ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಕಾಗಿನೆಲೆ ನಿರಂಜನಾನಂದಪುರಿ ಶ್ರೀ
ಕುರುಬ ಸಮುದಾಯ ಎಸ್‌ಟಿ ಮೀಸಲಾತಿಗೆ ಸಂಬಂಧಿಸಿದಂತೆ ನಮ್ಮ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಸಮಾವೇಶಕ್ಕೂ ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದಾರೆ ಎಂದು ಕಾಗಿನೆಲೆಯ ನಿರಂಜನಾನಂದನಾಥ ಶ್ರೀಗಳು ಹೇಳಿದ್ದಾರೆ.
ಬೆಂಗಳೂರು: ಕುರುಬ ಸಮುದಾಯ ಎಸ್‌ಟಿ ಮೀಸಲಾತಿಗೆ ಸಂಬಂಧಿಸಿದಂತೆ ನಮ್ಮ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಸಮಾವೇಶಕ್ಕೂ ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದಾರೆ ಎಂದು ಕಾಗಿನೆಲೆಯ ನಿರಂಜನಾನಂದಪುರಿ ಶ್ರೀಗಳು ಹೇಳಿಕೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಶ್ರೀಗಳು ಹೋರಾಟಕ್ಕೆ ಸಮುದಾಯದಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇವತ್ತು ಅಸಂಖ್ಯಾತ ಕುರುಬರು ಸಮಾವೇಶಕ್ಕೆ ಬಂದಿರುವುದು ಖುಷಿ ವಿಚಾರ ಎಂದು ಟಿವಿ9 ಜೊತೆ ಅಭಿಪ್ರಾಯ ಪಟ್ಟಿದ್ದಾರೆ.
ಕುರುಬ ಸಮಾಜದ ಬೃಹತ್ ಸಮಾವೇಶ; ಪರ್ಯಾಯ ಮಾರ್ಗ ಕಲ್ಪಿಸಿರುವ ಪೊಲೀಸರು