ಉಡುಪಿ ರೈತರ ನೆಮ್ಮದಿ ಕೆಡಿಸಿದ ಉಪ್ಪು ನೀರು
ತಾಲೂಕಿನ ಉದ್ಯಾವರ ಏಣೆಗುಡ್ಡೆ ಗ್ರಾಮ ಪರಿಸರದಲ್ಲಿ ಈ ಬಾರಿ ನದಿ ಕೊರೆತದ ತೀವ್ರತೆ ಜೋರಾಗಿದೆ. ಈ ಪರಿಸರದಲ್ಲಿ ಸುಮಾರು 40 ರಿಂದ 50 ಮನೆಗಳಿದ್ದು, ಮುನ್ನೂರಕ್ಕೂ ಅಧಿಕ ನಿವಾಸಿಗಳಿದ್ದಾರೆ. ಭೂಮಿಯನ್ನು ತಳದಿಂದಲೇ ಕೊರೆಯುತ್ತಾ ಸಾಗುವ ನೀರಿನ ಹರಿವು ಸುತ್ತಮುತ್ತಲ ಭೂಮಿಯನ್ನು ತನ್ನೊಡಲಿಗೆ ಸೇರಿಸಿಕೊಳ್ಳುತ್ತಿದೆ.
ಉಡುಪಿ: ಬೇಸಿಗೆಯಲ್ಲಿ ನೀರಿಲ್ಲದೆ ಇರುವುದು ಒಂದು ಸಮಸ್ಯೆಯಾದರೆ, ಶುದ್ಧವಾದ ನೀರು ಕಲುಷಿತವಾಗುವುದು ಇನ್ನೊಂದು ಸಮಸ್ಯೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಬೇಸಿಗೆ ಆರಂಭವಾದರೆ ನದಿ ತೀರ ವಾಸಿಗಳಿಗೆ ಈ ಸಮಸ್ಯೆ ತಪ್ಪಿದ್ದಲ್ಲ. ನದಿಯ ಹೂಳೆತ್ತದೆ ಸುತ್ತ ಮುತ್ತಲ ಪ್ರದೇಶಗಳು ಮುಳುಗಿ ಹೋಗುತ್ತಿವೆ. ಸಮುದ್ರ ಕೊರೆತದ ಸಮಸ್ಯೆ ಒಂದೆಡೆಯಾದರೆ, ಉಪ್ಪು ನೀರು ನುಗ್ಗಿ ಸ್ಥಳೀಯ ವಾಸಿಗಳನ್ನು, ರೈತರನ್ನು ನೆಮ್ಮದಿ ಕೆಡಿಸುತ್ತಿದೆ.
ಜಿಲ್ಲೆಯಲ್ಲಿ ಸಮುದ್ರ ಕೊರೆತ, ನದಿ ಕೊರೆತ ನಿತ್ಯ ಜನರನ್ನು ಬಾಧಿಸುತ್ತಿದೆ. ಅಷ್ಟೇ ಅಲ್ಲದೆ ಸಮುದ್ರದ ಉಪ್ಪು ನೀರು ನುಗ್ಗಿ ಬರುವುದರಿಂದ ಉದ್ಯಾವರ ಏಣೆಗುಡ್ಡೆ ಪ್ರದೇಶದ ನಿವಾಸಿಗಳು ಶುದ್ಧ ಕುಡಿಯುವ ನೀರು ಸಿಗದೆ ಸಮಸ್ಯೆಗೆ ಒಳಗಾಗಿದ್ದಾರೆ. ಸದ್ದಿಲ್ಲದೆ ನದಿ ತೀರದ ಭೂ ಪ್ರದೇಶವನ್ನು ಕಬಳಿಸುತ್ತಾ ಸಾಗುವ ಈ ನದಿ ಕೊರೆತ ಅತ್ಯಂತ ಅಪಾಯಕಾರಿಯಾಗಿದೆ.
