ಬಿಜೆಪಿ
Image Credit source: The Hindu
ನವದೆಹಲಿ, (ಮಾರ್ಚ್ 13): ಲೋಕಸಭಾ ಚುನಾವಣೆಗೆ(Lok Sabha Elections 2024) ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಅದರಲ್ಲೂ ಮುಖ್ಯವಾಗಿ ಹಲವು ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಿದೆ. ಒಟ್ಟು ಎಂಟು ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದ್ದು, ಆರು ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದರಿಂದ ಘಟಾನುಘಟಿ ನಾಯಕರುಗಳಿಗೆ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದೆ.
8 ಹಾಲಿ ಸಂಸದರಿಗೆ ಟಿಕೆಟ್ ಮಿಸ್
ಕರ್ನಾಟಕ ಬಿಜೆಪಿಯ ಒಟ್ಟು 8 ಹಾಲಿ ಸದಸ್ಯರಿಗೆ ಈ ಬಾರಿ ಟಿಕೆಟ್ ತಪ್ಪಿದೆ. ಮೈಸೂರು-ಪ್ರತಾಪ್ ಸಿಂಹ, ಬೆಂಗಳೂರು ಉತ್ತರ- ಡಿವಿ ಸದಾನಂದ ಗೌಡ, ಕೊಪ್ಪಳ- ಕರಡಿ ಸಂಗಣ್ಣ, ಹಾವೇರಿ-ಶಿವಕುಮಾರ್ ಉದಾಸಿ, ತುಮಕೂರು-ಜಿಎಸ್ ಬಸವರಾಜು(ನಿವೃತ್ತಿ ಘೋಷಿಸಿದ್ದರು) ದಕ್ಷಿಣ ಕನ್ನಡ-ನಳಿನ್ ಕುಮಾರ್ ಕಟೀಲ್, ಚಾಮರಾಜನಗರ-ಶ್ರೀನಿವಾಸ್ ಪ್ರಸಾದ್(ನಿವೃತ್ತಿ ಘೋಷಿಸಿದ್ದರು), ಬಳ್ಳಾರಿ- ದೇವೇಂದ್ರಪ್ಪ.
ಯಾರ್ಯಾರಿಗೆ ಟಿಕೆಟ್?
- ಚಿಕ್ಕೋಡಿ ಲೋಕಸಭಾ ಕ್ಷೇತ್ರ-ಅಣ್ಣಾ ಸಾಹೇಬ್ ಜೊಲ್ಲೆ
- ಬಾಗಲಕೋಟೆ ಲೋಕಸಭಾ ಕ್ಷೇತ್ರ-ಪಿ.ಸಿ.ಗದ್ದಿಗೌಡರ್
- ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ-ಕೋಟ ಶ್ರೀನಿವಾಸ ಪೂಜಾರಿ
- ಹಾವೇರಿ ಲೋಕಸಭಾ ಕ್ಷೇತ್ರ-ಬಸವರಾಜ ಬೊಮ್ಮಾಯಿ
- ಮೈಸೂರು ಕ್ಷೇತ್ರ-ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
- ಬೆಂಗಳೂರು ಗ್ರಾಮಾಂತರ ಕ್ಷೇತ್ರ-ಡಾ.ಸಿ.ಎನ್.ಮಂಜುನಾಥ
- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ-ಶೋಭಾ ಕರಂದ್ಲಾಜೆ
- ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ-ತೇಜಸ್ವಿ ಸೂರ್ಯ
- ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ-ಪಿ.ಸಿ.ಮೋಹನ್
- ತುಮಕೂರು ಲೋಕಸಭಾ ಕ್ಷೇತ್ರ-ವಿ.ಸೋಮಣ್ಣ
- ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ-ಕ್ಯಾಪ್ಟನ್ ಬ್ರಿಜೇಶ್ ಚೌಟಾ
- ಚಾಮರಾಜನಗರ ಲೋಕಸಭಾ ಕ್ಷೇತ್ರ-ಎಸ್.ಬಾಲರಾಜು
- ಧಾರವಾಡ ಲೋಕಸಭಾ ಕ್ಷೇತ್ರ-ಪ್ರಹ್ಲಾದ್ ಜೋಶಿ
- ಕೊಪ್ಪಳ ಲೋಕಸಭಾ ಕ್ಷೇತ್ರ-ಡಾ.ಬಸವರಾಜ ತ್ಯಾವಟೂರು
- ದಾವಣಗೆರೆ ಲೋಕಸಭಾ ಕ್ಷೇತ್ರ-ಗಾಯತ್ರಿ ಸಿದ್ದೇಶ್ವರ್
- ಬಳ್ಳಾರಿ ಲೋಕಸಭಾ ಕ್ಷೇತ್ರ-ಬಿ.ಶ್ರೀರಾಮುಲು
- ಕಲಬುರಗಿ ಲೋಕಸಭಾ ಕ್ಷೇತ್ರ-ಡಾ.ಉಮೇಶ್ ಜಾಧವ್
- ಬೀದರ್ ಲೋಕಸಭಾ ಕ್ಷೇತ್ರ-ಭಗವಂತ ಖೂಬಾ
- ವಿಜಯಪುರ ಲೋಕಸಭಾ ಕ್ಷೇತ್ರ-ರಮೇಶ್ ಜಿಗಜಿಣಗಿ
- ಶಿವಮೊಗ್ಗ ಲೋಕಸಭಾ ಕ್ಷೇತ್ರ-ಬಿ.ವೈ.ರಾಘವೇಂದ್ರ
ಯಾರ ಬದಲಿಗೆ ಯಾರಿಗೆ ಟಿಕೆಟ್?
