ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಆಗಿದ್ದ ಕರ್ನಾಟಕ ಷರತ್ತು ಬದ್ಧ ಸಡಿಲಿಕೆಯನ್ನು ಪಡೀತಿದೆ. ಮನೆಯಲ್ಲೇ ಕೂತಿದ್ದ ಮಂದಿ ತಮ್ಮ ಕೆಲಸಗಳಲ್ಲಿ ಬಿಜಿ ಆಗಿದ್ದಾರೆ. ಜೂನ್ 8ರಿಂದ ಧಾರ್ಮಿಕ ಸ್ಥಳ, ಮಾಲ್ಗಳು ಓಪನ್ ಆಗ್ತಿವೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡುವುದಕ್ಕೆ ಬಿಬಿಎಂಪಿ ಪ್ಲ್ಯಾನ್ ಮಾಡಿಕೊಂಡಿದೆ.
ವ್ಯಾಪಾರ ಮಾಡುವವರು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ಮಾಡಬೇಕು. ವ್ಯಾಪಾರದ ವೇಳೆ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಬಳಸಲೇ ಬೇಕು. ಈ ಎಲ್ಲಾದರ ಬಗ್ಗೆ ಬಿಬಿಎಂಪಿ ಮಾರ್ಷಲ್‌ಗಳು ನಗರದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೆ ಆರೋಗ್ಯ ಅಧಿಕಾರಿಗಳು, ಬಿಬಿಎಂಪಿ ಸಿಬ್ಬಂದಿಯನ್ನು ಕೂಡ ನಿಯೋಜನೆ ಮಾಡಲಾಗ್ತಿದೆ. ಬಿಬಿಎಂಪಿ ನಿಯಮಗಳನ್ನ ಪಾಲಿಸದಿದ್ರೆ ವ್ಯಾಪಾರಿಗಳು, ಗ್ರಾಹಕರಿಗೆ ಎಪಿಡೆಮಿಕ್ ಆ್ಯಕ್ಟ್‌ನಡಿ ಕ್ರಮ ಕೈಗೊಳ್ಳಲು ಹಾಗೂ ದಂಡ ವಿಧಿಸುವುದಕ್ಕೂ ಬಿಬಿಎಂಪಿ ತೀರ್ಮಾನ ಮಾಡಿದೆ.
Published On - 9:27 am, Sun, 31 May 20