ಮಹಾಲಕ್ಷ್ಮೀ ಲೇಔಟ್​ನಲ್ಲಿ BBMP ಗುತ್ತಿಗೆದಾರ ಆತ್ಮಹತ್ಯೆ

ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್​ನಲ್ಲಿ ನಡೆದಿದೆ.

ಮಹಾಲಕ್ಷ್ಮೀ ಲೇಔಟ್​ನಲ್ಲಿ BBMP ಗುತ್ತಿಗೆದಾರ ಆತ್ಮಹತ್ಯೆ
ಬಿಬಿಎಂಪಿ ಮುಖ್ಯ ಕಚೇರಿ
Follow us
ಆಯೇಷಾ ಬಾನು
|

Updated on:Jan 07, 2021 | 2:37 PM

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್​ನ ರಾಜ್ ಕುಮಾರ್ ಒಳಾಂಗಣ ಕ್ರೀಡಾಂಗಣದ ಬಳಿ ಇರುವ ಬಿಬಿಎಂಪಿಗೆ ಸೇರಿದ ಬಿಲ್ಡಿಂಗ್​ನ ಮೊದಲನೇ ಮಹಡಿಯ ರೂಂನಲ್ಲಿ ನಡೆದಿದೆ. ಕೃಷ್ಣರಾಜ್ (61) ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೃಷ್ಣರಾಜ್, ಯಾರು ಇಲ್ಲದ ವೇಳೆ ತಮ್ಮ ಬಳಿ ಇದ್ದ ಕೀಯಿಂದ ರೂಂ ಓಪನ್ ಬಳಿಕ ಒಳಗಡೆಯಿಂದ ರೂಂ ಲಾಕ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಗಂಟೆಗಳ ಬಳಿಕ ಸಂಜೆ 6 ಗಂಟೆಯ ನಂತರ ಸೆಕ್ಯೂರಿಟಿ ರೂಂ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ರೂಂ ಒಳಗಡೆಯ ಕಬ್ಬಿಣದ ಗ್ರಿಲ್ ಕಿಟಕಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಕೃಷ್ಣರಾಜ್ ವೈಯಾಲಿಕಾವಲ್​ನ ನಿವಾಸಿ. ಬಿಬಿಎಂಪಿ ವತಿಯಿಂದ ಕಾಮಗಾರಿ ಬಾಕಿ ಬಿಲ್​ ಬಾರದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಮಾತು ಕೇಳಿ ಬಂದಿದೆ. ಆದ್ರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸೋಂಕಿತರ ಚಿಕಿತ್ಸೆಗೆ ವೈದ್ಯರನ್ನು ಕೊಡದಿದ್ರೆ ಆತ್ಮಹತ್ಯೆ: ಕಾರ್ಪೋರೇಟರ್‌ ಬೆದರಿಕೆ

Published On - 2:19 pm, Thu, 7 January 21