ಕರ್ನಾಟಕದಲ್ಲಿ 1250 ಜನರಿಗೆ ಬ್ಲಾಕ್ ಫಂಗಸ್, 39 ಸಾವು
ಬ್ಲಾಕ್ ಫಂಗಸ್ ಕಾಯಿಲೆಯಿಂದ ಬಳಲುತ್ತಿರುವವರ ಚಿಕಿತ್ಸೆಗಾಗಿ ಪೋರ್ಟಲ್ನಲ್ಲಿ ಕೋರಿಕೆ ಬಂದಂತೆ ಔಷಧ ಪೂರೈಸಲಾಗಿದೆ. ರಾಜ್ಯ ಸರ್ಕಾರವು ಅಗತ್ಯ ಔಷಧಿ ಪೂರೈಸಲು ಆದ್ಯತೆ ನೀಡುತ್ತಿದೆ ಎಂದ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಹೇಳಿದ್ದರು.

ಬೆಂಗಳೂರು: ಕರ್ನಾಟಕದಲ್ಲಿ ಈವರೆಗೆ ಒಟ್ಟು 1,250 ಜನರಿಗೆ ಬ್ಲಾಕ್ ಫಂಗಸ್ ಸೋಂಕು ಬಂದಿದೆ. ಈ ಪೈಕಿ 39 ಜನರು ಸಾವನ್ನಪ್ಪಿದ್ದಾರೆ. ಕೇವಲ 18 ಮಂದಿ ಗುಣಮುಖರಾಗಿದ್ದಾರೆ. 1193 ರೋಗಿಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಬ್ಲಾಕ್ ಫಂಗಸ್ ಕಾಯಿಲೆಯಿಂದ ಬಳಲುತ್ತಿರುವವರ ಚಿಕಿತ್ಸೆಗಾಗಿ ಪೋರ್ಟಲ್ನಲ್ಲಿ ಕೋರಿಕೆ ಬಂದಂತೆ ಔಷಧ ಪೂರೈಸಲಾಗಿದೆ. ರಾಜ್ಯ ಸರ್ಕಾರವು ಅಗತ್ಯ ಔಷಧಿ ಪೂರೈಸಲು ಆದ್ಯತೆ ನೀಡುತ್ತಿದೆ ಎಂದು ನಿನ್ನೆಯಷ್ಟೇ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಹೇಳಿದ್ದರು.
ಈ ನಡುವೆ ರಾಜ್ಯದಲ್ಲಿ ಮಕ್ಕಳ ಮಿದುಳಿನಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ನಗರದ 14 ವರ್ಷದ ಬಾಲಕ ಮತ್ತು 11 ವರ್ಷದ ಬಾಲಕರು ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರದುರ್ಗದ 11 ವರ್ಷದ ಬಾಲಕನಿಗೆ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದ್ದು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮತ್ತೋರ್ವ ಬಳ್ಳಾರಿಯ ನಿವಾಸಿಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಚಿತ್ರದುರ್ಗದ ಬಾಲಕನಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡ ಕಾರಣ ಬಾಲಕ ಕಣ್ಣು ಕಳೆದುಕೊಂಡಿದ್ದಾನೆ. ಇಲ್ಲಿವರೆಗೂ ವಯಸ್ಕರಲ್ಲಿ ಕಾಣಿಸಿಕೊಳ್ತಿದ್ದ ಬ್ಲ್ಯಾಕ್ ಫಂಗಸ್ ಈಗ ಮಕ್ಕಳಲ್ಲಿಯೂ ಪತ್ತೆಯಾಗುತ್ತಿರುವುದು ಆತಂಕ ಉಂಟು ಮಾಡಿದೆ. ಈ ಬಗ್ಗೆ ಸರ್ಕಾರದ ಬ್ಲ್ಯಾಕ್ ಫಂಗಸ್ ಟಾಸ್ಕ್‌ಫೋರ್ಸ್ ಸದಸ್ಯೆ, ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ಮಾಹಿತಿ ನೀಡಿದ್ದಾರೆ.
18 ತಿಂಗಳ ಮಗುವಿನಲ್ಲೂ ಬ್ಲ್ಯಾಕ್ ಫಂಗಸ್ ಈ ಹಿಂದೆ ರಾಜಸ್ಥಾನದ ಬಿಕಾನೇರ್ನಲ್ಲಿ 18 ತಿಂಗಳ ಮಗುವಿನಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿತ್ತು. ಶಿಶುಗಳಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾದ ದೇಶದ ಮೊದಲ ಪ್ರಕರಣ ಇದಾಗಿತ್ತು.
(Black Fungus in 1250 people 39 deaths in Karnataka)
ಇದನ್ನೂ ಓದಿ: ಜಿಲ್ಲೆ ಜಿಲ್ಲೆಗಳಲ್ಲಿ ಬ್ಲ್ಯಾಕ್ ಫಂಗಸ್ ಆರ್ಭಟ, ಹೆಚ್ಚಾಗುತ್ತಿದೆ ಪ್ರಕರಣಗಳ ಸಂಖ್ಯೆ
ಇದನ್ನೂ ಓದಿ: Black Fungus ಕೊವಿಡ್ ರೋಗ ಇಲ್ಲದವರಿಗೂ ಬ್ಲಾಕ್ ಫಂಗಸ್ ರೋಗ ಬರುತ್ತದೆಯೇ; ತಜ್ಞರು ಏನಂತಾರೆ?
Published On - 5:24 pm, Sun, 30 May 21