- ದಕ್ಷಿಣ ಕನ್ನಡ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲು ಬದಲಿಗೆ ಬ್ರಿಜೇಶ್ ಚೌಟಾಗೆ ಟಿಕೆಟ್
- ಮೈಸೂರು- ಪ್ರತಾಪ್ ಸಿಂಹ ಬದಲು ಯದುವೀರ ಒಡೆಯರ್ಗೆ ಟಿಕೆಟ್
- ಬಳ್ಳಾರಿಯಲ್ಲಿ ದೇವೇಂದ್ರಪ್ಪ ಬದಲು ಶ್ರೀರಾಮುಲುಗೆ ಟಿಕೆಟ್
- ಹಾವೇರಿಯಲ್ಲಿ ಶಿವಕುಮಾರ್ ಬದಲು ಬೊಮ್ಮಾಯಿಗೆ ಟಿಕೆಟ್
- ತುಮಕೂರಿನಲ್ಲಿ G.S.ಬಸವರಾಜು ಬದಲು ಸೋಮಣ್ಣ ಕಣಕ್ಕೆ
- ಕೊಪ್ಪಳದಲ್ಲಿ ಸಂಗಣ್ಣ ಕರಡಿ ಬದಲು ಡಾ.ಬಸವರಾಜ ಕ್ಯಾವಟರ್
- ಹಾಲಿ ಸಂಸದ ಸದಾನಂದಗೌಡರಿಗೆ ಕೈತಪ್ಪಿದ ಬಿಜೆಪಿ ಟಿಕೆಟ್
- ಬೆಂಗಳೂರು ಉತ್ತರ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಕಣಕ್ಕೆ
- ಚಾಮರಾಜನಗರದಿಂದ ವಿ.ಶ್ರೀನಿವಾಸ ಪ್ರಸಾದ್ ಬದಲಿಗೆ ಎಸ್.ಬಾಲರಾಜುಗೆ ಟಿಕೆಟ್
ಲೋಕಸಭಾ ಚುನಾವಣೆಗೆ ಹೊಸಮುಖಗಳು
- ಡಾ. ಸಿ.ಎನ್. ಮಂಜುನಾಥ್-ಬೆಂಗಳೂರು ಗ್ರಾಮಾಂತರ
- ಯದುವೀರ ಕೃಷ್ಣದತ್ತ ಒಡೆಯರ್-ಮೈಸೂರು-ಕೊಡಗು
- ಕ್ಯಾ. ಬ್ರಿಜೇಶ್ ಚೌಟ-ದಕ್ಷಿಣ ಕನ್ನಡ
- ಕೋಟ ಶ್ರೀನಿವಾಸ ಪೂಜಾರಿ-ಉಡುಪಿ-ಚಿಕ್ಕಮಗಳೂರು
- ಗಾಯತ್ರಿ ಸಿದ್ದೇಶ್ವರ-ದಾವಣಗೆರೆ
- ಡಾ. ಬಸವರಾಜ ಕ್ಯಾವತ್ತೂರ್-ಕೊಪ್ಪಳ
ಜೆಡಿಎಸ್ಗೆ ಬಿಟ್ಟುಕೊಟ್ಟ ಮೂರು ಕ್ಷೇತ್ರಗಳು
ಐದು ಕ್ಷೇತ್ರಗಳ ಟಿಕೆಟ್ ಕಾಯ್ದಿರಿಸಿದ ಬಿಜೆಪಿ
ಒಟ್ಟು 28 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದು, ಇನ್ನುಳಿದ 25 ಕ್ಷೇತ್ರಗಳ ಪೈಕಿ ಈಗ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಇನ್ನುಳಿದಂತೆ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ರಾಯಚೂರು, ಚಿತ್ರದುರ್ಗ, ಬೆಳಗಾವಿ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಕ್ಷೇತ್ರಗಳ ಟಿಕೆಟ್ ಕಾಯ್ದಿರಿಸಿದೆ.
ಉಳಿದ ಐದು ಕ್ಷೇತ್ರಗಳಲ್ಲಿ ಟಿಕೆಟ್ ಫೈಟ್
- ಚಿತ್ರದುರ್ಗ ಕ್ಷೇತ್ರದಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮತ್ತು ಮಾಜಿ ಸಂಸದ ಜನಾರ್ದನ ಸ್ವಾಮಿ ನಡುವೆ ಫೈಟ್
- ಬೆಳಗಾವಿ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಂಗಳಾ ಅಂಗಡಿ, ಮಹಾಂತೇಶ್ ಕವಟಗಿಮಠ, ರಮೇಶ್ ಕತ್ತಿ ನಡುವೆ ಫೈಟ್
- ಉತ್ತರ ಕನ್ನಡ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತಕುಮಾರ್ ಹೆಗಡೆ, ವಿಶ್ಚೇಶ್ವರ ಹೆಗಡೆ ಕಾಗೇರಿ, ಗೋಪಾಲ್ ಹೆಸರು ಚರ್ಚೆ
- ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ. ಕೆ. ಸುಧಾಕರ್ ಮತ್ತು ಅಲೋಕ್ ವಿಶ್ವನಾಥ್ ನಡುವೆ ಫೈಟ್
- ರಾಯಚೂರು ಕ್ಷೇತ್ರದಲ್ಲಿ ಹಾಲಿ ಸಂಸದ ರಾಜಾ ಅಮರೇಶ ನಾಯಕ್ ಮತ್ತು ಬಿ.ವಿ. ನಾಯಕ್ ನಡುವೆ ಫೈಟ್