AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ, ಗಾಯಕ ದಿಲ್ಜಿತ್​ ದೋಸಾಂಜ್​ ಹಾಸ್ಯಪ್ರಜ್ಞೆ ಅಭಿಮಾನಿಗಳು ಫಿದಾ: ಇಲ್ಲಿವೆ ಅವರ ಫನ್ನಿ ಪೋಸ್ಟ್​ಗಳು

ದಿಲ್ಜಿತ್​ ದೋಸಾಂಜ್ ಕೂಡ ಸೋಷಿಯಲ್​ ಮೀಡಿಯಾಗಳಲ್ಲಿ ತುಂಬ ಆ್ಯಕ್ಟಿವ್​. ಕೆಲವು ಬಾರಿ ಫನ್ನಿ ಪೋಸ್ಟ್​ಗಳಿಂದ ಅಭಿಮಾನಿಗಳನ್ನು ಮನರಂಜಿಸಿದರೆ, ಇನ್ನೂ ಕೆಲವು ಬಾರಿಯಂತೂ ತಮ್ಮದೇ ಮೀಮ್ಸ್​ಗಳುಳ್ಳ ವಿಚಿತ್ರ ಪೋಸ್ಟ್​ಗಳನ್ನು ಹಾಕುವ ಮೂಲಕ ದಿಗ್ಭ್ರಮೆಯಾಗುವಂತೆ ಮಾಡಿದ್ದಾರೆ. ಅಂಥ ಪೋಸ್ಟ್​ಗಳು ಸಿಕ್ಕಾಪಟೆ ವೈರಲ್​ ಆಗಿವೆ ಕೂಡ.

ನಟ, ಗಾಯಕ ದಿಲ್ಜಿತ್​ ದೋಸಾಂಜ್​ ಹಾಸ್ಯಪ್ರಜ್ಞೆ ಅಭಿಮಾನಿಗಳು ಫಿದಾ: ಇಲ್ಲಿವೆ ಅವರ ಫನ್ನಿ ಪೋಸ್ಟ್​ಗಳು
ದಿಲ್ಜಿತ್​ ದೋಸಾಂಜ್​
Lakshmi Hegde
| Edited By: |

Updated on: Jan 07, 2021 | 4:29 PM

Share

ಪಂಜಾಬಿ ನಟ, ಗಾಯಕ ದಿಲ್ಜಿತ್ ದೋಸಾಂಜ್ ನಿನ್ನೆ 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದಿಲ್ಜಿತ್ ಕೇವಲ ಪಂಜಾಬ್​ ಸಿನಿಕ್ಷೇತ್ರದಲ್ಲಷ್ಟೇ ಅಲ್ಲ, ಬಾಲಿವುಡ್​ನಲ್ಲೂ ಚಾಪು ಮೂಡಿಸಿದವರು. ವಿಡಿಯೋ ಸಾಂಗ್​​ಗಳಲ್ಲಿ, ಸಿನಿಮಾಗಳಲ್ಲಿ ತಮ್ಮ ಹಾಡು, ಅದಕ್ಕೆ ತಕ್ಕಂತ ಪ್ರದರ್ಶನಗಳಿಂದ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಇಂಥ ಬಹುಮುಖ ಪ್ರತಿಭೆ ದಿಲ್ಜಿತ್​​ ದೋಸಾಂಜ್​ರಿಗೆ ನಿನ್ನೆ ಸಿಕ್ಕಾಪಟೆ ಅಭಿಮಾನಿಗಳು ಬರ್ತ್​ ಡೇ ವಿಶ್​ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ದಿಲ್ಜಿತ್​ರ ವಿವಿಧ ಫೋಟೋ, ಕಾಮಿಡಿ ದೃಶ್ಯಗಳ ಫೋಟೋ ಹಾಕಿ, ನೆಚ್ಚಿನ ನಟ, ಗಾಯಕನಿಗೆ ಶುಭ ಹಾರೈಸಿದ್ದಾರೆ.

