ನಿಯಮ ಪಾಲಿಸಿಲ್ಲ ಅಂತಾ ಲಿಕ್ಕರ್ ಶಾಪ್ ಬಂದ್

|

Updated on: May 04, 2020 | 11:29 AM

ಬೆಂಗಳೂರು: ಇಂದು ರಾಜ್ಯದ ಎಲ್ಲಾ ಮದ್ಯಪ್ರಿಯರಿಗೆ ಸುದಿನ. ಎಣ್ಣೆ ಇಲ್ಲದೆ ಊಟನೇ ಮಾಡೋಲ್ಲ ಎಂಬುವವರಿಗೆ ಇವತ್ತು ಹೊಟ್ಟೆ ತುಂಬುವಷ್ಟು ಕುಡಿದು ಕುಪ್ಪಳಿಸುವ ದಿನ. ರಾಜ್ಯ ಸರ್ಕಾರ ಆದೇಶದ ಮೇರೆಗೆ ಇಂದು ಕೆಲ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಎಲ್ಲಾ ಮದ್ಯಪ್ರಿಯರು ಬೆಳಗ್ಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಗೆ ಮುಂದಾಗಿದ್ದಾರೆ. ಆದರೆ ಮರಿಯಪ್ಪನಪಾಳ್ಯದ ನಿವಾಸಿಗಳಿಗೆ ಇದರ ಭಾಗ್ಯವಿಲ್ಲದಂತಾಗಿದೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕವಾದರೂ ನಮ್ಮ ಜನ ಎಣ್ಣೆ ಕುಡಿಯುವುದನ್ನು ಬಿಡಲ್ಲ. ಹೀಗಾಗಿ ಬೆಳಗ್ಗಿನ ಜಾವವೇ ಮದ್ಯದಂಗಡಿ ಮುಂದೆ ಜಮಾಯಿಸಿದ್ದಾರೆ. ಆದರೆ […]

ನಿಯಮ ಪಾಲಿಸಿಲ್ಲ ಅಂತಾ ಲಿಕ್ಕರ್ ಶಾಪ್ ಬಂದ್
Follow us on

ಬೆಂಗಳೂರು: ಇಂದು ರಾಜ್ಯದ ಎಲ್ಲಾ ಮದ್ಯಪ್ರಿಯರಿಗೆ ಸುದಿನ. ಎಣ್ಣೆ ಇಲ್ಲದೆ ಊಟನೇ ಮಾಡೋಲ್ಲ ಎಂಬುವವರಿಗೆ ಇವತ್ತು ಹೊಟ್ಟೆ ತುಂಬುವಷ್ಟು ಕುಡಿದು ಕುಪ್ಪಳಿಸುವ ದಿನ. ರಾಜ್ಯ ಸರ್ಕಾರ ಆದೇಶದ ಮೇರೆಗೆ ಇಂದು ಕೆಲ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಎಲ್ಲಾ ಮದ್ಯಪ್ರಿಯರು ಬೆಳಗ್ಗಿನ ಜಾವದಿಂದಲೇ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಗೆ ಮುಂದಾಗಿದ್ದಾರೆ. ಆದರೆ ಮರಿಯಪ್ಪನಪಾಳ್ಯದ ನಿವಾಸಿಗಳಿಗೆ ಇದರ ಭಾಗ್ಯವಿಲ್ಲದಂತಾಗಿದೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕವಾದರೂ ನಮ್ಮ ಜನ ಎಣ್ಣೆ ಕುಡಿಯುವುದನ್ನು ಬಿಡಲ್ಲ. ಹೀಗಾಗಿ ಬೆಳಗ್ಗಿನ ಜಾವವೇ ಮದ್ಯದಂಗಡಿ ಮುಂದೆ ಜಮಾಯಿಸಿದ್ದಾರೆ. ಆದರೆ ಅಬಕಾರಿ ನಿಯಮ ಪಾಲಿಸದ್ದಕ್ಕೆ ಲಿಕ್ಕರ್ ಶಾಪ್ ಬಂದ್ ಮಾಡಲಾಗಿದೆ. ಬೆಂಗಳೂರಿನ ಮರಿಯಪ್ಪನಪಾಳ್ಯದಲ್ಲಿ ಬಾರ್​ ಕ್ಲೋಸ್ ಮಾಡಿಸಲಾಗಿದೆ.

ಮದ್ಯದಂಗಡಿ ಮಾಲೀಕ ಬ್ಯಾರಿಕೇಡ್ ಹಾಕದೆ, ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿಲ್ಲ ಹೀಗಾಗಿ ಪೊಲೀಸರು ತಕ್ಷಣ ಲಿಕ್ಕರ್ ಶಾಪ್ ಬಂದ್​ ಮಾಡಿಸಿದ್ದಾರೆ. ಶಾಪ್ ಬಂದ್ ಆದರೂ ಮದ್ಯ ಖರೀದಿಸಲು ಜನರು ಸಾಲುಗಟ್ಟಿ ನಿಂತಿದ್ದಾರೆ.