ಬಾಗಲಕೋಟೆಯಲ್ಲಿ ಹೆಚ್ಚಿದ ಕೊವಿಡ್ ಆತಂಕ; ಚಾಲುಕ್ಯ ನಗರವೊಂದರಲ್ಲೇ 12 ಜನರು ಸೋಂಕಿಗೆ ಬಲಿ

ನೂರಕ್ಕೂ ಹೆಚ್ಚು ಜನರನ್ನು ಹೋಮ್ ಐಸೊಲೇಶನ್ ಮಾಡಲಾಗಿದೆ. ಜತೆಗೆ ಲಸಿಕೆ ನೀಡುವ ಕಾರ್ಯ ಚುರುಕುಗೊಳಿಸಿದೆ. ಸೊಂಕಿತರ ಪ್ರಾಥಮಿಕ ಸಂಪರ್ಕಿತರ ಮಾಹಿತಿ ಪಡೆದು ಅವರನ್ನು ಕೂಡ ಕ್ವಾರಂಟೈನ್ ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ಕೊವಿಡ್ ಕಟ್ಟಿ ಹಾಕುವುದಕ್ಕೆ ನಿರಂತರವಾಗಿ ಪ್ರಯತ್ನ ನಡೆಸಿತ್ತಿದ್ದೇವೆ ಎಂದು ಬಾದಾಮಿ ತಹಸೀಲ್ದಾರರಾದ ಸುಹಾಸ್ ಇಂಗಳೆ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಹೆಚ್ಚಿದ ಕೊವಿಡ್ ಆತಂಕ; ಚಾಲುಕ್ಯ ನಗರವೊಂದರಲ್ಲೇ 12 ಜನರು ಸೋಂಕಿಗೆ ಬಲಿ
ಚಾಲುಕ್ಯ ನಗರವೊಂದರಲ್ಲೇ 12 ಜನರು ಸೋಂಕಿಗೆ ಬಲಿ
Follow us
preethi shettigar
|

Updated on: May 30, 2021 | 5:20 PM

ಬಾಗಲಕೋಟೆ: ಕೊರೊನಾ ಎರಡನೇ ಅಲೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್​ಡೌನ್ ಘೋಷಿಸಿದೆ. ಈ ನಿಟ್ಟಿನಲ್ಲಿ ಕೊರೊನಾ ಸೋಂಕು ಹರಡುವಿಕೆ ಕಡಿಮೆಯಾಗುತ್ತಿದೆ. ಆದರೆ ಬಾಲಕೋಟೆ ಜಿಲ್ಲೆಯಲ್ಲಿ ಮಾತ್ರ ದಿನದಿಂದ ದಿನ ಕೊರೊನಾ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಈಗಾಗಲೇ ಎರಡನೇ ಅಲೆಯಲ್ಲೇ ಬರೊಬ್ಬರಿ 137 ಜನರು ಕೊವಿಡ್​ನಿಂದ ಮೃತಪಟ್ಟಿದ್ದಾರೆ‌.ಇನ್ನು ಬ್ಲ್ಯಾಕ್ ಫಂಗಸ್ ಕೂಡ ಜಿಲ್ಲೆಯಲ್ಲಿ ಅರ್ಧಶತಕ ದಾಟಿದೆ. ಜಿಲ್ಲೆಯಲ್ಲಿ ಒಂದು ಕಡೆ ಕೊರೊನಾ, ಇನ್ನೊಂದು ಕಡೆ ಬ್ಲ್ಯಾಕ್ ಫಂಗಸ್ ಸೋಂಕು ಮುಂದುವರೆಯುತ್ತಲೇ ಇದೆ. ಈ ಮಧ್ಯೆ ಬಾಲಕೋಟೆಯ ಚಾಲುಕ್ಯ ನಗರದಲ್ಲಿ ಬರೊಬ್ಬರಿ 12 ಜನರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಈಗ ಆತಂಕ ಸೃಷ್ಟಿಯಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಲ್ಲಿ ಈಗ ಭಯದ ವಾತಾವಣರ ಸೃಷ್ಟಿಯಾಗಿದೆ. ಅದರಲ್ಲೂ ಚಾಲುಕ್ಯ ನಗರದಲ್ಲಿ ಓಡಾಡುವುದಕ್ಕೂ ಜನರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಕೊರೊನಾ ಎರಡನೇ ಅಲೆ. ಚಾಲುಕ್ಯ ನಗರದ ಒಟ್ಟು 12 ಸೋಂಕಿಗೆ ಜನರು ಬಲಿಯಾಗಿದ್ದಾರೆ. 110 ಕ್ಕೂ ಹೆಚ್ಚು ಜನರಿಗೆ ಕೊವಿಡ್ ಸೊಂಕು ಧೃಡಪಪಟ್ಟಿದೆ. ಈ ನಿಟ್ಟಿನಲ್ಲಿ ತಾಲ್ಲೂಕಾಡಳಿತ ಪ್ರತಿ ದಿನ ಮನೆ ಮನೆಗೆ ತೆರಳಿ ಸರ್ವೆ ಕಾರ್ಯ ಮುಂದುವರೆಸುತ್ತಿದೆ.

