ಫೇಸ್​ಬುಕ್​ ಪರಿಚಯ: 35 ವರ್ಷದ ಪುರುಷನನ್ನು ಮದುವೆಯಾದ 81 ವರ್ಷ ವಯಸ್ಸಿನ ಅಜ್ಜಿ!

ಈಜಿಪ್ಟ್​ನ ಮೊಹಮದ್ ಅಹ್ಮದ್​ ಇಬ್ರಾಹಿಂ (35) ಇಂಗ್ಲೆಂಡ್ ಅಜ್ಜಿ ಐರಿಸ್ ಜಾನ್ಸ್​ (81) ನಡುವೆ ವಿವಾಹ ಏರ್ಪಟ್ಟಿದೆ. ಇಬ್ಬರ ನಡುವಿನ ವುಯಸ್ಸಿನ ಅಂತರ ಬರೋಬ್ಬರಿ 45 ವರ್ಷ.

ಫೇಸ್​ಬುಕ್​ ಪರಿಚಯ: 35 ವರ್ಷದ ಪುರುಷನನ್ನು ಮದುವೆಯಾದ 81 ವರ್ಷ ವಯಸ್ಸಿನ ಅಜ್ಜಿ!
ಮದುವೆಯಾದ ದಂಪತಿ
Rajesh Duggumane

|

Jan 07, 2021 | 6:12 PM

ಪ್ರೀತಿ ಕುರುಡು ಅನ್ನೋ ಮಾತಿದೆ. ಈ ವಿಚಾರ ಈಗ ಮತ್ತೊಮ್ಮೆ ಸಾಬೀತಾಗಿದೆ. 81 ವರ್ಷದ ಅಜ್ಜಿ 35 ವರ್ಷದ ಪುರುಷನನ್ನು ಮದುವೆ ಆಗಿದ್ದಾರೆ! ವಿಚಿತ್ರ ಎಂದರೆ, ಇಬ್ಬರ ನಡುವೆ ಪರಿಚಯವಾಗಲು ಕಾರಣ ಫೇಸ್​ಬುಕ್​.

ಈಜಿಪ್ಟ್​ನ ಮೊಹಮದ್ ಅಹ್ಮದ್​ ಇಬ್ರಾಹಿಂ (35) ಮತ್ತು ಇಂಗ್ಲೆಂಡ್ ಅಜ್ಜಿ ಐರಿಸ್ ಜಾನ್ಸ್​ (81) ನಡುವೆ ವಿವಾಹ ನಡೆದಿದೆ. ಇಬ್ಬರ ನಡುವಿನ ವುಯಸ್ಸಿನ ಅಂತರ ಬರೋಬ್ಬರಿ 45 ವರ್ಷ. ಮೊಹಮದ್​ ಈಜಿಪ್ಟ್​ನಲ್ಲಿ ವಾಸವಾಗಿದ್ದಾರೆ. ಐರಿಸ್​ ಮೊಹಮದ್​ಗೆ ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದರು. ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಕೂಡ ಬಂದಿದ್ದರು. ಆದರೆ, ಮೊಹಮದ್​ಗೆ ವೀಸಾ ಸಿಕ್ಕಿರಲಿಲ್ಲ.

ಹೀಗಾಗಿ, ಐರಿಸ್​​ ವೀಸಾ ಪಡೆದು ಈಜಿಪ್ಟ್​ಗೆ ಬಂದಿದ್ದರು. ಇಬ್ಬರೂ ಈಜಿಪ್ಟ್​ನಲ್ಲಿ ಸರಳವಾಗಿ ಮದುವೆ ಆಗಿದ್ದಾರೆ. ನನಗೆ ಪದೇ ಪದೇ ಈಜಿಪ್ಟ್​ಗೆ ತೆರಳಲು ಸಾಧ್ಯವಾಗುವುದಿಲ್ಲ. ಅಲ್ಲಿ ತುಂಬಾನೇ ಟ್ರಾಫಿಕ್​ ಮತ್ತು ಅಲ್ಲಿಯ ಹವಾಮಾನ ಚೆನ್ನಾಗಿಲ್ಲ. ಹೀಗಾಗಿ, ಇಂಗ್ಲೆಂಡ್​ಗೆ ಬರುವಂತೆ ನಾನೇ ಹೇಳಿದ್ದೇನೆ. ವೀಸಾ ಸಿಗುವವರೆಗೆ ನಮಗೆ ನೆಮ್ಮದಿ ಇಲ್ಲ ಎಂದಿದ್ದಾರೆ ಐರಿಸ್.

ನನ್ನ ಕೊನೆ ಉಸಿರು ಇರುವರೆಗೂ ಐರಿಸ್​ ಅವರನ್ನು ಬಿಟ್ಟಿರುವುದಿಲ್ಲ ಎಂದಿದ್ದಾರೆ ಮೊಹಮದ್​. ಇದನ್ನು ಅನೇಕರು ಟ್ರೋಲ್​ ಮಾಡಿದ್ದಾರೆ. ಅವಳು ಇನ್ನು, ಕೆಲವೇ ವರ್ಷ ಮಾತ್ರ ಬದುಕಿರುವುದು. ನೀನು ಬಿಡದಿದ್ದರೂ ಅವರೇ ಹೋಗುತ್ತಾರೆ ಎಂದು ಅವರ ಟೀಕಿಸಿದ್ದಾರೆ. ಇನ್ನು ಕೆಲವರು ಪ್ರೀತಿಯನ್ನು ಕೊಂಡಾಡಿದ್ದಾರೆ.

ಪ್ರೀತಿಸಿ ಮದುವೆಯಾದ ಪತ್ನಿಗೆ ವರದಕ್ಷಿಣೆ ಕಿರುಕುಳ.. 3ನೆ ಮಹಡಿಯಿಂದ ನೂಕಿ ಕೊಲೆಗೈದೇಬಿಟ್ಟ ಪಾಪಿ ಪತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada