ಕರ್ನಾಟಕದ ಕರಾವಳಿ ಬಿಸಿಲ ಧಗೆಗೆ ನಲುಗಿ ಹೋಗಿದ್ದು, ನೀರಿಗಾಗಿ ಜನರು ತತ್ತರಿಸುತ್ತಿದ್ದಾರೆ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಕೇಳಿ ಬರುತ್ತಿದೆ. ಈ ನಡುವೆ ನಿನ್ನೆ (ಜೂ.09) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಿದೆ. ಅಲ್ಲದೇ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆಯಾಗಿದ್ದು, ಬಿರು ಬಿಸಿಲಿನಿಂದ ಬೇಯುತ್ತಿದ್ದ ಜನರಿಗೆ ಮಳೆರಾಯ ತಂಪೆರೆದ್ದಿದ್ದಾನೆ. ಇನ್ನು ರಾಜ್ಯ ರಾಜಕೀಯದಲ್ಲಂತೂ ಗೋಹತ್ಯ ನಿಷೇಧ, ಸರ್ಕಾರದ 5 ಗ್ಯಾರೆಂಟಿ ಯೋಜನಗಳ ಜಾರಿ ಮತ್ತು ಪಠ್ಯ ಪುಸ್ತಕ್ತ ಮರು ಪರೀಷ್ಕರಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿವೆ. ರಾಜ್ಯದಲ್ಲಿ ಭೀಕರ ಅಪಘಾತ, ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳಲ್ಲದೆ ಇನ್ನು ಅನೇಕ ಬೆಳವಣಿಗೆಗಳು ನಡೆಯುತ್ತಿದ್ದು, ಇವಲ್ಲೆದರ ಕುರಿತಾದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತದ ಎಫೆಕ್ಟ್ ಹಿನ್ನೆಲೆ ನಗರದ ಮಳೆ ಲ್ಲಿ ಸುರಿಯುತ್ತಿದೆ. ದಿನಪೂರ್ತಿ ಮೋಡ ಕವಿದ ವಾತಾವರಣ ವಿದ್ದು, ರಾತ್ರಿಯಾಗುತ್ತಲೆ ಮಳೆ ಆರಂಭವಾಗಿದೆ. ಸದ್ಯ ಮಳೆಯಿಂದಾಗಿ ವಾತಾವರಣ ತಂಪಾಗಿದೆ.
ನಮಗೆ ಕುಡಿಯು ನೀರು ಹಾಗೂ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. ಅವರಿಗೆ ಬಿಡಬಾರದು ಅಂತ ಏನಿಲ್ಲ. ನಮ್ಮಲ್ಲಿ ನೀರು ಇದ್ದರೆ ತಾನೆ ಅವರಿಗೆ ನೀರು ಬಿಡುವುದು? ನಮ್ಮಲ್ಲಿ ಈಗ ಬಿಡಲು ನೀರಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರು: ಮೈಸೂರು ದಸರಾಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ ವಿಚಾರವಾಗಿ ಸಿಎಂ ಸಿದ್ಧರಾಮಯ್ಯ ಮಾತನಾಡಿದ್ದು, ಹೈಪವರ್ ಕಮಿಟಿ ಮೀಟಿಂಗ್ ಕರೆದು ದಸರಾ ಪ್ರಾಧಿಕಾರ ನಿರ್ಮಾಣದ ಬಗ್ಗೆ ತೀರ್ಮಾನ ಮಾಡಲಾಗುವುದು. ತಕ್ಷಣದಲ್ಲೆ ಐ ಪವರ್ ಕಮಿಟಿ ಮೀಟಿಂಗ್ ಕರೆದು ತೀರ್ಮಾನ ಮಾಡುತ್ತೇವೆ ಎಂದರು.
