AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಇದ್ರೂ ಆಸ್ಪತ್ರೆ ಸೇರೋಕೆ ಹೈಡ್ರಾಮಾ, ಕಾರ್ಪೊರೇಟರ್​ ಇಮ್ರಾನ್ ವಿರುದ್ಧ FIR

ಬೆಂಗಳೂರು: ಜನಪ್ರತಿನಿಧಿ ಅಂದ್ರೆ ಮತ್ತೊಬ್ಬರಿಗೆ ಮಾದರಿಯಾಗಿರ್ಬೇಕು. ಅದ್ರಲ್ಲೂ ಈ ಕೊರೊನಾದಂಥ ಟೈಮಲ್ಲಿ ತನ್ನ ಕ್ಷೇತ್ರದ ಜನ್ರ ರಕ್ಷಣೆಗೆ ನಿಲ್ಬೇಕು. ಆದ್ರೆ ಈ ಕಾರ್ಪೊರೇಟರ್ ಮಾತ್ರ ತನಗೆ ಕೊರೊನಾ ಇದೆ ಅಂತಾ ಗೊತ್ತಾದ್ರೂ ಆಸ್ಪತ್ರೆ ಸೇರೋಕೆ ಮಾಡಿದ್ದು ಅಂತಿಂಥ ಹೈಡ್ರಾಮಾವಲ್ಲ. ಹೀಗಾಗಿಯೇ ಕಾರ್ಪೊರೇಟರ್ ವಿರುದ್ಧವೇ ಕೇಸ್ ದಾಖಲಾಗಿದೆ. ಬಿಬಿಎಂಪಿ ಅಧಿಕಾರಿ ನೀಡಿದ ದೂರಿನ ಮೇರೆಗೆ ಕೇಸ್! ಅಂದ್ಹಾಗೇ, ಪಾದರಾಯನಪುರ ಅಂದ್ರೆ ಮೊದ್ಲೆ ಕೊರೊನಾ ವಾರಿಯರ್ಸ್ ವಿರುದ್ಧ ಅಟ್ಟಹಾಸ ಮರೆದ್ದಿಂತಹ ಸ್ಥಳ. ಇಂಥ ಜಾಗದಲ್ಲಿ ಕಾರ್ಪೊರೇಟರ್ ಇಮ್ರಾನ್ ಪಾಷಾ ಫುಲ್ […]

ಕೊರೊನಾ ಇದ್ರೂ ಆಸ್ಪತ್ರೆ ಸೇರೋಕೆ ಹೈಡ್ರಾಮಾ, ಕಾರ್ಪೊರೇಟರ್​ ಇಮ್ರಾನ್ ವಿರುದ್ಧ FIR
ಆಯೇಷಾ ಬಾನು
|

Updated on:May 31, 2020 | 2:19 PM

Share

ಬೆಂಗಳೂರು: ಜನಪ್ರತಿನಿಧಿ ಅಂದ್ರೆ ಮತ್ತೊಬ್ಬರಿಗೆ ಮಾದರಿಯಾಗಿರ್ಬೇಕು. ಅದ್ರಲ್ಲೂ ಈ ಕೊರೊನಾದಂಥ ಟೈಮಲ್ಲಿ ತನ್ನ ಕ್ಷೇತ್ರದ ಜನ್ರ ರಕ್ಷಣೆಗೆ ನಿಲ್ಬೇಕು. ಆದ್ರೆ ಈ ಕಾರ್ಪೊರೇಟರ್ ಮಾತ್ರ ತನಗೆ ಕೊರೊನಾ ಇದೆ ಅಂತಾ ಗೊತ್ತಾದ್ರೂ ಆಸ್ಪತ್ರೆ ಸೇರೋಕೆ ಮಾಡಿದ್ದು ಅಂತಿಂಥ ಹೈಡ್ರಾಮಾವಲ್ಲ. ಹೀಗಾಗಿಯೇ ಕಾರ್ಪೊರೇಟರ್ ವಿರುದ್ಧವೇ ಕೇಸ್ ದಾಖಲಾಗಿದೆ.