ತಾಲೂಕಿನ ಉದ್ಯಾವರ ಏಣೆಗುಡ್ಡೆ ಗ್ರಾಮ ಪರಿಸರದಲ್ಲಿ ಈ ಬಾರಿ ನದಿ ಕೊರೆತದ ತೀವ್ರತೆ ಜೋರಾಗಿದೆ. ಈ ಪರಿಸರದಲ್ಲಿ ಸುಮಾರು 40 ರಿಂದ 50 ಮನೆಗಳಿದ್ದು, ಮುನ್ನೂರಕ್ಕೂ ಅಧಿಕ ನಿವಾಸಿಗಳಿದ್ದಾರೆ. ಭೂಮಿಯನ್ನು ತಳದಿಂದಲೇ ಕೊರೆಯುತ್ತಾ ಸಾಗುವ ನೀರಿನ ಹರಿವು ಸುತ್ತಮುತ್ತಲ ಭೂಮಿಯನ್ನು ತನ್ನೊಡಲಿಗೆ ಸೇರಿಸಿಕೊಳ್ಳುತ್ತಿದೆ. ಉದ್ಯಾವರ ಸೇತುವೆಗೆ ಅಪಾಯ ಎದುರಾಗಬಹುದೆಂಬ ಕಾರಣದಿಂದ ಹೂಳು ಎತ್ತದೆ ಇರುವುದು ನದಿಯಲ್ಲಿ ಮರಳು ತುಂಬಿ ನೀರು ಹರಿವಿಗೆ ಜಾಗವಿಲ್ಲದಂತಾಗಿದೆ. ನದಿ ಸಮುದ್ರ ಸೇರುವ ಜಾಗದಲ್ಲಿ ಹೂಳು ತುಂಬಿದ ಕಾರಣ ಉಪ್ಪು ನೀರು ನುಗ್ಗಿ ಬಂದು ಕೃಷಿ ನಾಶವಾಗುತ್ತಿದೆ. ಜೊತೆಗೆ ಕುಡಿಯುವ ನೀರು ಕೂಡ ಉಪ್ಪು ಮಿಶ್ರಿತವಾಗಿದೆ. ಅಲ್ಲದೇ ಬಾವಿಯ ನೀರು ಕೂಡಾ ಹಾಳಾಗಿದೆ.
ಇದಕ್ಕೆ ಇರುವ ಪರಿಹಾರ? ಮಾತ್ರವಲ್ಲದೇ ನದಿಯಲ್ಲಿ ತುಂಬಿರುವ ಹೂಳು ನದಿ ಕೊರೆತವನ್ನು ಹೆಚ್ಚು ಮಾಡಿದೆ. ನದಿಗಳು ಹರಿಯುತ್ತಾ ಸಮುದ್ರ ಸೇರುತ್ತವೆ. ನದಿಗಳು ಸಮುದ್ರ ಸೇರುವ ಪ್ರದೇಶದಲ್ಲಿ ಕೊರೆತದ ಅಪಾಯ ಹೆಚ್ಚು. ಹರಿಯುವ ನದಿಯ ಇಕ್ಕೆಲದಲ್ಲಿ ಕಾಂಡ್ಲಾವನ ಬೆಳೆಸುವುದು ಅಥವಾ ಕಲ್ಲಿನ ತಡೆಗೋಡೆ ನಿರ್ಮಿಸುವುದು ಇದಕ್ಕಿರುವ ಪರಿಹಾರ. ಸಮುದ್ರ ಕೊರೆತಕ್ಕೆ ಪರಿಹಾರ ಕಂಡುಕೊಳ್ಳಲಾಗದ ಸರಕಾರ ನದಿ ಕೊರೆತವನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಅದೆಷ್ಟೋ ವರ್ಷಗಳಿಂದ ಕೃಷಿ ಮಾಡುತ್ತಾ ನದಿ ತಟದಲ್ಲಿ ವಾಸಿಸುತ್ತಿದ್ದ ಜನ ತಮ್ಮ ಜೀವನಾಧಾರದ ಕೃಷಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಕುಡಿಯುವ ನೀರಿನ ಬಾವಿಗಳಿಗೆ ಉಪ್ಪು ನೀರು ಸೇರುವುದರಿಂದ ಕುಡಿಯವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ
ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ, ಸರ್ಕಾರ ರೈತರ ಜೊತೆ ಸದಾ ಇರುತ್ತದೆ: ಕಂದಾಯ ಸಚಿವ ಆರ್.ಅಶೋಕ್
ವಿಕಲಚೇತನನಾದ್ರೂ ಕೃಷಿ ಕಾಯಕದಲ್ಲಿ ತೊಡಗಿ ಇತರರಿಗೆ ಮಾದರಿ.. ಇಲ್ಲಿದೆ ನೋಡಿ ವಿಶೇಷ ರೈತನ ಕೃಷಿ ಬದುಕು