ನೆಲಮಂಗಲ: ಲಾರಿ ಹರಿದು ಟೋಲ್ ಸಿಬ್ಬಂದಿ ಸಾವು, ಚಾಲಕ ಪೊಲೀಸರ ವಶಕ್ಕೆ
ನೆಲಮಂಗಲ: ಕರ್ತವ್ಯ ನಿರತ ಟೋಲ್ ಸಿಬ್ಬಂದಿ ಮೇಲೆ ಲಾರಿ ಹರಿದು ಸ್ಥಳದಲ್ಲೇ ಟೋಲ್ ಸಿಬ್ಬಂದಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನವಯುಗ ಟೋಲ್ ಬಳಿ ನಡೆದಿದೆ. ಗೋಪಾಲ್(40) ಮೃತ ದುರ್ದೈವಿ. ನೆಲಮಂಗಲದ ಚನ್ನಪ್ಪ ಬಡಾವಣೆ ನಿವಾಸಿಯಾಗಿದ್ದ ಗೋಪಾಲ್ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಅಜಾಗರೂಕತೆ ಚಲನೆಯಿಂದ ನಿಯಂತ್ರಣ ತಪ್ಪಿದ ಲಾರಿ ಡ್ರೈವರ್ ಟೋಲ್ ಸಿಬ್ಬಂದಿ ಗೋಪಾಲ್ ಮೇಲೆ ಲಾರಿ ಹತ್ತಿಸಿದ್ದಾನೆ. ವ್ಯಕ್ತಿ ಮೇಲೆ ಲಾರಿ ಹರಿಯುವ ದೃಶ್ಯ ಟೋಲ್ ಬಳಿಯ ಸಿಸಿ ಕ್ಯಾಮರಾದಲ್ಲಿ […]

ನೆಲಮಂಗಲ: ಕರ್ತವ್ಯ ನಿರತ ಟೋಲ್ ಸಿಬ್ಬಂದಿ ಮೇಲೆ ಲಾರಿ ಹರಿದು ಸ್ಥಳದಲ್ಲೇ ಟೋಲ್ ಸಿಬ್ಬಂದಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನವಯುಗ ಟೋಲ್ ಬಳಿ ನಡೆದಿದೆ. ಗೋಪಾಲ್(40) ಮೃತ ದುರ್ದೈವಿ.
ನೆಲಮಂಗಲದ ಚನ್ನಪ್ಪ ಬಡಾವಣೆ ನಿವಾಸಿಯಾಗಿದ್ದ ಗೋಪಾಲ್ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಅಜಾಗರೂಕತೆ ಚಲನೆಯಿಂದ ನಿಯಂತ್ರಣ ತಪ್ಪಿದ ಲಾರಿ ಡ್ರೈವರ್ ಟೋಲ್ ಸಿಬ್ಬಂದಿ ಗೋಪಾಲ್ ಮೇಲೆ ಲಾರಿ ಹತ್ತಿಸಿದ್ದಾನೆ. ವ್ಯಕ್ತಿ ಮೇಲೆ ಲಾರಿ ಹರಿಯುವ ದೃಶ್ಯ ಟೋಲ್ ಬಳಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಾರಿ ಮತ್ತು ಚಾಲಕನನ್ನ ನೆಲಮಂಗಲ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Published On - 7:20 am, Sun, 31 May 20




