ಇಲ್ಲಿಯವರೆಗೂ ಸತ್ತಂತೆ ಇದ್ದೆ, ಈ ತೀರ್ಪು ಉಸಿರಾಡುವಂತೆ ಮಾಡಿದೆ: ಆ್ಯಸಿಡ್ ದಾಳಿ ಸಂತ್ರಸ್ತೆ

| Updated By: guruganesh bhat

Updated on: Jul 15, 2021 | 4:15 PM

ಗಣೇಶ್, ಕಬೀರ್, ವಿನೋದ್, ಅಬ್ದುಲ್ ಮಜೀದ್‌ಗೆ ಶಿಕ್ಷೆ ವಿಧಿಸಿ ಚಿಕ್ಕಮಗಳೂರಿನ 2ನೇ ಜೆಎಂಎಫ್‌ಸಿ ಕೋರ್ಟ್‌ ತೀರ್ಪು ನೀಡಿದೆ. ನ್ಯಾಯಾಧೀಶ ಮಂಜುನಾಥ್ ಸಂಗ್ರೇಶಿ ಈ ಶಿಕ್ಷೆ ಪ್ರಕಟಿಸಿದ್ದಾರೆ. 6 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ತೀರ್ಪು ಪ್ರಕಟವಾಗಿದೆ.

ಇಲ್ಲಿಯವರೆಗೂ ಸತ್ತಂತೆ ಇದ್ದೆ, ಈ ತೀರ್ಪು ಉಸಿರಾಡುವಂತೆ ಮಾಡಿದೆ: ಆ್ಯಸಿಡ್ ದಾಳಿ ಸಂತ್ರಸ್ತೆ
ಪ್ರಾತಿನಿಧಿಕ ಚಿತ್ರ
Follow us on

ಚಿಕ್ಕಮಗಳೂರು: ಮೆಣಸೆಯಲ್ಲಿ ಮಹಿಳೆ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ₹20 ಲಕ್ಷ ದಂಡ ಹಾಕಲಾಗಿದೆ. ತೀರ್ಪು ಪ್ರಕಟಗೊಂಡ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂತ್ರಸ್ತೆ ಸುಮನಾ, ಈ ತೀರ್ಪು ನನಗೆ ಉಸಿರಾಡುವ ಹಾಗೆ ಆಗಿದೆ. ಇಲ್ಲಿಯವರೆಗೆ ನಾನು ಸತ್ತಂಗೆ ಇದ್ದೆ, ಸದ್ಯ ನನಗೆ ತೃಪ್ತಿ ಸಿಕ್ಕಿದೆ. ಸುಧೀರ್ ಹೆಗಡೆ ಸರ್ ತುಂಬಾನೇ ಸಹಕಾರ ಮಾಡಿದರು. ಸ್ವಂತ ಅಣ್ಣ-ತಮ್ಮ ಇದ್ದಿದ್ರೂ ಹೆಲ್ಪ್ ಮಾಡುತ್ತಿರಲಿಲ್ಲ. ನನಗೆ ಸರ್ಕಾರಿ ಉದ್ಯೋಗ ಸಿಕ್ಕಿದರೆ ಮಗನನ್ನು ಸಾಕಲು ಸಹಾಯವಾಗುತ್ತದೆ’ ಎಂದು ಚಿಕ್ಕಮಗಳೂರಿನಲ್ಲಿ ಸಂತ್ರಸ್ತೆ ಸುಮನಾ ಮನವಿ ಮಾಡಿದ್ದಾರೆ.

ಗಣೇಶ್, ಕಬೀರ್, ವಿನೋದ್, ಅಬ್ದುಲ್ ಮಜೀದ್‌ಗೆ ಶಿಕ್ಷೆ ವಿಧಿಸಿ ಚಿಕ್ಕಮಗಳೂರಿನ 2ನೇ ಜೆಎಂಎಫ್‌ಸಿ ಕೋರ್ಟ್‌ ತೀರ್ಪು ನೀಡಿದೆ. ನ್ಯಾಯಾಧೀಶ ಮಂಜುನಾಥ್ ಸಂಗ್ರೇಶಿ ಈ ಶಿಕ್ಷೆ ಪ್ರಕಟಿಸಿದ್ದಾರೆ. 6 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ತೀರ್ಪು ಪ್ರಕಟವಾಗಿದೆ.

