ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ.. 44.98 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ವಶಕ್ಕೆ
ದುಬೈನಿಂದ ದೇವನಹಳ್ಳಿ ಬಳಿಯಿರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಗೋಗೆ ಬಂದಿದ್ದ ಪಾರ್ಸಲ್ಗಳನ್ನು ಪರಿಶೀಲನೆ ನಡೆಸುವಾಗ ಖದೀಮರ ಈ ಆಟ ಬಯಲಾಗಿದೆ. ಪಾರ್ಸಲ್ಗಳ ಪರಿಶೀಲನೆ ವೇಳೆ ಲಕ್ಷ ಲಕ್ಷ ಮೌಲ್ಯದ ವಿದೇಶಿ ವಸ್ತುಗಳು ಪತ್ತೆಯಾಗಿವೆ.
ದೇವನಹಳ್ಳಿ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಿದೇಶಗಳಿಂದ ಬೆಂಗಳೂರಿಗೆ ಅಕ್ರಮವಾಗಿ ಕಳಿಸಿದ್ದ ಐಫೋನ್, ವಾಚ್ಗಳು, ವಿದೇಶಿ ಸಿಗರೇಟ್ ಪ್ಯಾಕ್ ಮತ್ತು ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೊರಿಯರ್ ಮೂಲಕ ಸ್ಮಗ್ಲಿಂಗ್ಗೆ ಯತ್ನಿಸಿದ ವೇಳೆ ವಶಕ್ಕೆ ಪಡೆಯಲಾಗಿದೆ.
ದುಬೈನಿಂದ ದೇವನಹಳ್ಳಿ ಬಳಿಯಿರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಗೋಗೆ ಬಂದಿದ್ದ ಪಾರ್ಸಲ್ಗಳನ್ನು ಪರಿಶೀಲನೆ ನಡೆಸುವಾಗ ಖದೀಮರ ಈ ಆಟ ಬಯಲಾಗಿದೆ. ಪಾರ್ಸಲ್ಗಳ ಪರಿಶೀಲನೆ ವೇಳೆ ಲಕ್ಷ ಲಕ್ಷ ಮೌಲ್ಯದ ವಿದೇಶಿ ವಸ್ತುಗಳು ಪತ್ತೆಯಾಗಿವೆ. 20 ಸಾವಿರ ವಿದೇಶಿ ಸಿಗರೇಟ್, 15 ವಾಚ್, 32 ಮದ್ಯದ ಬಾಟಲಿಗಳು, 30 ಐ ಫೋನ್ಗಳು ಸೇರಿದಂತೆ ಒಟ್ಟು 44.98 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಲು ಸ್ಮಗ್ಲರ್ಸ್ಗಳು ಕೋರಿಯರ್ ಮೂಲಕ ವಸ್ತುಗಳನ್ನು ಕಳಿಸುತ್ತಿದ್ದರು. ಸದ್ಯ ಈಗ ಎಲ್ಲಾ ವಸ್ತುಗಳನ್ನ ವಶಕ್ಕೆ ಪಡೆದಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇನ್ನು ಕೆಲ ತಿಂಗಳ ಹಿಂದೆ ಇದೇ ರೀತಿ ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 13 ಲಕ್ಷ ಮೌಲ್ಯದ ಚಿನ್ನ ಮತ್ತು ವಿದೇಶಿ ಸಿಗರೇಟ್ಗಳನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ದುಬೈನಿಂದ ಬಂದಿದ್ದ ಪ್ರಯಾಣಿಕರೊಬ್ಬರು ಫುಡ್ ಪ್ಯಾಕೆಟ್ಗಳ ರೀತಿಯಲ್ಲಿ ಚಿನ್ನ ಮತ್ತು ಫಾರಿನ್ ಸಿಗರೇಟ್ಗಳನ್ನು ಸಾಗಿಸುತ್ತಿದ್ದರು. ಲಗೇಜ್ ಸ್ಕ್ಯಾನ್ ಮಾಡಿದ ವೇಳೆ ಅನುಮಾನ ಬಂದು ಪರಿಶೀಲಿಸಿದಾಗ ₹ 13.02 ಲಕ್ಷ ಮೌಲ್ಯದ 165.89 ಗ್ರಾಂ ಚಿನ್ನ ಹಾಗೂ 12 ಸಾವಿರ ಗ್ರಾಂನಷ್ಟು ಸಿಗರೇಟ್ ಪತ್ತೆಯಾಗಿತ್ತು. ಬಳಿಕ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ: ಅಕ್ರಮವಾಗಿ ಸಾಗಿಸುತ್ತಿದ್ದ 664 ಗ್ರಾಂ ಚಿನ್ನ ಜಪ್ತಿ: ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಬಂಗಾರ ವಶ