ನಾಳೆ ಬೆಳಗ್ಗೆ ವಿಧಾನಸೌಧ ಬಳಿ ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ಹಿನ್ನಲೆ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಕೆಲ ಮಾರ್ಗ ಬದಲಾವಣೆ ಮಾಡಲಾಗಿದೆ. ಅಂಬೇಡ್ಕರ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದರೆ, ಕೆ.ಆರ್.ಸರ್ಕಲ್ ಕಡೆಯಿಂದ ಬಾಳೆಕುಂದ್ರಿ ಸರ್ಕಲ್ ಕಡೆಗೆ ತೆರಳುವ ವಾಹನಗಳಿಗೆ ನೃಪತುಂಗ ರಸ್ತೆ ಮಾರ್ಗವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಬಾಳೇಕುಂದ್ರಿ ಸರ್ಕಲ್ನಿಂದ ಕೆ.ಆರ್.ಸರ್ಕಲ್ ರಸ್ತೆ ಕಡೆಗೆ ಹೋಗುವ ಸವಾರರು ಕ್ವೇನ್ಸ್ ರಸ್ತೆ ಸಿದ್ದಲಿಂಗಯ್ಯ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಲಾಗಿದೆ. ಸಿಟಿಓ ವೃತ್ತದಿಂದ ಬರುವ ಸವಾರರಿಗೆ ಪೊಲೀಸ್ ತಿಮ್ಮಯ್ಯ ಸರ್ಕಲ್ನಲ್ಲಿ ಎಡ ತಿರುವು ನಿಷೇಧಿಸಿದ್ದು, ರಾಜಭವನ ರಸ್ತೆ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಮೈಸೂರು: ಮಾಜಿ ಶಾಸಕ ಎಚ್ ಪಿ ಮಂಜುನಾಥ್‌ಗೆ ಪರಿಷತ್ ಸ್ಥಾನಕ್ಕೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ನಿವಾಸದ ಬಳಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ನಗರದ ಟಿ.ಕೆ ಬಡಾವಣೆಗೆ ಸಿದ್ದರಾಮಯ್ಯ
ತೆರಳಿದ್ದು, ಹೆಚ್ಪಿ ಮಂಜುನಾಥ್ ಭಾವಚಿತ್ರ ಹಿಡಿದು ಘೋಷಣೆ ಕೂಗಿದ್ದಾರೆ. ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಬೆಂಗಳೂರು: ನಾಳೆ ಬಸ್ಗೆ ಚಾಲನೆ ಕೊಡುವ ಹಾಗೆ, ಅಲ್ಲೇ ಪಕ್ಕದಲ್ಲಿ ಇರುವ ರಿಕ್ಷಾ ಸ್ಟ್ಯಾಂಡ್ಗೂ ಹೋಗಿ ಬನ್ನಿ ಎಂದು ಸಿಎಂ ಸಿದ್ಧರಾಮಯ್ಯ ವಿರುದ್ಧ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಆಟೋ ಚಾಲಕರಿಗೂ ಹಲವು ಭರವಸೆ ನೀಡಿದ್ದಿರಿ. ನಮಗೆ ತೊಂದರೆ ಆಗಿದೆ ಎಂದು ಅವರು ಹೇಳುತ್ತಿದ್ದಾರೆ. ನಾಳೆ ಆಟೋ ಸ್ಟ್ಯಾಂಡ್‌ಗೆ ಭೇಟಿ ನೀಡಿ ಅವರ ಕಷ್ಟವನ್ನೂ ಕೇಳಿ ಬನ್ನಿ ಎಂದು ಸಿಎಂ ಸಿದ್ದರಾಮಯ್ಯಗೆ ಒತ್ತಾಯಿಸಿದ್ದಾರೆ.
ನಾಳೆ ಬೆಳಗ್ಗೆ 11 ಗಂಟೆಗೆ ಶಕ್ತಿ ಯೋಜನೆಗೆ ಚಾಲನೆ ನೀಡುತ್ತಿದ್ದೇವೆ ಎಂದು ಟ್ವಿಟರ್ ಮೂಲಕ ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಜನತೆಗೆ ನೀಡಿದ ವಚನದಂತೆ ಐದೂ ಗ್ಯಾರಂಟಿಗಳಿಗೆ ಅನುಮೋದನೆ ನೀಡಿ ನುಡಿದಂತೆ ನಡೆದಿದ್ದೇವೆ. ಮಹಿಳಾ ಸಬಲೀಕರಣದ ದಿಶೆಯಲ್ಲಿ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಗೆ ನಾಳೆ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡುತ್ತಿದ್ದೇವೆ. ಮಹಿಳೆಯರ ಹೋರಾಟದ ಬದುಕಿಗೆ ಈ ಯೋಜನೆ ಬಲ ತುಂಬಲಿದೆ ಎಂದಿದ್ದಾರೆ.