ಘಟನೆ ವಿವರ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ 2015ರ ಏಪ್ರಿಲ್ 18ರಂದು ಬ್ಯೂಟಿ ಪಾರ್ಲರ್ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಸುಮನಾ ಎಂಬ ಮಹಿಳೆ ಮೇಲೆ ಗಣೇಶ್ ಹಾಗೂ ಸಹಚರರು ಆಸಿಡ್ ದಾಳಿ ನಡೆಸಿದ್ದರು. ಸದ್ಯ ಈಗ ಈ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಗಣೇಶ್ ಎಂಬಾತ ಮದುವೆಯಾಗುವಂತೆ ವಿಚ್ಚೇದಿತ ಮಹಿಳೆ ಸುಮನಾಳ ಹಿಂದೆ ಬಿದ್ದಿದ್ದ. ಇವರಿಬ್ಬರೂ ಒಂದೇ ಗ್ರಾಮದ ನಿವಾಸಿಗಳಾಗಿದ್ದ ಕಾರಣ ಇವರಿಗೆ ಪರಿಚಯವಿತ್ತು. ಮಹಿಳೆ ಮದುವೆಯಾಗಲು ತಿರಸ್ಕರಿದಕ್ಕೆ ಗಣೇಶ ಆಕೆಗೆ ಬೆದರಿಕೆ ಹಾಕಿದ್ದ. ಗಣೇಶನ ಯಾವ ಬೆದರಿಕೆಗೂ ಮಹಿಳೆ ಬಗ್ಗಲಿಲ್ಲ ಎಂದು ಗಣೇಶ ತನ್ನ ಸ್ನೇಹಿತರ ಜೊತೆ ಸೇರಿ ಆ್ಯಸಿಡ್ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.

ಏಪ್ರಿಲ್ 18ರ ರಾತ್ರಿ ಮಹಿಳೆ ಬ್ಯೂಟಿ ಪಾರ್ಲರ್ ಕೆಲಸ ಮುಗಿಸಿ ಮನೆಗೆ ಮರಳುತ್ತಿರುವಾಗ ಹಿಂದಿನಿಂದ ಬೈಕ್ನಲ್ಲಿ ಬಂದ ಆರೋಪಿಗಳು ವಿಳಾಸ ಕೇಳುವ ಸೋಗಿನಲ್ಲಿ ಮಹಿಳೆಯನ್ನು ಮಾತನಾಡಿಸಿ ಆ್ಯಸಿಡ್ ಎರಚಿ ಪರಾರಿಯಾಗಿದ್ದರು. ಆ್ಯಸಿಡ್ ದಾಳಿಯಲ್ಲಿ ಮಹಿಳೆಯ ಬಲಗಣ್ಣು ಪೂರ್ಣ ಸುಟ್ಟಿದ್ದು ಎಡಗಣ್ಣು ಭಾಗಶಃ ಹಾನಿಯಾಗಿದೆ. ಮೈ ಕೈ ಕಾಲು ಸುಟ್ಟಿದೆ. ಈ ಸಂಬಂಧ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: 

ಶೃಂಗೇರಿಯ ಆ್ಯಸಿಡ್ ದಾಳಿ ಪ್ರಕರಣದ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, 6 ವರ್ಷದ ಪ್ರಕರಣಕ್ಕೆ ಇಂದು ತೀರ್ಪು

Karnataka Rain: ಬೆಂಗಳೂರಲ್ಲಿ ಮುಂದಿನ 2 ದಿನ, ಉತ್ತರ ಒಳನಾಡು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಜುಲೈ 19ರವರೆಗೆ ಭರ್ಜರಿ ಮಳೆಯಾಗುವ ಸಾಧ್ಯತೆ

(life imprisonment sentence to Sringeri beauty parlour acid attack case victim says verdict made me breathe for me to be dead so far)

Published On - 4:10 pm, Thu, 15 July 21