ಲಾಕ್​ಡೌನ್ ಮಾಡುವಂತೆ ಸರ್ಕಾರಕ್ಕೆ ನೇರ ಸಲಹೆ ನೀಡಿದ ಮಾಜಿ ಸಿಎಂ ಹೆಚ್.​ಡಿ. ಕುಮಾರಸ್ವಾಮಿ

|

Updated on: Apr 20, 2021 | 6:15 PM

ವೈಜ್ಞಾನಿಕವಾಗಿ 15 ದಿನ ಲಾಕ್​ಡೌನ್ ಮಾಡಿ. ಕಾಟಾಚಾರಕ್ಕೆ ಒಂದು ವಾರ ಮಾಡುವುದಲ್ಲ. ಕೊರೊನಾ ಸೋಂಕಿನ ಚೈನ್ ಮುರಿಯಬೇಕು ಅಂದ್ರೆ 15 ದಿನ ಲಾಕ್​ಡೌನ್ ಮಾಡಿ ಎಂದು ಸ್ಪಷ್ಟ ಮಾತಿನಲ್ಲಿ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.

ಲಾಕ್​ಡೌನ್ ಮಾಡುವಂತೆ ಸರ್ಕಾರಕ್ಕೆ ನೇರ ಸಲಹೆ ನೀಡಿದ ಮಾಜಿ ಸಿಎಂ ಹೆಚ್.​ಡಿ. ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ
Follow us on

ಬೆಂಗಳೂರು: ರಾಜ್ಯದಲ್ಲಿ ಕೆಲವು ಭಾಗಗಳಲ್ಲಿ ಕೊರೊನಾ ಸೋಂಕಿನ ಎರಡನೆಯ ಅಲೆ ವಿಪರೀತವಾಗಿದೆ. ಅದಕ್ಕೆ ಕಡಿವಾಣ ಹಾಕಬೇಕೆಂದರೆ ನೈಟ್ ಕರ್ಫ್ಯೂನಿಂದ ಯಾವುದೇ ಪ್ರಯೋಜನ‌ ಆಗುವುದಿಲ್ಲ. ಹಾಗಾಗಿ ಲಾಕ್​ಡೌನ್ ಮಾಡಿ, ಲಾಕ್​ಡೌನ್ ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ರಾಜ್ಯಪಾಲ ವಜೂಭಾಯಿ ವಾಲಾ ಅವರು ಕೊರೊನಾ ಸಂಕಷ್ಟದ ಹಿನ್ನೆಲೆ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಕುಮಾರಸ್ವಾಮಿ ತಮ್ಮ ಸಲಹೆಯನ್ನು ಸರ್ಕಾರದ ಮುಂದಿಟ್ಟರು. ಇನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ ಅಸಲಿಗೆ ರಾಜ್ಯಪಾಲರು ಸಭೆ ಕರೆದಿರುವುದೇ ಕಾನೂನುಬಾಹಿರ. ಇದು ಸಂವಿಧಾನ ಬಾಹಿರ ಎಂದು ಕಿಡಿಕಾರಿದರು.

ಲಾಕ್​ಡೌನ್​ ವಿಚಾರದಲ್ಲಿ ಯಾವುದೇ ಮರ್ಜಿ ಬೇಡ:
ಸ್ವತಃ ಕೊರೊನಾ ಸೋಂಕಿತರಾಗಿ ಪಡಿಪಾಟಲು ಪಟ್ಟಿರುವ ಮಾಜಿ ಸಿಎಂ ಹೆಚ್​ಡಿಕೆ ಅವರು ಕೊರೊನಾ ಮತ್ತು ಈಗಿನ ಸರ್ಕಾರಿ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಿಸಿದ್ದಾರೆ. ಜನರ ಜೀವನದ ಜೊತೆ ಚೆಲ್ಲಾಟ ಆಡಬೇಡಿ. ಜನರ ಜೀವನ ಉಳಿಸುವುದು ಸರ್ಕಾರದ ಆದ್ಯ ಕರ್ತವ್ಯ. ನಾನು ಯಾರ ಬಗ್ಗೆಯೂ ಸಹ ಆಕ್ಷೇಪ ಮಾಡಲ್ಲ. ಕೆಲವರು ಆಕ್ಷೇಪ ಎತ್ತಿದರೂ ಮೊದಲು ಲಾಕ್​ಡೌನ್ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ವೈಜ್ಞಾನಿಕವಾಗಿ 15 ದಿನ ಲಾಕ್​ಡೌನ್ ಮಾಡಿ. ಕಾಟಾಚಾರಕ್ಕೆ ಒಂದು ವಾರ ಮಾಡುವುದಲ್ಲ. ಕೊರೊನಾ ಸೋಂಕಿನ ಚೈನ್ ಮುರಿಯಬೇಕು ಅಂದ್ರೆ 15 ದಿನ ಲಾಕ್​ಡೌನ್ ಮಾಡಿ ಎಂದು ಸ್ಪಷ್ಟ ಮಾತಿನಲ್ಲಿ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.

ಬೆಂಗಳೂರು ಸೇರಿ ಹೆಚ್ಚು ಕೇಸ್​ ಇರುವ ಕಡೆ ಲಾಕ್​ಡೌನ್ ಆಗಬೇಕು. ಹೆಚ್ಚು ಪ್ರಕರಣ ಇರುವ ಜಿಲ್ಲೆಗಳಲ್ಲಿಯೂ ಲಾಕ್​ಡೌನ್ ಮಾಡಿ. ಕನಿಷ್ಠ 15 ದಿನಗಳ ಕಾಲ‌ ಲಾಕ್​ಡೌನ್ ಮಾಡಿ ಎಂದು HDK ಸಲಹೆ ನೀಡಿದರು. ಇದೇ ವೇಳೆ ಲಾಕ್​ಡೌನ್ ಹಾವಳಿಯಿಂದ ಏನೆಲ್ಲ ಕಷ್ಟಕಾರ್ಪಣ್ಯಗಳು ಎದುರಾಗಲಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದ ಕುಮಾರಸ್ವಾಮಿ ಅವರು ಬಡವರಿಗೆ ಒಂದು ತಿಂಗಳು ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಬಗ್ಗೆ ಗಮನಹರಿಸಿ. ಹಾಗಾಗಿ ನಾನು ಸಿಎಂ‌ ಯಡಿಯೂರಪ್ಪ ಅವರಿಗೆ ಮನವಿ ಮಾಡ್ತೇನೆ ಮೊದಲು ಲಾಕ್ ಡೌನ್ ಮಾಡಿ ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದರು. ಅಧಿಕಾರಿಗಳ ಮೂಲಕ‌ ಆರ್ಥಿಕ ನೆರವು ನೀಡಲು ಆಗಲ್ಲ. ಬದಲಿಗೆ ಪರ್ಯಾಯ ಮಾರ್ಗದ ಮೂಲಕ‌ ಯೋಚನೆ ಮಾಡಿ ಎಂದೂ ಗವರ್ನರ್​ ನೇತೃತ್ವದ ಸರ್ವಪಕ್ಷ ಸಭೆಯಲ್ಲಿ HDK ತಮ್ಮ ಸಲಹೆ ಮುಂದಿಟ್ಟಿದ್ದಾರೆ.

(Lockdown some cities due to coronavirus former chief minister hd kumaraswamy suggests karnataka government)

Published On - 6:05 pm, Tue, 20 April 21