ನೂರಕ್ಕೂ ಹೆಚ್ಚು ಜನರನ್ನು ಹೋಮ್ ಐಸೊಲೇಶನ್ ಮಾಡಲಾಗಿದೆ. ಜತೆಗೆ ಲಸಿಕೆ ನೀಡುವ ಕಾರ್ಯ ಚುರುಕುಗೊಳಿಸಿದೆ. ಸೊಂಕಿತರ ಪ್ರಾಥಮಿಕ ಸಂಪರ್ಕಿತರ ಮಾಹಿತಿ ಪಡೆದು ಅವರನ್ನು ಕೂಡ ಕ್ವಾರಂಟೈನ್ ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ಕೊವಿಡ್ ಕಟ್ಟಿ ಹಾಕುವುದಕ್ಕೆ ನಿರಂತರವಾಗಿ ಪ್ರಯತ್ನ ನಡೆಸಿತ್ತಿದ್ದೇವೆ ಎಂದು ಬಾದಾಮಿ ತಹಸೀಲ್ದಾರರಾದ ಸುಹಾಸ್ ಇಂಗಳೆ ತಿಳಿಸಿದ್ದಾರೆ.

ಬಾದಾಮಿ ಪಟ್ಟಣದ ಚಾಲುಕ್ಯ ನಗರದಲ್ಲಿ ಸರಕಾರಿ ನೌಕರರು, ಜನಪ್ರತಿನಿಧಿಗಳು ಹಾಗೂ ದೊಡ್ಡ ದೊಡ್ಡ ವ್ಯಾಪಾರಸ್ಥರು, ಗಣ್ಯ ವ್ಯಕ್ತಿಗಳೇ ಹೆಚ್ಚಾಗಿ ವಾಸವಿದ್ದಾರೆ.ಇನ್ನು ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡ, ಮಾಜಿ ಶಾಸಕ ಬಿಬಿ ಚಿಮ್ಮನಕಟ್ಟಿ ಮನೆ ಕೂಡ ಇದೇ ವ್ಯಾಪ್ತಿಯಲ್ಲಿದೆ. ಸದ್ಯ ಚಾಲುಕ್ಯ ನಗರ ಮಾತ್ರ ಬಾದಾಮಿ ಪಟ್ಟಣದಲ್ಲಿ ಅಪಾಯಕಾರಿ ವಲಯವಾಗಿ ಪರಿವರ್ತನೆಯಾಗಿದೆ.

ಈ ಭಾಗದ ಜನರಲ್ಲಿ ಸದ್ಯ ಆತಂಕ ಶುರುವಾಗಿದ್ದು,ಕೆಲವರು ಅನಿವಾರ್ಯ ಕಾರಣದಿಂದ ಹೊರಗಡೆ ಬರುತ್ತಿದ್ದಾರೆ. ಹೊರತು ಮನದಲ್ಲಿ ಭಯ ಮಾತ್ರ ನಿಂತಿಲ್ಲ. ಇನ್ನು ಸೊಂಕಿತರು ಸರಿಯಾಗಿ ಐಸೊಲೇಶನ್​ಗೆ ಒಳಗಾಗುತ್ತಿಲ್ಲ. ಸೊಂಕಿತರು ಮನೆ ಬಿಟ್ಟು ಹೊರಗಡೆ ಬರುತ್ತಿದ್ದಾರೆ. ಕೆಲವರು, ಬೆಳಿಗ್ಗೆ ತರಕಾರಿ ದಿನಸಿ ತರೋದಕ್ಕೆ ಅಂತ ಹೋಗುತ್ತಿದ್ದಾರೆ. ಅಂತವರ ಮೇಲೆ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಂಡಿಲ್ಲ. ಎಚ್ಚರಿಕೆ ನೀಡಿಲ್ಲ ಹೀಗಾಗಿ ಕೊರೊನಾ ಹೆಚ್ಚಾಗುತ್ತಿದೆ ಎಂದು ಸ್ಥಳೀಯರಾದ ಮಹೇಶ್ ಹಟ್ಟಿ ಆರೋಪಿಸಿದ್ದಾರೆ.

ಅಧಿಕಾರಿಗಳು ಕಟ್ಟನಿಟ್ಟಿನ ಐಸೊಲೇಶನ್ ಮಾಡಬೇಕು. ಇಲ್ಲ ಅವರನ್ನು ಮನೆ ಬಿಟ್ಟು ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಬೇಕು. ಇನ್ನು ಚಾಲುಕ್ಯ ನಗರದಲ್ಲಿ ಸಮರ್ಪಕವಾಗಿ ಪ್ರತಿ ಮನೆಗೂ ಕೋವಿಡ್ ಮೆಡಿಸಿನ್ ಕಿಟ್ ಕೊಡಬೇಕು. ಜೊತೆಗೆ ಚಾಲುಕ್ಯ ನಗರವನ್ನು ಮೊದಲ ಅಲೆಯ ಮಾದರಿಯಲ್ಲಿ ಸೀಲ್​ಡೌನ್ ಮಾಡಬೇಕು ಆಗ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯ. ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಂಡು ಜನರ ಭಯ ದೂರ ಮಾಡಬೇಕು ಎಂದು ಸ್ಥಳೀಯರಾದ ಎಸ್. ಹೆಚ್. ವಾಸನದ ತಿಳಿಸಿದ್ದಾರೆ.

ಇದನ್ನೂ ಓದಿ:

ಕೊರೊನಾ ತಡೆಗೆ ಹಳ್ಳಿಗಳತ್ತ ಮುಖ ಮಾಡಿದ ಜಿಲ್ಲಾಡಳಿತ; ಕೊವಿಡ್ ನಿಯಂತ್ರಣಕ್ಕೆ ಮನೆ ಮನೆಯ ಸಮೀಕ್ಷೆ

ಕೊರೊನಾ ಸೋಂಕಿತನ ಮೃತದೇಹವನ್ನು ನದಿಗೆ ಎಸೆದು ಹೋದ ಸಂಬಂಧಿಕರು; ವೈರಲ್ ವಿಡಿಯೋ ನೋಡಿ ಪ್ರಕರಣ ದಾಖಲು

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?