್ಷಿಗಳು ಸಾಯುತ್ತಿದ್ದು, ಅಮಾನಿ ಗೋಪಾಲಕೃಷ್ಣ ಕೆರೆಯಂಗಳದಲ್ಲಿ ಪಕ್ಷಿಗಳು ಸಾವನ್ನಪ್ಪಿವೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರುಗಡೆಯೆ ಇರುವ ಕೆರೆಯಲ್ಲಿ ಈ ಘಟನೆ ನಡೆದಿದೆ. ದೇಶ ವಿದೇಶಗಳಿಂದ ವಲಸೆ ಬಂದಿದ್ದ ಪಕ್ಷಿಗಳು ಸಾವನ್ನಪ್ಪಿವೆ. ಹೀಗಾಗಿ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಹಕ್ಕಿ ಜ್ವರದ ಆತಂಕ.. ಮುಂದುವರೆದ ತಪಾಸಣೆ

Published On - 3:58 pm, Thu, 7 January 21

ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್

ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!

ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು

ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?

‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ

ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ

ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ

ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !

ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