ಕ್ಯಾಪಿಟಲ್ ಬಿಲ್ಡಿಂಗ್ ಘರ್ಷಣೆ: ಟ್ರಂಪ್ ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳು ಬಂದ್
ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದ ಟ್ವೀಟ್‌ಗಳನ್ನು ಟ್ವಿಟ್ಟರ್ ಸಂಸ್ಥೆ ಡಿಲೀಟ್ ಮಾಡಿದೆ. ಅಲ್ಲದೆ 12 ಗಂಟೆಗಳ ಕಾಲ ಟ್ರಂಪ್ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಿದೆ. ಹಾಗೂ ಫೇಸ್‌ಬುಕ್ ಖಾತೆ, ಇನ್‌ಸ್ಟಾಗ್ರಾಂ ಖಾತೆ ಕೂಡ 24 ಗಂಟೆಗಳ ಕಾಲ ಬಂದ್ ಮಾಡಲಾಗಿದೆ.
ಅಮೆರಿಕದ ಕ್ಯಾಪಿಟಲ್ ಬಿಲ್ಡಿಂಗ್‌ನಲ್ಲಿ ಘರ್ಷಣೆ ಹಿನ್ನೆಲೆಯಲ್ಲಿ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದ ಟ್ವೀಟ್‌ಗಳನ್ನು ಟ್ವಿಟ್ಟರ್ ಸಂಸ್ಥೆ ಡಿಲೀಟ್ ಮಾಡಿದೆ. ಅಲ್ಲದೆ 12 ಗಂಟೆಗಳ ಕಾಲ ಟ್ರಂಪ್ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಿದ್ದು ಫೇಸ್‌ಬುಕ್ ಖಾತೆ ಕೂಡ ಲಾಕ್ ಆಗಿದೆ.
ಅಮೆರಿಕದ ಕ್ಯಾಪಿಟಲ್ ಬಿಲ್ಡಿಂಗ್‌ನಲ್ಲಿ ಘರ್ಷಣೆ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್, ಸಂಯಮ, ಶಾಂತಿಯುತವಾಗಿ ಇರಬೇಕು. ನನ್ನ ಬೆಂಬಲಿಗರು ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಟ್ವೀಟ್ ಮಾಡಿದ್ದರು. ಆದ್ರೆ ಟ್ವಿಟ್ಟರ್ ಸಂಸ್ಥೆ, ಟ್ರಂಪ್ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾಡಿದ್ದ ಟ್ವೀಟ್‌ಗಳನ್ನು ಡಿಲೀಟ್ ಮಾಡಿದೆ.
2 ಟ್ವೀಟ್ ಮತ್ತು ವಿಡಿಯೋವನ್ನು ಡಿಲೀಟ್ ಮಾಡಿದೆ. ಜೊತೆಗೆ ನಿಯಮಗಳನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 12 ಗಂಟೆಗಳ ಕಾಲ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಿದೆ. ಇನ್ನು ಆಕ್ಷೇಪಾರ್ಹ ಸಂದೇಶ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಫೇಸ್‌ಬುಕ್ ಖಾತೆ, ಇನ್‌ಸ್ಟಾಗ್ರಾಂ ಖಾತೆ ಕೂಡ 24 ಗಂಟೆಗಳ ಕಾಲ ಬಂದ್ ಮಾಡಲಾಗಿದೆ.
ಘಟನೆ ಹಿನ್ನೆಲೆ: ಚುನಾವಣೆ ಫಲಿತಾಂಶ ದೃಢೀಕರಣ ವೇಳೆ ಅಮೆರಿಕದ ಕ್ಯಾಪಿಟಲ್ ಬಿಲ್ಡಿಂಗ್‌ನಲ್ಲಿ ಘರ್ಷಣೆ ಉಂಟಾಗಿ ಫೈರಿಂಗ್ ನಡೆದಿತ್ತು. ಫೈರಿಂಗ್‌ನಲ್ಲಿ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾಳೆ.
ಅಮೆರಿಕ ಕಾಂಗ್ರೆಸ್‌ನಿಂದ ಫಲಿತಾಂಶ ದೃಢೀಕರಣ ಈ ವೇಳೆ ಜೋ ಬೈಡನ್ ಆಯ್ಕೆ ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಆಗ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಬಿಲ್ಡಿಂಗ್‌ಗೆ ನುಗ್ಗಿದ್ದರು. ಈ ವೇಳೆ ಟ್ರಂಪ್ ಬೆಂಬಲಿಗರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಉಂಟಾಗಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಫೈರಿಂಗ್‌ನಲ್ಲಿ ಮಹಿಳೆ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Published On - 7:39 am, Thu, 7 January 21