ಚುನಾವಣಾ ಪೂರ್ವದಲ್ಲಿ ನಾವು ಜನತೆಗೆ ನೀಡಿದ ವಚನದಂತೆ ನಮ್ಮ ಐದೂ ಗ್ಯಾರೆಂಟಿಗಳಿಗೆ ಅನುಮೋದನೆ ನೀಡಿ ನುಡಿದಂತೆ ನಡೆದಿದ್ದೇವೆ. ಮಹಿಳಾ ಸಬಲೀಕರಣದ ದಿಶೆಯಲ್ಲಿ ಹೊಸ ಇತಿಹಾಸ ಬರೆಯಲಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ “ಶಕ್ತಿ” ಯೋಜನೆಗೆ ನಾಳೆ ಬೆಳಿಗ್ಗೆ 11 ಗಂಟೆಗೆ ಚಾಲನೆ ನೀಡುತ್ತಿದ್ದೇವೆ.
ಉದ್ಯೋಗ, ಶಿಕ್ಷಣ, ಕುಟುಂಬ… pic.twitter.com/7C7LWzpJsU
— CM of Karnataka (@CMofKarnataka) June 10, 2023
ಮಧ್ಯಪ್ರದೇಶದ ಗ್ವಾಲಿಯಾರ್‌ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಭೇಟಿ ನೀಡಿದ್ದು, ವಿಶೇಷ ವಿಮಾನದಲ್ಲಿ ಆಗಮಿಸಿದ ಡಿಕೆ ಶಿವಕುಮಾರ್ರನ್ನು ನಾಯಕರು ಸ್ವಾಗತಿಸಿದ್ದಾರೆ. ಪೀತಾಂಬರ ಪೀಠಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ವಂಖಂಡೇಶ್ವರನಿಗೆ ಡಿ.ಕೆ.ಶಿವಕುಮಾರ್ ಜಲಾಭಿಷೇಕ ನೆರವೇರಿಸಿದರು.
ಜೀರೋ ಟ್ರಾಫಿಕ್ ಮಾಡಿದಕ್ಕೆ ಎಂದು ಸಿಎಂ ಸಿದ್ದರಾಮಯ್ಯ ಮೈಸೂರು ಪೊಲೀಸ್ ಆಯುಕ್ತರ ವಿರುದ್ಧ ಗರಂ ಆಗಿದ್ದಾರೆ. ಈ ವೇಳೆ ಪೊಲೀಸ್ ಆಯುಕ್ತರು ಏನು ಮಾತನಾಡಿಲ್ಲ. ಮೈಸೂರು ವಿಮಾನ ನಿಲ್ದಾಣದಿಂದ ಜಿ.ಪಂಗೆ ಸಿದ್ಧರಾಮಯ್ಯ ಆಗಮಿಸಿದ್ದಾರೆ.
ನನ್ನ ಕ್ಷೇತ್ರದ ನಾಲ್ಕೈದು ಗ್ರಾಮಗಳಿಗೆ ಬಸ್ ಸೌಲಭ್ಯವೇ ಇಲ್ಲ ಎಂದು ಗದಗ ಜಿಲ್ಲೆ ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್ ಹೇಳಿದರು. ಈ ಎಲ್ಲ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸೋದು ನನ್ನ ಕರ್ತವ್ಯ. KSRTC ಅಧಿಕಾರಿಗಳಿಗೆ ತಪ್ಪು ಮಾಹಿತಿ ಇದೆ. ಒಂದು ಗ್ರಾಮ ಮಾತ್ರವಲ್ಲ, 4-5 ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲ. ಬಸ್ ಸೌಲಭ್ಯ ನೀಡಿದ್ರೆ ಉಚಿತ ಪ್ರಯಾಣದ ಪ್ರಯೋಜನ ಆಗಲಿದೆ. ವಿಶೇಷವಾಗಿ ಶಾಲಾ ಮಕ್ಕಳಿಗೆ ಅನುಕೂಲ ಆಗಬೇಕು ಎಂದರು.
