Karnataka Rain: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅಕ್ಟೋಬರ್ 9ರವರೆಗೆ ಮಳೆ

|

Updated on: Oct 03, 2023 | 7:29 AM

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅಕ್ಟೋಬರ್ 9ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಲಿದ್ದು, ನಿರಂತರವಾಗಿ ಮಳೆಯಾಗಲಿದೆ. ಇನ್ನು ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ರಾಯಚೂರು, ಯಾದಗಿರಿಯಲ್ಲಿ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಅಕ್ಟೋಬರ್ 6ರವರೆಗೆ ಮಳೆಯಾಗಲಿದ್ದು, ಬಳಿಕ ಮಳೆ ಕಡಿಮೆಯಾಗಲಿದೆ.

Karnataka Rain: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅಕ್ಟೋಬರ್ 9ರವರೆಗೆ ಮಳೆ
ಮಳೆ
Image Credit source: English Jagaran
Follow us on

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅಕ್ಟೋಬರ್ 9ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಲಿದ್ದು, ನಿರಂತರವಾಗಿ ಮಳೆಯಾಗಲಿದೆ. ಇನ್ನು ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ರಾಯಚೂರು, ಯಾದಗಿರಿಯಲ್ಲಿ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಅಕ್ಟೋಬರ್ 6ರವರೆಗೆ ಮಳೆಯಾಗಲಿದ್ದು, ಬಳಿಕ ಮಳೆ ಕಡಿಮೆಯಾಗಲಿದೆ.

ಕ್ಯಾಸಲ್​ರಾಕ್, ಔರಾದ್, ಖಜೂರಿ, ಭಾಗಮಂಡಲ, ಪೊನ್ನಂಪೇಟೆ, ಮಂಕಿ, ಮಂಚಿಕೆರೆ, ಕದ್ರಾ, ಹುಮನಾಬಾದ್, ಬೆಳ್ತಂಗಡಿ, ಗೇರುಸೊಪ್ಪ, ಸಿದ್ದಾಪುರ, ಹೊನ್ನಾವರ, ಸಿದ್ದಾಪುರ, ಲೋಂಡಾ, ಮಂಠಾಳ, ರಬಕವಿ, ಲಿಂಗನಮಕ್ಕಿ, ಜಯಪುರ, ಶೃಂಗೇರಿ, ವಿರಾಜಪೇಟೆ, ಯಲ್ಲಾಪುರ, ಶಿರಾಲಿ, ಕುಮಟಾ, ಉಪ್ಪಿನಂಗಡಿ, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಅಥಣಿ, ರಾಯಭಾಗ, ಚಿಕ್ಕೋಡಿ, ಸಂಕೇಶ್ವರ, ಕಲಬುರಗಿ, ಮಹಾಲಿಂಗಪುರ, ಧಾರವಾಡ, ಸಕಲೇಶಪುರ, ಹುಂಚದಕಟ್ಟೆ, ತಾಳಗುಪ್ಪ, ತ್ಯಾಗರ್ತಿ, ಕಮ್ಮರಡಿ, ಮೂರ್ನಾಡುವಿನಲ್ಲಿ ಮಳೆಯಾಗಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶ 32.0 ಡಿಗ್ರಿ ಸೆಲ್ಸಿಯಸ್​ ಮೈಸೂರಿನಲ್ಲಿ ದಾಖಲಾಗಿದೆ, ಅತಿ ಕನಿಷ್ಠ ಉಷ್ಣಾಂಶ 14.2 ಡಿಗ್ರಿ ಸೆಲ್ಸಿಯಸ್​ ಬಾಗಲಕೋಟೆಯಲ್ಲಿ ದಾಖಲಾಗಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ.

ಮತ್ತಷ್ಟು ಓದಿ: Karnataka Rain: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಈ 7 ಜಿಲ್ಲೆಗಳಲ್ಲಿ ಮಳೆ ಜೋರು, ಯೆಲ್ಲೋ ಅಲರ್ಟ್​ ಘೋಷಣೆ

ಬೆಂಗಳೂರಿನ ಹವಾಮಾನವನ್ನು ಹೀಗೇ ಎಂದು ಅಂದಾಜಿಸಲು ಸಾಧ್ಯವಾಗುತ್ತಿಲ್ಲ, ಸ್ವಲ್ಪ ಸಮಯ ಮೋಡವಿದ್ದರೆ, ಬಳಿಕ ಬಿಸಿಲು, ನಂತರ ಮಳೆ, ಕೊಂಚ ಚಳಿ, ಕೊಂಚ ಸೆಕೆ ಹೀಗೆ ವಾತಾವರಣ ಬದಲಾಗುತ್ತಲೇ ಇದೆ.

ಎಚ್​ಎಎಲ್​ನಲ್ಲಿ 29.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.3 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 30.3 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