ಬೆಂಗಳೂರಿನಲ್ಲಿ ಲಾಕ್​ಡೌನ್ ಉಲ್ಲಂಘಿಸಿ ಓಡಾಟ; 26 ಸಾವಿರ ವಾಹನ ಜಪ್ತಿ, 17 ಕೋಟಿ ರೂಪಾಯಿ ದಂಡ

|

Updated on: May 30, 2021 | 6:19 PM

ನಗರದಲ್ಲಿ ಪೊಲೀಸರು ಈವರೆಗೆ 36 ಸಾವಿರಕ್ಕೂ ಹೆಚ್ಚು ವಾಹನ ಜಪ್ತಿ ಮಾಡಿದ್ದಾರೆ.₹ 17 ಕೋಟಿಗೂ ಹೆಚ್ಚು ಮೊತ್ತದ ದಂಡ ವಸೂಲಿಯಾಗಿದೆ. ಮಾಸ್ಕ್​ ಧರಿಸದವರಿಂದ ಈವರೆಗೆ ಒಟ್ಟು ₹ 3.91 ಕೋಟಿ ದಂಡ ವಸೂಲಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ಲಾಕ್​ಡೌನ್ ಉಲ್ಲಂಘಿಸಿ ಓಡಾಟ; 26 ಸಾವಿರ ವಾಹನ ಜಪ್ತಿ, 17 ಕೋಟಿ ರೂಪಾಯಿ ದಂಡ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಲಾಕ್​ಡೌನ್​​ ನಿಯಮಗಳನ್ನು ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರನ್ನು ತಡೆದು, ನಗರದಲ್ಲಿ ಪೊಲೀಸರು ಈವರೆಗೆ 36 ಸಾವಿರಕ್ಕೂ ಹೆಚ್ಚು ವಾಹನ ಜಪ್ತಿ ಮಾಡಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ₹ 17 ಕೋಟಿಗೂ ಹೆಚ್ಚು ಮೊತ್ತದ ದಂಡ ವಸೂಲಿಯಾಗಿದೆ. ಮಾಸ್ಕ್​ ಧರಿಸದವರಿಂದ ಈವರೆಗೆ ಒಟ್ಟು ₹ 3.91 ಕೋಟಿ ದಂಡ ವಸೂಲಿ ಮಾಡಲಾಗಿದೆ.

ನಗರದಲ್ಲಿ ಈವರೆಗೆ ಒಟ್ಟು 35,905 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಅದರಲ್ಲಿ 32 ಸಾವಿರ ದ್ವಿಚಕ್ರ ವಾಹನಗಳು, 1678 ಆಟೊಗಳು, 2024 ಕಾರುಗಳು ಸೇರಿವೆ. ಈ ವಾಹನಗಳನ್ನು ಮಾಲೀಕರು ವಾಪಸ್ ಪಡೆಯಲು ಮಾಲೀಕರು ದಂಡ ಕಟ್ಟಬೇಕಿದೆ. ಮಾಸ್ಕ್​ ಧರಿಸದವರಿಗೆ ಮತ್ತು ಸಾಮಾಜಿಕ ಅಂತರ ಕಾಪಾಡದವರಿಗೂ ಪೊಲೀಸರು ದಂಡ ವಿಧಿಸಿದ್ದಾರೆ. ಇಂಥವರಿಂದ ಈವರೆಗೆ ₹ 3.91 ಕೋಟಿ ದಂಡ ವಸೂಲಿ ಮಾಡಲಾಗಿದೆ.

ನಿಗದಿತ ಅವಧಿ ಮೀರಿ ತೆರೆದ ಅಂಗಡಿಗಳಿಗೂ ದಂಡ
ಲಾಕ್​ಡೌನ್​ ಹಿನ್ನೆಲೆ ಬೆಂಗಳೂರಿನಾದ್ಯಂತ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಶಿವಾಜಿನಗರ ಸೇರಿದಂತೆ ಹಲವೆಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಈಚೆಗೆ ಶಿವಾಜಿನಗರದಲ್ಲಿ ಎಂದಿನಂತೆ ಜನ ಸಂಚಾರ, ಬೈಕ್ ಹಾಗೂ ಆಟೊಗಳ ಸಂಚಾರ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿಕ್ರಮಕ್ಕೆ ಮುಂದಾದರು.