ಚಿಕ್ಕಮಗಳೂರು: ವಿದ್ಯುತ್ ಬಿಲ್ ನೋಡಿ ಜಿಲ್ಲೆಯ ಜನರು ಶಾಕ್ ಆಗಿದ್ದಾರೆ. ಪ್ರತಿ ತಿಂಗಳಿಗಿಂತ ಮೂರು ಪಟ್ಟು ವಿದ್ಯುತ್ ಬಿಲ್ ಹೆಚ್ಚಾಗಿದೆ. ವಿದ್ಯುತ್ ದರ ಏರಿಕೆಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಮೆಸ್ಕಾಂ ಸಿಬ್ಬಂದಿಗಳು ಮನೆ, ಮನೆಗೆ ವಿದ್ಯುತ್ ಬಿಲ್ ನೀಡಿದ್ದಾರೆ. ಸರ್ಕಾರದ ವಿದ್ಯುತ್ ದರ ಏರಿಕೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ 20 ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ಕೃತಜ್ಞತಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬಿಳಿಗೆರೆಯಲ್ಲಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಯವರಿಗೆ ನಡುಕ ಶುರುವಾಗಿದೆ ಎಂದು ಕಿಡಿಕಾರಿದರು.
ನಾಳೆ ವಿಧಾನಸೌಧ ಮುಂಭಾಗದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ವಿಧಾನಸೌಧದಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ನಂತರ ಮೆಜೆಸ್ಟಿಕ್ಗೆ ತೆರಳಿ ಟಿಕೆಟ್ ನೀಡಿ ಮತ್ತೆ ಯೋಜನೆಗೆ ಚಾಲನೆ ನೀಡಿ ಬಳಿಕ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ನಾಳೆ ಮಧ್ಯಾಹ್ನ 1ರ ಬಳಿಕ ಉಚಿತ ಪ್ರಯಾಣಕ್ಕೆ ಅವಕಾಶ ಸಿಗಲಿದೆ. ಮೂರು ತಿಂಗಳು ಗುರುತಿನ ಚೀಟಿ ಜೊತೆ ಪ್ರಯಾಣಕ್ಕೆ ಅವಕಾಶ. 3 ತಿಂಗಳ ಬಳಿಕ ಸ್ಮಾರ್ಟ್ ಕಾರ್ಡ್ ಇರಬೇಕು ಎಂದರು.
ಚುನಾವಣೆ ವೇಳೆ ಸಿದ್ದರಾಮಯ್ಯ ಬಗ್ಗೆ ಸಾಕಷ್ಟು ಟೀಕೆ ಮಾಡಿದ್ದರು. ಮಧ್ಯಾಹ್ನ ಎದ್ದೇಳುವ ವ್ಯಕ್ತಿಗಳೆಲ್ಲ ಸಿದ್ದರಾಮಯ್ಯ ಬಗ್ಗೆ ಮಾತಾಡಿದ್ದರು ಎಂದು ಪರೋಕ್ಷವಾಗಿ ಶ್ರೀನಿವಾಸ್ ಪ್ರಸಾದ್ ವಿರುದ್ಧ ಮಹದೇವಪ್ಪ ವಾಗ್ದಾಳಿ ಮಾಡಿದರು.