ಬಿಬಿಎಂಪಿ ಅಧಿಕಾರಿ ನೀಡಿದ ದೂರಿನ ಮೇರೆಗೆ ಕೇಸ್! ಅಂದ್ಹಾಗೇ, ಪಾದರಾಯನಪುರ ಅಂದ್ರೆ ಮೊದ್ಲೆ ಕೊರೊನಾ ವಾರಿಯರ್ಸ್ ವಿರುದ್ಧ ಅಟ್ಟಹಾಸ ಮರೆದ್ದಿಂತಹ ಸ್ಥಳ. ಇಂಥ ಜಾಗದಲ್ಲಿ ಕಾರ್ಪೊರೇಟರ್ ಇಮ್ರಾನ್ ಪಾಷಾ ಫುಲ್ ರೌಂಡ್ಸ್ ಹೊಡೆದಿದ್ರು. ಸಾಮಾಜಿಕ ಅಂತರ ಮರೆತು ಜನರ ಜೊತೆ ಸೇರಿದ್ರು. ಗಲ್ಲಿ ಗಲ್ಲಿಯಲ್ಲೂ ಫುಡ್ ಕಿಟ್ ಹಂಚಿದ್ದ ಕಾರ್ಪೊರೇಟರ್​ಗೆ ಇದೀಗ ಕೊರೊನಾ ಸುತ್ತಿಕೊಂಡಿದೆ. ಹೀಗಾಗಿ ಇಮ್ರಾನ್ ಪಾಷಾ ಅವ್ರನ್ನ ವಾರ್ಡ್​​ಗೆ ಶಿಫ್ಟ್​​ ಮಾಡಲು ಆರೋಗ್ಯಾಧಿಕಾರಿಗಳು ಏರಿಯಾಗೆ ಎಂಟ್ರಿಕೊಟ್ಟಿದ್ರು.

ಈ ವೇಳೆ ಆಸ್ಪತ್ರೆಗೆ ಬನ್ನಿ ಅಂದ್ರೂ ಎಷ್ಟೊತ್ತು ಹೊರಗಡೆನೇ ಬರಲಿಲ್ಲ. ಅಮ್ಮ ಬಂದು ಖುರಾನ್ ಓದಬೇಕು. ನಮಾಜ್ ಮಾಡ್ತೀನಿ ಅಂತಾ ಒಳಗಡೆನೇ ಕೂತಿದ್ರು. ಎಷ್ಟೊತ್ತು ಕಾಯಿಸಿದ ಮೇಲೆ ಪಿಪಿಇ ಕಿಟ್ ಧರಿಸಿಕೊಂಡು ಹೊರ ಬಂದ್ರು. ಏನೋ ಸಾಧನೆ ಮಾಡೋಕೆ ಹೊರಟಿದ್ದೀನಿ ಅನ್ನೋ ರೇಂಜಿಗೆ ಜನರತ್ತ ಕೈ ಬೀಸುತ್ತಿದ್ರು. ಇದೆಲ್ಲಾ ಹೈಡ್ರಾಮಾದ ಬಳಿಕ ಇಮ್ರಾನ್​ ಪಾಷಾರನ್ನ ಆ್ಯಂಬುಲೆನ್ಸ್​​ನಲ್ಲಿ ಕರೆದೊಯ್ಯಲಾಯ್ತು. ನಂತ್ರ ಬಿಬಿಎಂಪಿ ಅಧಿಕಾರಿಯೊಬ್ರು ಇಮ್ರಾನ್ ಪಾಷಾ ವಿರುದ್ಧ ದೂರು ನೀಡಿದ್ರು. ದೂರಿನ ಮೇರೆಗೆ ಸೆಕ್ಷನ್ 270 ಅಂದ್ರೆ ಮಾರಣಾಂತಿಕ ಸೋಂಕು ಹರಡುವಿಕೆ ಕಾಯ್ದೆಯಡಿ ಎಫ್​ಐಆರ್ ದಾಖಲಾಗಿದೆ.

ಇನ್ನು ಆಸ್ಪತ್ರೆ ಕ್ವಾರಂಟೈನ್ ಮುಗಿದ ಬಳಿಕ ಇಮ್ರಾನ್ ಪಾಷಗೆ 14 ದಿನ ಹೋಂ ಕ್ವಾರಂಟೈನ್ ವಿಧಿಸಲಿದ್ದಾರೆ. ಇದಾದ ಬಳಿಕವಷ್ಟೇ ಪೊಲೀಸರು ವಿಚಾರಣೆಗೆ ಕರೆದೊಯ್ಯಲಿದ್ದಾರೆ. ಮತ್ತೊಂದೆಡೆ ಇಮ್ರಾನ್​ ಪಾಷಾ, ಕಿಟ್​ ವಿತರಣೆ, ಸಭೆಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನರನ್ನ ಸಂಪರ್ಕಿಸಿದ್ರು. ಇದೀಗ, ಅವ್ರನ್ನೆಲ್ಲ ಪತ್ತೆ ಹಚ್ಚೋದೆ ದೊಡ್ಡ ಸವಾಲ್​ ಆಗಿದೆ. ಅದೇನೇ ಇರ್ಲಿ, ಸೋಂಕು ವಕ್ಕರಿಸಿದ ಮೇಲೂ ಕಾರ್ಪೊರೇಟರೇ ಹೈಡ್ರಾಮಾ ಮಾಡಿರೋದು ಮಾತ್ರ ನಿಜಕ್ಕೂ ದುರಂತ.

Published On - 8:12 am, Sun, 31 May 20

Follow Us