ಫನ್ನಿ ಪೋಸ್ಟ್ ಹಾಕ್ತಾರೆ ದಿಲ್ಜಿತ್​ ಇನ್ನು ದಿಲ್ಜಿತ್​ ದೋಸಾಂಜ್ ಕೂಡ ಸೋಷಿಯಲ್​ ಮೀಡಿಯಾಗಳಲ್ಲಿ ತುಂಬಾನೇ ಆ್ಯಕ್ಟಿವ್​. ಕೆಲವು ಬಾರಿ ಫನ್ನಿ ಪೋಸ್ಟ್​ಗಳಿಂದ ಅಭಿಮಾನಿಗಳನ್ನು ಮನರಂಜಿಸಿದರೆ, ಇನ್ನೂ ಕೆಲವು ಬಾರಿಯಂತೂ ತಮ್ಮದೇ ಮೀಮ್ಸ್​ಗಳುಳ್ಳ ವಿಚಿತ್ರ ಪೋಸ್ಟ್​ಗಳನ್ನು ಹಾಕುವ ಮೂಲಕ ದಿಗ್ಭ್ರಮೆಯಾಗುವಂತೆ ಮಾಡಿದ್ದಾರೆ. ಅಂಥ ಪೋಸ್ಟ್​ಗಳು ಸಿಕ್ಕಾಪಟೆ ವೈರಲ್​ ಆಗಿವೆ ಕೂಡ.

ಹಾಗೇ ಸಿಕ್ಕಾಪಟೆ ನಗು ಹುಟ್ಟಿಸಿದ ದಿಲ್ಜಿತ್​ ಅವರ ಒಂದಷ್ಟು ಸೋಷಿಯಲ್​ ಮೀಡಿಯಾ ಪೋಸ್ಟ್​ಗಳು ಇಲ್ಲಿವೆ ನೋಡಿ..

ನಾವು ಚಿಕ್ಕವರಿದ್ದಾಗ ಸಾಮಾನ್ಯವಾಗಿ ನಮ್ಮ ಮನೆಗೆ ಬರುವ ಅತಿಥಿಗಳು ಹೋಗುವಾಗ ಹಣ ಕೊಡುವ ಒಂದು ಪದ್ಧತಿಯಿದೆ. ಅದಕ್ಕೆ ಸಂಬಂಧಪಟ್ಟಂತೆ ದಿಲ್ಜಿತ್​ ತಮ್ಮದೇ ಎಕ್ಸ್​ಪ್ರೆಶನ್​ ಇರುವ ಮೀಮ್ಸ್​ವೊಂದನ್ನು ಹಾಕಿ, ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್ ಇದು..

ಕೆಲವು ನಟರು, ಸೆಲೆಬ್ರಿಟಿಗಳು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ವರ್ಕೌಟ್​ ವಿಡಿಯೋಗಳನ್ನು ಶೇರ್​ ಮಾಡುವುದು ಸಾಮಾನ್ಯ. ಅದಕ್ಕೆ ಟಾಂಗ್​ ನೀಡುವಂತ ಮೀಮ್ಸ್​ ಫೊಟೋವನ್ನು ದಿಲ್ಜಿತ್​ ಹಾಕಿದ್ದರು. ಯಾರದ್ದೋ ದೇಹಕ್ಕೆ ತಮ್ಮ ಮುಖ ಅಂಟಿಸಿ, ಕೈಯಲ್ಲೊಂದು ಪ್ಲೇಕಾರ್ಡ್ ಹಿಡಿದ ಪೋಸ್ಟ್ ಹಾಕಿದ್ದರು. ಆ ಪ್ಲೇಕಾರ್ಡ್ ಮೇಲೆ, stop posting your home workouts (ಮನೆಯಲ್ಲಿ ಮಾಡುವ ವರ್ಕೌಟ್​ ಗಳ ಪೋಸ್ಟ್​ಗಳನ್ನು ಹಾಕುವುದು ನಿಲ್ಲಿಸಿ) ಎಂದು ಬರೆದುಕೊಂಡಿತ್ತು. ಈ ಫೋಟೋವಂತೂ ಸಿಕ್ಕಾಪಟೆ ವೈರಲ್ ಆಗಿತ್ತು.

ಕಳೆದ ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಕುಟುಂಬ ಸಮೇತ ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಇವಾಂಕಾ ಟ್ರಂಪ್​ ತಾಜ್​ಮಹಲ್​ಗೆ ಭೇಟಿ ನೀಡಿದ್ದರು. ಅವರು ತಾಜ್​ಮಹಲ್​ನ ಎದುರಿನ ಕಲ್ಲುಬೆಂಚ್​ ಮೇಲೆ ಕುಳಿತಿದ್ದ ಫೋಟೋವನ್ನು ದಿಲ್ಜಿತ್​ ತಿರುಚಿ ಒಂದು ಮೀಮ್ಸ್ ಪೋಸ್ಟ್ ಮಾಡಿದ್ದರು. ಕಲ್ಲುಬೆಂಚ್​ ಮೇಲೆ ಇವಾಂಕಾ ಕುಳಿತಿದ್ದಾರೆ. ಅವರ ಪಕ್ಕ ತಾವು, ತಮ್ಮ ಎಡಗಾಲನ್ನ ಇವಾಂಕಾ ಕಾಲಿನ ಮೇಲೆ ಹಾಕಿಕೊಂಡು ಕುಳಿತಿರುವಂತೆ ಫೋಟೋಶಾಪ್​ ಮಾಡಿದ ಫೊಟೋ ಇದು. ಈ ಪೋಸ್ಟ್​ನ್ನು ನೋಡಿದ ಅಭಿಮಾನಿಗಳು ಸಿಕ್ಕಾಪಟೆ ನಕ್ಕಿದ್ದರು. ತುಂಬ ವೈರಲ್ ಕೂಡ ಆಗಿತ್ತು.