ಮೈಸೂರು: ವರುಣಾವನ್ನು ತಾಲೂಕು ಕೇಂದ್ರ ಮಾಡಬೇಕೆಂದು ಒತ್ತಾಯ ವಿಚಾರ ‘ ವರುಣಾವನ್ನ ತಾಲೂಕು ಮಾಡಿ ಎಂದು ಜನರು ಕೇಳಿಲ್ಲ. ತಾಲೂಕು ಮಾಡುತ್ತೇವೆ ಎಂದು ಹೇಳಿದ್ದು ಬಸವರಾಜ ಬೊಮ್ಮಾಯಿ. ನಾನು ಪ್ರಚಾರ ಮಾಡುವಾಗಲೂ ತಾಲೂಕು ಮಾಡಿ ಎಂದು ಕೇಳಿಲ್ಲ. ಬಸವರಾಜ ಬೊಮ್ಮಾಯಿ ತಾಲೂಕು ಮಾಡಿ ಎಂದು ಕೇಳಿದ್ರೆ ಮಾಡಲ್ಲ. ಜನ ಕೇಳಿದರೆ ಮಾತ್ರ ವರುಣವನ್ನು ತಾಲೂಕು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು: ಸುತ್ತೂರು ಹೆಲಿಪ್ಯಾಡ್ನಿಂದ ಬಿಳಿಗೆರೆವರೆಗೆ ಸಿಎಂ ಸಿದ್ದರಾಮಯ್ಯ ರೋಡ್ ಶೋ ನಡೆಸಿದ್ದು, ಸಿಎಂಗೆ ಸಚಿವ ಹೆಚ್.ಸಿ.ಮಹದೇವಪ್ಪ, ಪುತ್ರ ಯತೀಂದ್ರ ಸಾಥ್ ನೀಡಿದ್ದಾರೆ. ರೋಡ್ ಶೋ ಬಳಿಕ ನಂಜನಗೂಡು ತಾಲೂಕಿನ ಬಿಳಿಗೆರೆಯಲ್ಲಿ ನಡೆಯುತ್ತಿರುವ ಕೃತಜ್ಞತಾ ಸಮಾವೇಶದಲ್ಲಿ ಸಿಎಂ ಭಾಗಿಯಾಗಲಿದ್ದಾರೆ.
ಕೊಡಗು: ಮಳೆಗಾಲ ಆರಂಭ ಹಿನ್ನೆಲೆ ಜಿಲ್ಲೆಗೆ NDRF ತುಕಡಿ ಆಗಮಿಸಿದ್ದಾರೆ. ಹೌದು ಕಳೆದ ಮಳೆಗಾಲದಲ್ಲಿ ಆದ ಅನಾಹುತ ಸಂಬಂಧ ಇದೀಗ ಇನ್ಸ್ಪೆಕ್ಟರ್ ಶಾಂತಿಲಾಲ್ ಜಟಿಯಾ ನೇತೃತ್ವದಲ್ಲಿ NDRF ತಂಡ ಆಗಮಿಸಿದ್ದು, ಅದರಲ್ಲಿ 25 ಯೋಧರು ಇದ್ದಾರೆ. ಇನ್ನು ಈ ಕುರಿತು ‘ಮುಂದಿನ ಮೂರು ತಿಂಗಳು ಜಿಲ್ಲೆಯಲ್ಲೇ ಉಳಿದುಕೊಳ್ಳಲಿದ್ದಾರೆ. ಮಳೆಗಾಲದ ವಿಪತ್ತು ಎದುರಿಸಲು ಸರ್ವ ಸನ್ನದ್ಧವಾಗಿದ್ದು, ಅಪಾಯಕಾರಿ ಪ್ರದೇಶಗಳ ಅವಲೋಕನ ಮಾಡುತ್ತೇವೆ ಎಂದು ಬೆಟಾಲಿಯನ್ ಕಮಾಂಡರ್ ಶಾಂತಿಲಾಲ್ ಹೇಳಿದರು.
