ಹಾಸನ: ಬಾಲಕಿಯನ್ನು ಚುಡಾಯಿಸಿದ ವ್ಯಕ್ತಿಗೆ ಸ್ಥಳೀಯರು ಧರ್ಮದೇಟು ನೀಡಿರುವ ಘಟನೆ ಹಾಸನ ನಗರದ ಕರಿಗೌಡ ಕಾಲೋನಿಯಲ್ಲಿ ನಡೆದಿದೆ. ಸ್ಥಳೀಯರು ವ್ಯಕ್ತಿಯನ್ನು ಹಿಗ್ಗಾ ಮುಗ್ಗ ಥಳಿಸಿದ್ದಾರೆ. ಆಲೂರು ತಾಲ್ಲೂಕಿನ ಕುಮಾರ್, ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ.
ಸ್ಥಳೀಯರು ವ್ಯಕ್ತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಿಗ್ಗಾಮಗ್ಗ ಥಳಿಸಿದ ಮತ್ತೊಮ್ಮೆ ಇಂತಹ ತಪ್ಪು ಮಾಡದ ಹಾಗೆ ಬುದ್ದಿ ಹೇಳಿದ್ದಾರೆ. ನಿನ್ನೆ ಬೆಳಿಗ್ಗೆ ಶಾಲೆಯತ್ತ ಹೊರಟಿದ್ದ ವಿದ್ಯಾರ್ಥಿನಿಯ ಜೊತೆ ಕಾಮುಕ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ರಕ್ಷಣೆಗಾಗಿ ಬಾಲಕಿ ಕೂಗಾಡಿದ್ದಾಳೆ.
ಬಾಲಕಿಯ ಕೂಗು ಹೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಕೂಡಲೆ ಕಾಮುಕನನ್ನ ಹಿಡಿದು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಆಲೂರು ತಾಲೂಕಿನ ಕುಮಾರ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಜನ ವಸತಿ ಪ್ರದೇಶದಲ್ಲಿ ಮೂತ್ರವಿಸರ್ಜನೆ ಮಾಡ್ತಿದ್ದವನಿಗೆ ಮಹಿಳೆಯರಿಂದ ಧರ್ಮದೇಟು
Published On - 7:25 am, Wed, 21 April 21