ಇಸ್ರೇಲಿ ನಟಿಯ ಕಾಲೆಳೆದಿದ್ದರು ದಿಲ್ಜಿತ್ ಹಾಸ್ಯಪ್ರವೃತ್ತಿ ಎಷ್ಟಿದೆ ಎಂದರೆ, ಸೋಷಿಯಲ್​ ಮೀಡಿಯಾದಲ್ಲಿ ಬೇರೆ ಸೆಲೆಬ್ರಿಟಿಗಳ ಕೆಲವು ಪೋಸ್ಟ್​ಗಳಿಗೆ ಎಪಿಕ್ ಎನ್ನಿಸುವ ಕಾಮೆಂಟ್​ಗಳನ್ನು ಹಾಕುವ ಮೂಲಕವೂ ಗಮನ ಸೆಳೆದಿದ್ದಾರೆ. ಕೆಲವು ದಿನಗಳ ಹಿಂದೆ ಇಸ್ರೇಲಿ ನಟಿ, ವಂಡರ್ ವುಮೆನ್​ ಗಾಲ್ ಗಡೊಟ್, ತಾವು ಸಲಾಡ್ ಮಾಡುತ್ತಿರುವ ಫೋಟೋವೊಂದನ್ನು ಇನ್ಸ್ಟಾದಲ್ಲಿ ಹಾಕಿದ್ದರು. ಅದಕ್ಕೆ ಕಾಮೆಂಟ್ ಮಾಡಿದ್ದ ಪಂಜಾಬಿ ಗಾಯಕ, ನನಗೋಸ್ಕರ ಹೂಕೋಸಿನ (ಕ್ವಾಲಿಫ್ಲವರ್) ಪರೋಟ ಮಾಡಿಕೊಡಿ ಎಂದಿದ್ದರು. ಆ ಸ್ಕ್ರೀನ್​ಶಾಟ್​ಗಳನ್ನು ದಿಲ್ಜಿತ್ ಅಭಿಮಾನಿಗಳು ಭರ್ಜರಿ ವೈರಲ್ ಮಾಡಿಕೊಂಡಿದ್ದರು.

ಕೈಲಿ ಜೆನ್ನರ್ ಹಾಲಿವುಡ್​ ನಟಿ, ವಿಶ್ವದ ಕಿರಿಯದ ಬಿಲಿಯನೇರ್​ ಎಂದು ಖ್ಯಾತಿ ಪಡೆದಿರುವ ಕೈಲಿ ಜೆನ್ನರ್​ಗೆ ಅತಿದೊಡ್ಡ ಸಂಖ್ಯೆಯಲ್ಲಿ ಫಾಲೋವರ್ಸ್​, ಅಭಿಮಾನಿಗಳು ಇದ್ದಾರೆ. ಇವರ ವಿಚಾರದಲ್ಲೂ ಸಹ ದಿಲ್ಜಿತ್​ ಮೀಮ್ಸ್ ಮಾಡಿದ್ದರು. ತಾವು ಕೈಲಿ ಜೆನ್ನರ್ ಸೊಂಟವನ್ನು ಬಳಸಿರುವಂತೆ ಎನಿಮೇಟೆಡ್​ ಚಿತ್ರವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡ ಅವರು, ನಾನು ಡು ಯು ನೋ (Do You Know..) ಹಾಡು ಮಾಡಿದ್ದು ನಿಜಕ್ಕೂ ಕೈಲಿ ಜೆನ್ನರ್​ಗೋಸ್ಕರ ಎಂದು ಹೇಳಿದ್ದರು. ಇದೂ ಕೂಡ ತುಂಬ ವೈರಲ್ ಆಗಿತ್ತು.

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