ಬೆಂಗಳೂರು: 40% ಕಮಿಷನ್ ಆರೋಪದ ತನಿಖೆಯನ್ನು ಸ್ವಾಗತ ಮಾಡ್ತೇನೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಸಮಾಜ ಕಲ್ಯಾಣ ಇಲಾಖೆಯಿಂದಲೇ ತನಿಖೆಯನ್ನು ಆರಂಭಿಸಿ, ಎಲ್ಲರೂ ಸಮಾನ ಎನ್ನುವ ಕಾಂಗ್ರೆಸ್ ಗೆ, ಹಿಂದುಗಳು ಕಡಿಮೆ ಎಂದು ಯಾಕೆ ಅನ್ನಿಸುತ್ತದೆ? ಚಾಣಕ್ಯ ವಿಶ್ವ ವಿದ್ಯಾಲಯಕ್ಕೆ ನೀಡಿದ್ದ ಭೂಮಿ ವಾಪಸ್ ಪಡೆಯುತ್ತೇವೆ ಅನ್ನೋದು ಯಾಕೆ? ಹಿಂದುಗಳು ಕಡಿಮೆ ಸಮಾನವೆಂದು ಯಾಕೆ ಯೋಚನೆ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು:ನಾಳೆ(ಜೂ.11) ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ನಾಳೆ ಸಿಎಂ ‘ಶಕ್ತಿ ಯೋಜನೆ ಉದ್ಘಾಟನೆ ಮಾಡುತ್ತಾರೆ. ಬಳಿಕ ಒಂದು ರೌಂಡ್ ಬಸ್ ನಲ್ಲಿ ಹೋಗುತ್ತೇವೆ. ಬೇರೆ ಪ್ರದೇಶಗಳಿಗೆ ಹೋಗುವ ಮಹಿಳೆಯರು ಬಸ್ನಲ್ಲಿ ಕುಳಿತಿರುತ್ತಾರೆ. ಆ ಬಸ್ಗೆ ಸಿಎಂ ಹಸಿರು ನಿಶಾನೆ ತೋರಿಸಿ ಚಾಲನೆ ಕೊಡುತ್ತಾರೆ.ನಂತರ ಸ್ಮಾರ್ಟ್ ಕಾರ್ಡ್ ಸಾಂಕೇತಿಕವಾಗಿ ಕೆಲವರಿಗೆ ಕೊಡುತ್ತೇವೆ ಎಂದರು. ಇನ್ನು ಎಲ್ಲರೂ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಲು ಮೂರು ತಿಂಗಳು ಅವಧಿ ನೀಡಲಾಗಿದ್ದು, ಯಾವ ಬಸ್ ನಲ್ಲಿ ಅವಕಾಶ ಅಂತಾ ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಟ್ಟಿದ್ದೇವೆ ಎಂದಿದ್ದಾರೆ.
ಬೆಂಗಳೂರು: ಸಿಎಂ ಜೊತೆ ಈಗಾಗಲೇ ಚರ್ಚೆ ಮಾಡಲಾಗಿದ್ದು, ನಾಳೆ(ಜೂ.11) ಮಧ್ಯಾಹ್ನ 12 ಗಂಟೆಗೆ ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇನ್ನು
ಭಾನುವಾರ ಜನರು ಫ್ರೀ ಇರ್ತಾರೆ, ಹಾಗಾಗಿ ನಾನೇ ಭಾನುವಾರ ಕಾರ್ಯಕ್ರಮ ಮಾಡೋಣ ಅಂತಾ ಹೇಳಿದ್ದೆ ಎಂದು
ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಉಡುಪಿ: ಉಡುಪಿಗೆ ಬಿಪರ್ ಜಾಯ್ ಚಂಡಮಾರುತ ಆತಂಕ ಹಿನ್ನಲೆ ಬೀಚ್ ಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಪಡುಕರೆ ಸಮುದ್ರ ತೀರದಲ್ಲಿ ಗಾಳಿ ವೇಗವಾಗಿ ಬೀಸುತ್ತಿದ್ದು, ಜೋರಾದ ಗಾಳಿಯ ಅಬ್ಬರದ ಮಧ್ಯೆ ರಕ್ಕಸ ಗಾತ್ರದ ಅಲೆಗಳ ಅಬ್ಬರ ಹೆಚ್ಚಾಗಿದೆ. ಚಂಡಮಾರುತ ಭೀತಿಯಿಂದ ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಖಡಕ್ ಸೂಚನೆ ನೀಡಲಾಗಿದೆ.
