11 ಕೆಜಿಯ ಚಿನ್ನದ ಮುಖವಾಡ: ಮತ್ತೆ ದರ್ಶನ ಪಡೆಯಲು ಮುಂದಿನ ಶಿವರಾತ್ರಿ ಬರಬೇಕು..!

|

Updated on: Mar 11, 2021 | 2:04 PM

ಫಳ ಫಳ ಹೊಳೆಯುತ್ತಿರುವ ಶಿವಲಿಂಗದ ಮುಖವಾಡವನ್ನು ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸದೆ ಇರಲಾರದು. ಅಂತಹ ಅದ್ಭುತವಾದ ಶಿವಲಿಂಗದ ಮುಖವಾಡವನ್ನು ನೋಡುವ ಸೌಭಾಗ್ಯ ಸಿಗುವುದು ಮೈಸೂರಿನ ಅರಮನೆಯಲ್ಲಿರುವ ತ್ರಿನೇಶ್ವರ ದೇವಸ್ಥಾನದಲ್ಲಿ.

11 ಕೆಜಿಯ ಚಿನ್ನದ ಮುಖವಾಡ: ಮತ್ತೆ ದರ್ಶನ ಪಡೆಯಲು ಮುಂದಿನ ಶಿವರಾತ್ರಿ ಬರಬೇಕು..!
11 ಕೆಜಿಯ ಚಿನ್ನದ ಮುಖವಾಡ
Follow us on

ಮೈಸೂರು: ಶಿವರಾತ್ರಿ ಬಂತೆಂದರೆ ಸಾಕು ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತದೆ. ಸರ್ವಾಲಂಕೃತವಾದ ಶಿವನನ್ನು ನೋಡುವುದೇ ಒಂದು ಭಾಗ್ಯ. ಇನ್ನು ಮೈಸೂರಿನ ಅರಮನೆಯಲ್ಲಿರುವ ತ್ರಿನೇಶ್ವರ ದೇವಸ್ಥಾನದಲ್ಲಿ ಶಿವ ಲಿಂಗವನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ.

ಫಳ ಫಳ ಹೊಳೆಯುತ್ತಿರುವ ಶಿವಲಿಂಗದ ಮುಖವಾಡವನ್ನು ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸದೆ ಇರಲಾರದು. ಅಂತಹ ಅದ್ಭುತವಾದ ಶಿವಲಿಂಗದ ಮುಖವಾಡವನ್ನು ನೋಡುವ ಸೌಭಾಗ್ಯ ಸಿಗುವುದು ಮೈಸೂರಿನ ಅರಮನೆಯಲ್ಲಿರುವ ತ್ರಿನೇಶ್ವರ ದೇವಸ್ಥಾನದಲ್ಲಿ. ಅದು ಶಿವರಾತ್ರಿ ಹಬ್ಬದಲ್ಲಿ ಮಾತ್ರ. ಶಿವರಾತ್ರಿ ಹಬ್ಬದ ಪ್ರಯುಕ್ತ ಸುಮಾರು 11 ಕೆಜಿ ತೂಕದ ಚಿನ್ನದ ಮುಖವಾಡವನ್ನು ಅರಮನೆ ಆವರಣದಲ್ಲಿರುವ ತ್ರೀನೇಶ್ವರ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ಧರಿಸಲಾಗಿದೆ. ಈ ಚಿನ್ನದ ಮುಖವಾಡವನ್ನು ಮೈಸೂರು ಅರಸ ಜಯಚಾಮರಾಜೇಂದ್ರ ಒಡೆಯರ್ ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡಿದ್ದರು. ಇದನ್ನು ವರ್ಷ ಪೂರ್ತಿ ಮುಜರಾಯಿ ಇಲಾಖೆಯ ಖಜಾನೆಯಲ್ಲಿ ಭದ್ರವಾಗಿ ಇಟ್ಟಿರಲಾಗುತ್ತದೆ. ಶಿವರಾತ್ರಿಯ ಹಿಂದಿನ ಈ ಮುಖವಾಡವನ್ನು ದೇವಸ್ಥಾನಕ್ಕೆ ತರಲಾಗುತ್ತದೆ.

