ಅಂತರಂಗ ಶುದ್ಧಿಗೆ ತಪಸ್ಸು, ಧ್ಯಾನ ಬೇಕಾಗುತ್ತದೆ: ಡಾ. ಡಿ ವೀರೇಂದ್ರ ಹೆಗ್ಗಡೆ
ನಮ್ಮ ಕ್ಷೇತ್ರದ ಪರಿಸರವನ್ನು ಯಾವಾಗಲೂ ವಿಶೇಷವಾಗಿ ಇಟ್ಟುಕೊಳ್ಳಬೇಕು. ಮೂಲ ಸಾನಿಧ್ಯವನ್ನು ನಾವು ರಕ್ಷಣೆ ಮಾಡಬೇಕು. ಇದಕ್ಕೆ ನಮ್ಮ ಸಿಬ್ಬಂದಿಗಳಿಗೆ ತರಬೇತಿ ನೀಡಬೇಕ ಎಂದು ಡಾ. ವೀರೇಂದ್ರ ಹೆಗ್ಗಡೆ ಕಿವಿಮಾತು ನುಡಿದರು.

ಬೆಂಗಳೂರು: ಭೀಕರ ಕಾಯಿಲೆಗಳು ರಾಜ್ಯಕ್ಕೆ ಬಂದಾಗ ಭಗವಂತನ ಅನುಗ್ರಹಬೇಕು. ಅಂತರಂಗ, ಬಹಿರಂಗ ಯಾವಾಗಲೂ ಶುದ್ಧಿಯಾಗಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಡಾ.ಡಿ ವೀರೇಂದ್ರ ಹೆಗ್ಗಡೆ, ಪರಿಸರ ಹಾಗೂ ದೇವಸ್ಥಾನಗಳು ಯಾವಾಗಲೂ ಶುದ್ಧವಾಗಿರಬೇಕು. ಅದೇ ರೀತಿ, ಅಂತರಂಗ ಹಾಗೂ ಬಹಿರಂಗ ಎರಡೂ ಶುದ್ಧಿಯಾಗಿರಬೇಕು. ಅಂತರಂಗ ಶುದ್ಧಿಗೆ ತಪ್ಪಸ್ಸು, ಧ್ಯಾನ ಬೇಕಾಗುತ್ತದೆ. ಕ್ಷೇತ್ರದ ವಿಚಾರಕ್ಕೆ ಬಂದಾಗ ಅವಕಾಶ ಬರಬೇಕಾಗುತ್ತದೆ ಎಂದರು.
ನಮ್ಮ ಕ್ಷೇತ್ರದ ಪರಿಸರವನ್ನು ಯಾವಾಗಲೂ ವಿಶೇಷವಾಗಿ ಇಟ್ಟುಕೊಳ್ಳಬೇಕು. ಮೂಲ ಸಾನಿಧ್ಯವನ್ನು ನಾವು ರಕ್ಷಣೆ ಮಾಡಬೇಕು. ಇದಕ್ಕೆ ನಮ್ಮ ಸಿಬ್ಬಂದಿಗಳಿಗೆ ತರಬೇತಿ ನೀಡಬೇಕು. ನಿಮ್ಮ ನಿಮ್ಮ ದೇವಾಲಯಗಳಲ್ಲಿ ಕೆಲ ಪದ್ಧತಿಗಳು ಇರಬಹುದು. ಆ ಪದ್ಧತಿಯನ್ನು ಕಾಪಾಡಿಕೊಂಡು ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದರು.
ಹಳೆಯ ದೇವಾಲಯಗಳ ಜೀರ್ಣೋದ್ಧಾರ ಮಾಡಿದ್ದಕ್ಕಾಗಿ ಮುಖ್ಯ ಮಂತ್ರಿಗಳು ನಮಗೆ ರಾಜ್ಯ ಪ್ರಶಸ್ತಿ ಕೊಟ್ಟಿದ್ದಾರೆ ಎಂದು ವೀರೇಂದ್ರ ಹೆಗ್ಗಡೆ ಹೆಮ್ಮೆ ವ್ಯಕ್ತಪಡಿಸಿದರು.