ಬಾಗಲಕೋಟೆ: ಇಂದು ಒಂದೇ ದಿನ 3 ಬಾಲ್ಯವಿವಾಹ ತಡೆದ ಅಧಿಕಾರಿಗಳು
ಜಿಲ್ಲೆಯಲ್ಲಿ ಇವತ್ತು ಒಟ್ಟು ಮೂರು ಕಡೆ ದಾಳಿ ಮಾಡಿ ಮೂರು ಬಾಲ್ಯ ವಿವಾಹ ತಡೆ ಹಿಡಿಯಲಾಗಿದೆ. ಖಚಿತ ಮಾಹಿತಿ ಮೇರೆಗೆ ನಮ್ಮ ಇಲಾಖೆ ಸಿಬ್ಬಂದಿ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಪೊಲೀಸರ ಸಮೇತ ದಾಳಿ ನಡೆಸಿ ಮೂರು ಮದುವೆ ತಡೆಯಲಾಗಿದೆ.
ಬಾಗಲಕೋಟೆ: ಲಾಕ್ಡೌನ್ ಮಧ್ಯೆಯೇ ನಡೆಯುತ್ತಿದ್ದ ಮೂರು ಬಾಲ್ಯವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆಗಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಬೂದಿನಗಡದಲ್ಲಿ 12 ವರ್ಷದ ಬಾಲಕಿಗೆ ವಿವಾಹ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಸೂಕ್ತ ಮಾಹಿತಿಯೊಂದಿಗೆ ದಾಳಿ ನಡೆಸಿದ ಅಧಿಕಾರಿಗಳು ಮದುವೆಯನ್ನು ತಡೆದು ಬಾಲಕಿಯನ್ನು ರಕ್ಷಿಸಿದ್ದಾರೆ. ಜತೆಗೆ ಬಾದಾಮಿ ತಾಲೂಕಿನ ಚಿಕ್ಕಹಸನಬಿಯಲ್ಲಿ 16 ವರ್ಷದ ಬಾಲಕಿಗೆ ವಿವಾಹಕ್ಕೆ ಯತ್ನಿಸುತ್ತಿದ್ದ ಮಾಹಿತಿ ತಿಳಿದು ದಾಳಿ ನಡೆಸಿದ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ.
ಇವೆರಡೇ ಅಲ್ಲದೇ ಜಿಲ್ಲೆಯಲ್ಲಿ ಇನ್ನೂ ಒಂದು ಬಾಲ್ಯ ವಿವಾಹ ನಡೆಯುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಬಾಗಲಕೋಟೆ ತಾಲೂಕಿನ ತಿಮ್ಮಾಪುರದಲ್ಲಿ 22 ವರ್ಷದ ಯುವಕನ ಜತೆ 17 ವರ್ಷದ ಬಾಲಕಿಗೆ ವಿವಾಹ ನಡೆಸಲು ಸಿದ್ಧತೆ ನಡೆಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಮದುವೆ ನಡೆಯುತ್ತಿದ್ದ ವೇಳ ದಾಳಿ ನಡೆಸಿದ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ.
ಬಾಲ್ಯ ವಿವಾಹದಿಂದ ರಕ್ಷಿಸಿದ ಮೂವರು ಬಾಲಕಿಯರಿಗೆ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದ್ದು, ಬಾಲಕಿಯರ ಪೋಷಕರಿಂದ ಅಧಿಕಾರಿಗಳು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
‘ಜಿಲ್ಲೆಯಲ್ಲಿ ಇವತ್ತು ಒಟ್ಟು ಮೂರು ಕಡೆ ದಾಳಿ ಮಾಡಿ ಮೂರು ಬಾಲ್ಯ ವಿವಾಹ ತಡೆ ಹಿಡಿಯಲಾಗಿದೆ. ಖಚಿತ ಮಾಹಿತಿ ಮೇರೆಗೆ ನಮ್ಮ ಇಲಾಖೆ ಸಿಬ್ಬಂದಿ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಪೊಲೀಸರ ಸಮೇತ ದಾಳಿ ನಡೆಸಿ ಮೂರು ಮದುವೆ ತಡೆಯಲಾಗಿದೆ. ಮೂವರು ಬಾಲಕಿಯರನ್ನು ಸದ್ಯ ಬಾಗಲಕೋಟೆ ಬಾಲಕಿಯರ ಬಾಲಮಂದಿರದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.ಇನ್ನು ಬಾಲಕಿಯರ ಪೋಷಕರಿಂದ ಕಾನೂನು ಪ್ರಕಾರ ಮದುವೆ ವಯಸ್ಸಿಗೆ ಬರುವವರೆಗೂ ಮದುವೆ ಮಾಡೋದಿಲ್ಲ ಎಂಬಂತೆ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳಿಸಲಾಗಿದೆ’ ಎಂದು ಬಾಗಲಕೋಟೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಉಪನಿರ್ದೇಶಕ ಅಶೋಕ ಬಸಣ್ಣವರ ಟಿವಿ9ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೊವಿಡ್ ತಡೆಯಲು ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿದ್ದೇವೆ, ಸಿಎಂ ಯಡಿಯೂರಪ್ಪರ ಜತೆ ನಾವಿದ್ದೇವೆ: ಶಾಸಕ ರೇಣುಕಾಚಾರ್ಯ
24ಗಂಟೆಯಲ್ಲಿ 1.65 ಲಕ್ಷ ಹೊಸ ಕೊವಿಡ್ 19 ಪ್ರಕರಣಗಳು; ಸೋಂಕಿನ ಪ್ರಮಾಣದಲ್ಲಿ ಶೇ. 50ರಷ್ಟು ಇಳಿಕೆ (93 child marriages are stopped by govt officers in Bagalakote)