ಜಯಚಾಮರಾಜೇಂದ್ರ ಒಡೆಯರ್​ರವರ ಕಾಣಿಕೆ
ಜಯಚಾಮರಾಜೇಂದ್ರ ಒಡೆಯರ್​ರವರ ಕಾಣಿಕೆಯಾಗಿ ನೀಡಿರುವ ಈ ಚಿನ್ನದ ಮುಖವಾಡ ಸದ್ಯ ಮುಜರಾಯಿ ಇಲಾಖೆಯ ವಶದಲ್ಲಿದೆ. ಶಿವರಾತ್ರಿಯ ಹಿಂದಿನ ದಿನ ಪೋಲಿಸ್ ಭದ್ರತೆಯಲ್ಲಿ ಇದನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಬರಲಾಗುತ್ತದೆ. ನಂತರ ಇದನ್ನು ದೇವಸ್ಥಾನದ ಆಗಮಿಕರ ವಶಕ್ಕೆ ನೀಡಲಾಗುತ್ತದೆ. ಬಳಿಕ ಚಿನ್ನದ ಶಿವನ ಮುಖವಾಡಕ್ಕೆ ಗಂಗೆಯನ್ನು ಜೋಡಿಸಲಾಗುತ್ತದೆ. ಜೊತೆಗೆ ಬೆಳ್ಳಿ ಲೇಪಿತ
ಅರ್ಧ ಚಂದ್ರನನ್ನು ಅಳವಡಿಸಲಾಗುತ್ತದೆ. ಹಬ್ಬದ ದಿನ ಬೆಳಗ್ಗೆ 6 ಗಂಟೆಗೆ ಶಿವಲಿಂಗಕ್ಕೆ ವಿವಿಧ ಅಭಿಷೇಕಗಳನ್ನು ಮಾಡಿದ ನಂತರ ಈ ಮುಖವಾಡವನ್ನು ತೊಡಿಸಲಾಗುತ್ತದೆ. ಚಿನ್ನದ ಲೇಪಿತ ಮುಖವಾಡ ಧಾರಣೆ ಮಾಡಿದ ಶಿವನನ್ನು ನೋಡಲು ಶಿವರಾತ್ರಿ ದಿವಸ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಶಿವನ ದರ್ಶನ ಮಾಡುತ್ತಾರೆ.

ಜಯಚಾಮರಾಜೇಂದ್ರ ಒಡೆಯರ್​ರವರ ಕಾಣಿಕೆಯಾಗಿ ನೀಡಿರುವ ಈ ಚಿನ್ನದ ಮುಖವಾಡ ಸದ್ಯ ಮುಜರಾಯಿ ಇಲಾಖೆಯ ವಶದಲ್ಲಿದೆ.

ಶಿವರಾತ್ರಿಯ ಹಿಂದಿನ ದಿನ ಪೋಲಿಸ್ ಭದ್ರತೆಯಲ್ಲಿ ಇದನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಬರಲಾಗುತ್ತದೆ. ನಂತರ ಇದನ್ನು ದೇವಸ್ಥಾನದ ಆಗಮಿಕರ ವಶಕ್ಕೆ ನೀಡಲಾಗುತ್ತದೆ.

ಶಿವರಾತ್ರಿ ಹಬ್ಬ ಮುಗಿದ ನಂತರ ಈ ಚಿನ್ನದ ಮುಖವಾಡವನ್ನು ಮತ್ತೆ ಮುಜರಾಯಿ ಇಲಾಖೆಗೆ ಹಿಂದಿರುಗಿಸಲಾಗುತ್ತದೆ. ಮತ್ತೆ ಇದರ ದರ್ಶನ ಪಡೆಯಲು ಮುಂದಿನ ಶಿವರಾತ್ರಿಯವರಗೂ ಕಾಯಬೇಕು. ಚಿನ್ನದ ಮುಖವಾಡದ ಶಿವನನ್ನು ನೋಡಬೇಕಾದರೇ ಮೈಸೂರಿನ ಅರಮನೆಯ ತ್ರಿನೇಶ್ವರ ದೇವಾಲಯಕ್ಕೆ ಭೇಟಿ ನೀಡಬೇಕು.

ಇದನ್ನೂ ಓದಿ

Maha Shivaratri 2021: ಮಹಾಶಿವರಾತ್ರಿಯಂದು ಉಪವಾಸ ಮಾಡುವುದು ಹೇಗೆ? ಇದರ ಹಿಂದಿರುವ ಕಾರಣವೇನು?

Maha Shivaratri 2021: ಮಹಾಶಿವರಾತ್ರಿ ಆಚರಣೆಯ ಹುಟ್ಟು ಹೇಗಾಯ್ತು?: ಇಲ್ಲಿದೆ ಸಂಪೂರ್ಣ ಮಾಹಿತಿ