ಬೆಂಗಳೂರು: ‘ದೇಶಕ್ಕೆ ಪ್ರಜ್ಞಾವಂತರು ಮುಖ್ಯ. ಪೆನ್ನು, ಪೇಪರ್ ಕೈಯಲ್ಲಿ ಇದ್ದಾಗ ಹೇಗೆ ಬಳಸಬೇಕೋ ಹಾಗೇ ಬಳಸಬೇಕು. ಅಧಿಕಾರ ಇದ್ದಾಗ ಜನರ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮಾಜಿ ಆರೋಗ್ಯ ಸಚಿವ ಸುಧಾಕರ್ ಉದಾಹರಣೆ ನೀಡಿದ ಡಿಕೆ ಶಿವಕುಮಾರ್, ಆರೋಗ್ಯ ಸಚಿವರಾಗಿ ಸುಧಾಕರ್ ಕನಕಪುರಕ್ಕೆ ಬಂದಿದ್ರು, ನಮ್ಮ ಕನಕಪುರಕ್ಕೆ ಇದ್ದ ಆಸ್ಪತ್ರೆಯನ್ನ ತೆಗೆದುಕೊಂಡು ಹೋದ್ರು. ಅದಕ್ಕೆ ಅಧಿಕಾರ ಇದ್ದಾಗ, ಪೆನ್ನು ಜನರ ಒಳಿತಿಗಾಗಿ ಬಳಸಬೇಕು. ಒಳ್ಳೇದು ಮಾಡೋದಿದ್ರೆ ಇವತ್ತೇ ಮಾಡಬೇಕು, ನಾಳೆ ಬಗ್ಗೆ ಯೋಚಿಸಬಾರದು ಎಂದು ಡಿಸಿಎಂ ಸಲಹೆ ನೀಡಿದರು.
ಬೆಂಗಳೂರು: ‘ನಾನು ನಮ್ಮ ಜಿಲ್ಲೆಗೆ ಹೋಗ್ತಾ ಇದ್ದು, ನಮ್ಮ ಕಾರ್ಯಕರ್ತರಿಗೆ ಕೃತಜ್ಞತೆ ಹೇಳುವ ಕಾರ್ಯಕ್ರಮ ಇಟ್ಟಿಕೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಗೃಹಜ್ಯೋತಿ, ಗೃಹಲಕ್ಷ್ಮಿ ಬಗ್ಗೆ ಯಾವುದೇ ಗೊಂದಲ ಇಲ್ಲ. ಸುಮ್ಮನೆ ನೀವೇ ಗೊಂದಲ ಕ್ರಿಯೇಟ್ ಮಾಡ್ಬೇಡಿ. ಮ್ಯಾನಿಫ್ಯಾಸ್ಟೊದಲ್ಲಿ ಏನ್ ಘೋಷಣೆ ಮಾಡಿದ್ದೇವೊ ಅದನ್ನ ಜಾರಿಗೆ ತರ್ತಾ ಇದ್ದೀವಿ. ನಾವು ನುಡಿದಂತೆ ನಡೆಯುವವರು ಎಂದಿದ್ದಾರೆ.
ಮಂಡ್ಯ: ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಗೆ ಹಲವೆಡೆ ಅವಾಂತರಗಳಾಗಿದ್ದು, ಮದ್ದೂರು ತಾಲೂಕಿನ ನಗರಕೆರೆ, ಸೋಂಪುರ, ಕ್ಯಾತಘಟ್ಟ ಸೇರಿ ಹಲವು ಗ್ರಾಮಗಳಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ವಿದ್ಯುತ್ ಕಂಬಗಳು, ಮರಗಳು ಮುರಿದು ಬಿದ್ದು 4-5 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ಸೆಸ್ಕಾಂ ಸಿಬ್ಬಂದಿಯಿಂದ ವಿದ್ಯುತ್ ಕಂಬಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಉತ್ತರ ಕನ್ನಡ: ಸೈಕ್ಲೋನ್ ಎಪೆಕ್ಟ್ ಹಿನ್ನಲೆ, ಮುಂಜಾನೆಯಿಂದ ಜಿಲ್ಲೆಯ ಹಲವೆಡೆ ಜಿಟಿಜಿಟಿ ಮಳೆ ಶುರುವಾಗಿದೆ. ಒಂದು ತಾಸಿನಿಂದ ಬಿಟ್ಟು ಬಿಡದೆ ಮಳೆ ಶುರುಯುತ್ತಿದೆ. ಕಾರವಾರ, ಅಂಕೋಲ, ಭಟ್ಕಳ, ಜೋಯಿಡಾ ಭಾಗದಲ್ಲಿ ಮಳೆಯಾಗುತ್ತಿದ್ದು,
ರೇನ್ ಕೋಟ್, ಕೊಡೆಗಳ ಮೊರೆ ಹೋಗಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
Published On - 11:24 am, Sat, 10 June 23