ತುರಹಳ್ಳಿ ಅರಣ್ಯವನ್ನು ಟ್ರೀ ಪಾರ್ಕ್ ಮಾಡುವುದಕ್ಕೆ ವಿರೋಧ; ಸ್ಥಳೀಯರು, ಮಕ್ಕಳಿಂದ ಧರಣಿ

| Updated By: ರಶ್ಮಿ ಕಲ್ಲಕಟ್ಟ

Updated on: Feb 07, 2021 | 1:04 PM

ಈಗಾಗಲೇ ಮಾಡಲಾಗಿರುವ ಟ್ರೀ ಪಾರ್ಕ್​ನ ಅರಣ್ಯ ಇಲಾಖೆ ಅಭಿವೃದ್ದಿ ಮಾಡಿಲ್ಲ. ಹೀಗಿದ್ದೂ ಮತ್ತೊಂದು ಟ್ರೀ ಪಾರ್ಕ್ ಏಕೆ ಮಾಡಬೇಕೆಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ತುರಹಳ್ಳಿ ಅರಣ್ಯವನ್ನು ಟ್ರೀ ಪಾರ್ಕ್ ಮಾಡುವುದಕ್ಕೆ ವಿರೋಧ; ಸ್ಥಳೀಯರು, ಮಕ್ಕಳಿಂದ ಧರಣಿ
ಸ್ಥಳಿಯರ ಮತ್ತು ಮಕ್ಕಳ ಪ್ರತಿಭಟನೆ
Follow us on

ಬೆಂಗಳೂರು: ತುರಹಳ್ಳಿ ಅರಣ್ಯವನ್ನು ಟ್ರೀ ಪಾರ್ಕ್ ಮಾಡಲು ಮುಂದಾದ ಅರಣ್ಯ ಇಲಾಖೆಯ ನಿರ್ಧಾರವನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಬನಶಂಕರಿ 6ನೇ ವಲಯದ ಬಳಿ ಇರುವ ತುರಹಳ್ಳಿ ಅರಣ್ಯ ಸುಮಾರು 597 ಎಕರೆ 19 ಗುಂಟೆ ವಿಸ್ತೀರ್ಣವನ್ನು ಹೊಂದಿದೆ. 2011 ರಲ್ಲಿ 35 ಎಕರೆ ವಿಸ್ತೀರ್ಣದಲ್ಲಿ ಟ್ರೀ ಪಾರ್ಕ್ ಮಾಡಲಾಗಿದ್ದು, ಇದೀಗ 400 ಎಕರೆ ವಿಸ್ತೀರ್ಣದಲ್ಲಿ ಟ್ರೀ ಪಾರ್ಕ್ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಈಗಾಗಲೇ ಮಾಡಲಾಗಿರುವ ಟ್ರೀ ಪಾರ್ಕ್​ನ ಅರಣ್ಯ ಇಲಾಖೆ ಅಭಿವೃದ್ದಿ ಮಾಡಿಲ್ಲ. ಹೀಗಿದ್ದೂ ಮತ್ತೊಂದು ಟ್ರೀ ಪಾರ್ಕ್ ಏಕೆ ಮಾಡಬೇಕೆಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ತುರಹಳ್ಳಿ ಅರಣ್ಯದಲ್ಲಿ 150ಕ್ಕೂ ಹೆಚ್ಚು ಬಗೆಯ ಪ್ರಾಣಿ-ಪಕ್ಷಿಗಳ ಪ್ರಭೇದವಿದೆ. ಮರಗಳನ್ನು ಕಡಿಯದೆ ಟ್ರೀ ಪಾರ್ಕ್ ಮಾಡುತ್ತೇವೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಟ್ರೀ ಪಾರ್ಕ್ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಮಕ್ಕಳು ಮತ್ತು ಹಿರಿಯ ನಾಗರೀಕರು ಭಾಗಿಯಾಗಿದ್ದರು.

ಅರಣ್ಯ ಇಲಾಖೆಯ ನಿರ್ಧಾರವೇನು?
ಟ್ರೀ ಪಾರ್ಕ್​ನಲ್ಲಿ ಕ್ಯಾಂಟೀನ್, ವಾಹನಗಳ ಪಾರ್ಕಿಂಗ್, ಟಿಕೆಟ್ ಕೌಂಟರ್, ಮಕ್ಕಳ‌ ಆಟದ ಮೈದಾನ ಸೇರಿದಂತೆ ಹಲವು ಯೋಜನೆಗಳನ್ನು ಅರಣ್ಯ ಇಲಾಖೆ ಕೈಗೆತ್ತುಕೊಳ್ಳುತ್ತಿದೆ.

ಕರ್ತವ್ಯದಲ್ಲಿದ್ದ ಯೋಧ ಸಾವು; ಮೃತದೇಹ ಇಂದು ಅಥವಾ ನಾಳೆ ತವರಿಗೆ ಆಗಮಿಸುವ ನಿರೀಕ್ಷೆ