ಶೃಂಗೇರಿಯ ಆ್ಯಸಿಡ್ ದಾಳಿ ಪ್ರಕರಣದ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, 6 ವರ್ಷದ ಪ್ರಕರಣಕ್ಕೆ ಇಂದು ತೀರ್ಪು
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ 2015ರ ಏಪ್ರಿಲ್ 18ರಂದು ಬ್ಯೂಟಿ ಪಾರ್ಲರ್ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಸುಮನಾ ಎಂಬ ಮಹಿಳೆ ಮೇಲೆ ಗಣೇಶ್ ಹಾಗೂ ಸಹಚರರು ಆಸಿಡ್ ದಾಳಿ ನಡೆಸಿದ್ದರು. ಸದ್ಯ ಈಗ ಈ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಚಿಕ್ಕಮಗಳೂರು: ಮೆಣಸೆಯಲ್ಲಿ ಮಹಿಳೆ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ₹20 ಲಕ್ಷ ದಂಡ ಹಾಕಲಾಗಿದೆ. ಗಣೇಶ್, ಕಬೀರ್, ವಿನೋದ್, ಅಬ್ದುಲ್ ಮಜೀದ್‌ಗೆ ಶಿಕ್ಷೆ ವಿಧಿಸಿ ಚಿಕ್ಕಮಗಳೂರಿನ 2ನೇ ಜೆಎಂಎಫ್‌ಸಿ ಕೋರ್ಟ್ ತೀರ್ಪು ನೀಡಿದೆ. ನ್ಯಾಯಾಧೀಶ ಮಂಜುನಾಥ್ ಸಂಗ್ರೇಶಿ ಈ ಶಿಕ್ಷೆ ಪ್ರಕಟಿಸಿದ್ದಾರೆ. 6 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ತೀರ್ಪು ಪ್ರಕಟವಾಗಿದೆ.
ಘಟನೆ ವಿವರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ 2015ರ ಏಪ್ರಿಲ್ 18ರಂದು ಬ್ಯೂಟಿ ಪಾರ್ಲರ್ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಸುಮನಾ ಎಂಬ ಮಹಿಳೆ ಮೇಲೆ ಗಣೇಶ್ ಹಾಗೂ ಸಹಚರರು ಆಸಿಡ್ ದಾಳಿ ನಡೆಸಿದ್ದರು. ಸದ್ಯ ಈಗ ಈ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಗಣೇಶ್ ಎಂಬಾತ ಮದುವೆಯಾಗುವಂತೆ ವಿಚ್ಚೇದಿತ ಮಹಿಳೆ ಸುಮನಾಳ ಹಿಂದೆ ಬಿದ್ದಿದ್ದ. ಇವರಿಬ್ಬರೂ ಒಂದೇ ಗ್ರಾಮದ ನಿವಾಸಿಗಳಾಗಿದ್ದ ಕಾರಣ ಇವರಿಗೆ ಪರಿಚಯವಿತ್ತು. ಮಹಿಳೆ ಮದುವೆಯಾಗಲು ತಿರಸ್ಕರಿದಕ್ಕೆ ಗಣೇಶ ಆಕೆಗೆ ಬೆದರಿಕೆ ಹಾಕಿದ್ದ. ಗಣೇಶನ ಯಾವ ಬೆದರಿಕೆಗೂ ಮಹಿಳೆ ಬಗ್ಗಲಿಲ್ಲ ಎಂದು ಗಣೇಶ ತನ್ನ ಸ್ನೇಹಿತರ ಜೊತೆ ಸೇರಿ ಆ್ಯಸಿಡ್ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.
ಏಪ್ರಿಲ್ 18ರ ರಾತ್ರಿ ಮಹಿಳೆ ಬ್ಯೂಟಿ ಪಾರ್ಲರ್ ಕೆಲಸ ಮುಗಿಸಿ ಮನೆಗೆ ಮರಳುತ್ತಿರುವಾಗ ಹಿಂದಿನಿಂದ ಬೈಕ್ನಲ್ಲಿ ಬಂದ ಆರೋಪಿಗಳು ವಿಳಾಸ ಕೇಳುವ ಸೋಗಿನಲ್ಲಿ ಮಹಿಳೆಯನ್ನು ಮಾತನಾಡಿಸಿ ಆ್ಯಸಿಡ್ ಎರಸಿ ಪರಾರಿಯಾಗಿದ್ದರು. ಆ್ಯಸಿಡ್ ದಾಳಿಯಲ್ಲಿ ಮಹಿಳೆಯ ಬಲಗಣ್ಣು ಪೂರ್ಣ ಸುಟ್ಟಿದ್ದು ಎಡಗಣ್ಣು ಭಾಗಶಃ ಹಾನಿಯಾಗಿದೆ. ಮೈ ಕೈ ಕಾಲು ಸುಟ್ಟಿದೆ. ಈ ಸಂಬಂಧ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಆ್ಯಸಿಡ್ ದಾಳಿಯಿಂದ ಕಂಗನಾ ಅಕ್ಕನ ಮುಖಕ್ಕೆ 53 ಸರ್ಜರಿ; ಕಡೆಗೂ ಯೋಗದಿಂದ ನಡೆದಿದ್ದು ಮ್ಯಾಜಿಕ್