Mekedatu Project: ಮೇಕೆದಾಟು ಯೋಜನೆಗೆ ಆಗ್ರಹಿಸಿ ಮೇಕೆದಾಟುವಿನಿಂದ ವಿಧಾನಸೌಧದವರೆಗೆ ಪಾದಯಾತ್ರೆ

ರಾಮನಗರ ಜಿಲ್ಲೆ ಮೇಕೆದಾಟು ಬಳಿ ಕರ್ನಾಟಕ ಸರ್ಕಾರ ಡ್ಯಾಂ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು, ಮೇಕೆದಾಟು ಡ್ಯಾಂ ನಿರ್ಮಿಸಲು ಅವಕಾಶ ನೀಡದಿರುವಂತೆ ಸರ್ವಪಕ್ಷಗಳ ನಿರ್ಣಯ ಕೈಗೊಂಡಿದೆ.

Mekedatu Project: ಮೇಕೆದಾಟು ಯೋಜನೆಗೆ ಆಗ್ರಹಿಸಿ ಮೇಕೆದಾಟುವಿನಿಂದ ವಿಧಾನಸೌಧದವರೆಗೆ ಪಾದಯಾತ್ರೆ
ವಿಧಾನಸೌಧ
Follow us
TV9 Web
| Updated By: guruganesh bhat

Updated on:Jul 15, 2021 | 3:33 PM

ರಾಮನಗರ: ಮೇಕೆದಾಟು ಡ್ಯಾಂ ಯೋಜನೆಗಾಗಿ ಮೇಕೆದಾಟುನಿಂದ ಬೆಂಗಳೂರಿನ ವಿಧಾನಸೌಧದವರೆಗೆ ಅಗಸ್ಟ್ 3ರಿಂದ 7ರವರೆಗೆ ಪಾದಯಾತ್ರೆ ನಡೆಸುವುದಾಗಿ ರಾಜ್ಯ ಮೇಕೆದಾಟು ಹೋರಾಟ ಸಮಿತಿ ಘೋಷಿಸಿದೆ. ಐದು ದಿನಗಳ ಪಾದಯಾತ್ರೆಯಲ್ಲಿ ಸಾವಿರಾರು ರೈತರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದು, ಹೋರಾಟ ಸಮಿತಿ ಪಾದಯಾತ್ರೆಯನ್ನು ಆಯೋಜಿಸಲಿದೆ. ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಂಘದ ಪ್ರಮುಖರಾದ ಸಂಪತ್ ಕುಮಾರ್, ಜಿ ಜಿ ಹಳ್ಳಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಮೇಕೆದಾಟು ಯೋಜನೆ (Mekedatu Project)  ಮುನ್ನೆಲೆಗೆ ಬಂದಿದೆ. ರಾಮನಗರ ಜಿಲ್ಲೆ ಮೇಕೆದಾಟು ಬಳಿ ಕರ್ನಾಟಕ ಸರ್ಕಾರ ಡ್ಯಾಂ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು, ಮೇಕೆದಾಟು ಡ್ಯಾಂ ನಿರ್ಮಿಸಲು ಅವಕಾಶ ನೀಡದಿರುವಂತೆ ಸರ್ವಪಕ್ಷಗಳ ನಿರ್ಣಯ ಕೈಗೊಂಡಿದೆ. ಈ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಿದೆ.  ಈ ಬಗ್ಗೆ ಮಾತನಾಡಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಕೆದಾಟು ಯೋಜನೆ ಕಾಮಗಾರಿಯನ್ನು ಮಾಡುತ್ತೇವೆ. ಡಿಪಿಆರ್ ವರದಿ ಸಿಡಬ್ಲ್ಯುಸಿ ಮುಂದೆ ಮಂಡಿಸಲಾಗುತ್ತದೆ. ತಮಿಳುನಾಡಿನ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದಿದ್ದಾರೆ.

ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜತೆ ಚರ್ಚಿಸಿದ್ದೇವೆ. ಮೇಕೆದಾಟು, ಎತ್ತಿನಹೊಳೆ ಯೋಜನೆ ಬಗ್ಗೆಯೂ ಚರ್ಚೆ ನಡೆದಿದೆ. ಮೇಕೆದಾಟು ಯೋಜನೆ ಕಾಮಗಾರಿಯನ್ನು ಮಾಡುತ್ತೇವೆ. ಡಿಪಿಆರ್ ವರದಿ ಸಿಡಬ್ಲ್ಯುಸಿ ಮುಂದೆ ಮಂಡಿಸಲಾಗುತ್ತದೆ. ತಮಿಳುನಾಡಿನ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಎಲ್ಲ ಯೋಜನೆಗಳ ಕಾಮಗಾರಿಯನ್ನು ಮುಗಿಸುತ್ತೇವೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತೆ. ಪ್ರತಿ ಮನೆಗೂ ನಲ್ಲಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಹೇಳಿದರು.

ತಮಿಳುನಾಡು ಈ‌ ವಿಚಾರದಲ್ಲಿ ಕ್ಯಾತೆ ತೆಗೆಯಬಾರದು ಇನ್ನು ಇದೇ ವಿಚಾರವಾಗಿ ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿ, ಮೇಕೆದಾಟು ನಮ್ಮ ರಾಜ್ಯದಲ್ಲಿ ನಡೆಯುವ ಯೋಜನೆ. ಇದಕ್ಕೆ ತಮಿಳುನಾಡು ಸರ್ಕಾರದ ಹಸ್ತಕ್ಷೇಪ ಸರಿಯಲ್ಲ ಎಂದಿದ್ದಾರೆ. ನಮ್ಮ ನೀರನ್ನು ನಾವು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ತಮಿಳುನಾಡು ಈ‌ ವಿಚಾರದಲ್ಲಿ ಕ್ಯಾತೆ ತೆಗೆಯಬಾರದು. ಈ ಯೋಜನೆಯಿಂದ ತಮಿಳುನಾಡಿಗೂ ಅನುಕೂಲವಾಗತ್ತೆ. ರಾಜ್ಯ ಸರ್ಕಾರ ಸರ್ವಪಕ್ಷಗಳ ಮಾಜಿ ಸಿಎಂಗಳು. ಮಾಜಿ ಜಲ ಸಂಪನ್ಮೂಲ ಸಚಿವರ ಸಭೆ ಕರೆದು ಚರ್ಚಿಸಲಿ. ಅವರ ಅಭಿಪ್ರಾಯವನ್ನು ಪಡೆಯಬೇಕು. ಯೋಜನೆಯ ಜಾರಿಗೆ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದರು.

ಇದನ್ನೂ ಓದಿ:

ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ಮತ್ತೊಂದು ವಿಘ್ನ; ಈ ಬಾರಿ ಪುದುಚೇರಿಯಿಂದ ಅಡ್ಡಗಾಲು! ಯಾಕಂತೆ? 

Mekedatu Project: ಮೇಕೆದಾಟು ವಿವಾದ: ತಮಿಳುನಾಡು ಸಿಎಂ ಸ್ಟಾಲಿನ್​ಗೆ ಅನಗತ್ಯ ಪತ್ರ ಬರೆದು ವಿವಾದಕ್ಕೆ‌ ತುಪ್ಪ ಸುರಿದ ಸಿಎಂ ಯಡಿಯೂರಪ್ಪ

(Mekedatu Project in Ramanagara demand hiking to Vidhana Soudha by Farmers)

Published On - 3:25 pm, Thu, 15 July 21