AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Liquor Price in Karnataka: ಮದ್ಯ ಪ್ರಿಯರಿಗೆ ಬಿಗ್ ಶಾಕ್, ಕರ್ನಾಟಕದಲ್ಲಿ ಅಬಕಾರಿ ತೆರಿಗೆ ಹೆಚ್ಚಳ

Excise Duty on Liquor Hike: ನೂತಕ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್​ನಲ್ಲಿ ಅಬಕಾರಿ ತೆರಿಗೆ ಹೆಚ್ಚಿಸಿದೆ. ಇದರಿಂದ ಎಣ್ಣೆ ಪ್ರಿಯರ ಜೇಬಿಗೆ ಕತ್ತರಿ ಬೀಳಲಿದೆ.

Liquor Price in Karnataka: ಮದ್ಯ ಪ್ರಿಯರಿಗೆ ಬಿಗ್ ಶಾಕ್, ಕರ್ನಾಟಕದಲ್ಲಿ ಅಬಕಾರಿ ತೆರಿಗೆ ಹೆಚ್ಚಳ
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ
Pramod Shastri G
| Updated By: ರಮೇಶ್ ಬಿ. ಜವಳಗೇರಾ|

Updated on:Jul 07, 2023 | 1:04 PM

Share

ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿರುವ ಸಿಎಂ ಸಿದ್ದರಾಮಯ್ಯ, ಈ ಯೋಜನೆಗಳಿಗೆ ಹಣ ಹೊಂದಿಸಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ 14ನೇ ಬಜೆಟ್​ ಮಂಡನೆ ಬೆನ್ನಲ್ಲೇ ಅಬಕಾರಿ ತೆರಿಗೆ ಹೆಚ್ಚಳವಾಗಿದೆ. ಅಬಕಾರಿ ತೆರಿಗೆ(excise duty) ಶೇಕಡಾ 20ರಷ್ಟು ಹೆಚ್ಚಳವಾಗಿದೆ. ಇದರಿಂದ ವಿವಿಧ ಬ್ರ್ಯಾಂಡ್​ಗಳ ಮದ್ಯ (Liquor) ಬೆಲೆ ಹೆಚ್ಚಳವಾಗಲಿದೆ.  ಬಿಯರ್​ ಮೇಲಿನ ಅಬಕಾರಿ ಸುಂಕ ಶೇಕಡಾ 10ರಷ್ಟು ಹೆಚ್ಚಿಸಲಾಗಿದೆ.

ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ಅನುಬಂಧ (ಅ) ರಲ್ಲಿರುವಂತೆ ಹಾಲಿ ಇರುವ ದರಗಳ ಮೇಲೆ ಶೇ.20ರಷ್ಟು ಹೆಚ್ಚಿಸಲು ಪ್ರಸ್ತಾಪಿಸುತ್ತೇನೆ. ಹಾಗೆಯೇ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.175 ರಿಂದ ಶೇ.185ಕ್ಕೆ ಹೆಚ್ಚಿಸಲಾಗಿದೆ.

ಅಬಕಾರಿ ಸುಂಕದ ದರಗಳ ಹೆಚ್ಚಳದ ನಂತರವೂ ನಮ್ಮ ರಾಜ್ಯದಲ್ಲಿ ಮದ್ಯದ ದರವು ನೆರೆ ರಾಜ್ಯಗಳಿಗಿಂತ ಕಡಿಮೆ ಇರುತ್ತದೆ. ಇದರೊಂದಿಗೆ, ಹೆಚ್ಚು ಪರಿಣಾಮಕಾರಿಯಾದ ಜಾರಿ ಮತ್ತು ನಿಯಂತ್ರಣಾ ಕ್ರಮಗಳ ಮೂಲಕ 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 36,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಬಜೆಟ್​ನಲ್ಲಿ ತಿಳಿಸಿದರು.

Published On - 12:26 pm, Fri, 7 July 23

ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ
ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ
ನಾಡೆಲ್ಲಾರಿಂದ ಸುಂದರ್ ಪಿಚ್ಚೈವರೆಗೆ ಟ್ರಂಪ್ ಔತಣ ಕೂಟದಲ್ಲಿ ಯಾರ್ಯಾರಿದ್ರು?
ನಾಡೆಲ್ಲಾರಿಂದ ಸುಂದರ್ ಪಿಚ್ಚೈವರೆಗೆ ಟ್ರಂಪ್ ಔತಣ ಕೂಟದಲ್ಲಿ ಯಾರ್ಯಾರಿದ್ರು?
‘ಬಿಗ್ ಬಾಸ್ 12’ ಪ್ರೋಮೋ ಶೂಟ್ ಮೇಕಿಂಗ್ ವಿಡಿಯೋ​; ಸುದೀಪ್ ಗತ್ತೇ ಬೇರೆ
‘ಬಿಗ್ ಬಾಸ್ 12’ ಪ್ರೋಮೋ ಶೂಟ್ ಮೇಕಿಂಗ್ ವಿಡಿಯೋ​; ಸುದೀಪ್ ಗತ್ತೇ ಬೇರೆ
ಧರ್ಮಸ್ಥಳ‌ ವಿರುದ್ಧ ವಿಡಿಯೋ ಮಾಡಲು ಆಫರ್: ಮಂಡ್ಯ ಯೂಟ್ಯೂಬರ್ ಆರೋಪ
ಧರ್ಮಸ್ಥಳ‌ ವಿರುದ್ಧ ವಿಡಿಯೋ ಮಾಡಲು ಆಫರ್: ಮಂಡ್ಯ ಯೂಟ್ಯೂಬರ್ ಆರೋಪ
ಜೀವಂತ ಹಾವುಗಳನ್ನು ಕೈಯಲ್ಲಿ ಹಿಡಿದು ಕುಣಿಯುವ ಇದೆಂಥಾ ಹಬ್ಬ!
ಜೀವಂತ ಹಾವುಗಳನ್ನು ಕೈಯಲ್ಲಿ ಹಿಡಿದು ಕುಣಿಯುವ ಇದೆಂಥಾ ಹಬ್ಬ!
ಕ್ರಿಕೆಟ್ ಆಡುತ್ತಿದ್ದವರಿಗೆ ಕ್ವಾಟ್ಲೆ ಕೊಟ್ಟ ಮಂಗ: ದಿಕ್ಕಾಪಾಲಾದ ಯುವಕರು
ಕ್ರಿಕೆಟ್ ಆಡುತ್ತಿದ್ದವರಿಗೆ ಕ್ವಾಟ್ಲೆ ಕೊಟ್ಟ ಮಂಗ: ದಿಕ್ಕಾಪಾಲಾದ ಯುವಕರು