ಬೆಳ್ ಬೆಳಗ್ಗೆ ಮಾರ್ಕೆಟ್​ಗೆ ಬೈಕ್​ನಲ್ಲಿ ಹೆಲ್ಮೆಟ್ ಹಾಕದೆ ತೆರಳಿದ ಜನರಿಗೂ ಪೊಲೀಸರು ದಂಡ ವಿಧಿಸಿದರು. ಕಡೆ ಅಂಗಡಿ ಮುಂಗಟ್ಟುಗಳನ್ನು ಅವಧಿ ಮೀರಿ ತೆರೆದಿದ್ದವರಿಗೂ ದಂಡ ಹಾಕಲಾಯಿತು. ಅಂಗಡಿಗಳನ್ನು ನಂತರ ಪೊಲೀಸರು ಬಂದ್ ಮಾಡಿಸಿದರು.

ಲಾಕ್​ಡೌನ್ ಭವಿಷ್ಯ ಸಾರ್ವಜನಿಕ ಸಹಕಾರ ಅವಲಂಬಿಸಿದೆ: ಯಡಿಯೂರಪ್ಪ
ಕರ್ನಾಟಕ ರಾಜ್ಯದಲ್ಲಿ ಜೂನ್ 7ರ ನಂತರವೂ ಲಾಕ್​ಡೌನ್ ವಿಸ್ತರಿಸುವ ಸಾಧ್ಯತೆ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನರ ಸಹಕಾರವನ್ನು ಪ್ರಸ್ತಾಪಿಸಿದ್ದಾರೆ. ‘ಜನರು ಸಹಕಾರ ನೀಡಿದರೆ ಜೂನ್ 7ರ ನಂತರ ಲಾಕ್​ಡೌನ್ ವಿಸ್ತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೊರೊನಾ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ ಹೇಗೆ ಕಡಿಮೆಯಾಗುತ್ತಿದೆ ಎಂಬುದನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಅವರು ಹೇಳಿದರು.

‘ಜೂನ್ 7ರ ನಂತರವೂ ಲಾಕ್​ಡೌನ್ ವಿಸ್ತರಿಸಲಾಗುವುದು’ ಎಂಬ ಗಾಳಿಸುದ್ದಿಗಳನ್ನು ಯಡಿಯೂರಪ್ಪ ತಳ್ಳಿಹಾಕಿದ್ದಾರೆ. ಲಾಕ್​ಡೌನ್ ಭವಿಷ್ಯದ ಬಗ್ಗೆ ಜೂನ್ 5ರಂದು ಪರಿಶೀಲಿಸಿ, ನಂತರ ನಿರ್ಧರಿಸಲಾಗುವುದು ಎಂದು ತಿಳಿಸಿದರು.

(Lockdown Rules Violation in Bengaluru 26 Vehicles Seized 17 Crore Fine)

ಇದನ್ನೂ ಓದಿ: ಧಾರವಾಡದ ಲಾಕ್​ಡೌನ್ ಸಡಿಲಿಕೆ ವಿರುದ್ಧ ಜನರ ಅಸಮಾಧಾನ; ಕೊರೊನಾ ಸೋಂಕು ಮತ್ತೆ ಹೆಚ್ಚಾಗುವ ಆತಂಕ

ಇದನ್ನೂ ಓದಿ: ಕರ್ನಾಟಕ ಲಾಕ್​ಡೌನ್ ಹಿನ್ನೆಲೆ; ಮೇ ತಿಂಗಳ ಮೋಟಾರು ವಾಹನ ತೆರಿಗೆಗೆ ರಾಜ್ಯದಲ್ಲಿ ವಿನಾಯಿತಿ ಘೋಷಣೆ