ಬಿಜೆಪಿಗೆ ಸೇರ್ಪಡೆಯಾದ ಮುಸಲ್ಮಾನ ವ್ತಕಿ; ಜಮಾತ್ನಲ್ಲಿ ಭುಗಿಲೆದ್ದ ಆಕ್ರೋಶ!
ಹುಬ್ಬಳ್ಳಿ - ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಪ್ರಭು ನವಲಗುಂದಮಠರವರ ನೇತೃತ್ವದಲ್ಲಿ ವಾರ್ಡ್ ನಂ.54 ರ ಮುಲ್ಲಾನ ಓಣಿ ಮುಖಂಡರಾದ ಅಬ್ದುಲ ಮುನಾಫ ಐನಾಪುರಿ ಎಂಬುವವರು ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಮುಸ್ಲಿಂ ಜಮಾತ್ನಲ್ಲಿ ಆಕ್ರೋಶ ಭುಗಿಲೆದ್ದಿದೆ.
ಹುಬ್ಬಳ್ಳಿ: ಅಬ್ದುಲ ಮುನಾಫ ಐನಾಪುರಿ ಎಂಬುವವರು ಹತ್ತು ವರ್ಷಗಳಿಂದಲೂ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರು. ಆದರೆ ಇದೇ ಮಾಚ್೯ 7 ರಂದು ತನ್ನ ಬೆಂಬಲಿಗರೊಂದಿಗೆ ಸಚಿವ ಜಗದೀಶ್ ಶೆಟ್ಟರ್ ನೈತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಇದಕ್ಕೆ ಕೆಂಡಾಮಂಡಲಗೊಂಡ ಜಮಾತ್ ಮುಖಂಡರು ಅಬ್ದುಲ ಮುನಾಫ ಐನಾಪುರಿಯನ್ನು ತಮ್ಮ ಸಮಾಜದಿಂದಲೇ ಬಹಿಷ್ಕಾರ ಮಾಡಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಪ್ರಭು ನವಲಗುಂದಮಠರವರ ನೇತೃತ್ವದಲ್ಲಿ ವಾರ್ಡ್ ನಂ.54 ರ ಮುಲ್ಲಾನ ಓಣಿ ಮುಖಂಡರಾದ ಅಬ್ದುಲ ಮುನಾಫ ಐನಾಪುರಿ ಎಂಬುವವರು ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಮುಸ್ಲಿಂ ಜಮಾತ್ನಲ್ಲಿ ಆಕ್ರೋಶ ಭುಗಿಲೆದ್ದಿದೆ.
ಮುಸ್ಲಿಂ ಸಮುದಾಯದ ಅಬ್ದುಲ್ ಮುನಾಫ್ ಐನಾಪುರಿ ಬಿಜೆಪಿಗೆ ಸೇರಿದ್ದಕ್ಕೆ ವಕ್ಪ್ ಬೋರ್ಡ್ನಲ್ಲಿರುವ ಅಂಗಡಿಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ಅಲ್ಲದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಬ್ದುಲ್ ಮುನಾಫ್ ಐನಾಪುರಿ ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಟಿವಿ9 ನೊಂದಿಗೆ ಮಾತನಾಡಿದ ಐನಾಪುರಿಯವರು ತಮಗಾಗಿರುವ ಅನ್ಯಾಯಯದ ವಿರುದ್ಧ ಆಕ್ರೋಶ ವ್ಯಕಪಡಿಸಿದ್ದಾರೆ. ತಮ್ಮಾ ಶರಿಯತ್ ಕಾನೂನಿನಲ್ಲಿ ಮುಸ್ಲಿಂರು ಇದೇ ಪಕ್ಷದಲ್ಲಿ ಇರಬೇಕು ಎಂಬುವಂತಹ ಕಡ್ಡಾಯ ನಿರ್ಣಯವಿಲ್ಲ. ನಾನು ಸ್ವಯಂ ಪ್ರೇರಿತವಾಗಿ ಬಿಜೆಪಿ ಸೇರಿದ್ದಕ್ಕೆ ನನಗೆ ಅಂಗಡಿ ಖಾಲಿ ಮಾಡುವಂತೆ ಒತ್ತಡ ಹೇರಿದ್ದಾರೆ. ಅಲ್ಲದೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನು ಈ ಘಟನೆಯಿಂದ ನೊಂದ ಐನಾಪುರಿ ಪತ್ನಿ ಆಸ್ಪತ್ರೆ ಸೇರಿದ್ದಾರಂತೆ. ಅಲ್ಲದೇ ಐನಾಪುರಿ ಕುಟುಂಬವದರ ಜೊತೆ ಅಕ್ಕಪಕ್ಕದ ಜನ ಯಾರು ಮಾತನಾಡುತ್ತಿಲ್ಲವಂತೆ. ಅಲ್ಲದೇ ಹುಬ್ಬಳ್ಳಿಯ ಮಲ್ಲಾ ಬಡಾ ಜಮಾತ್ನಿಂದಲೂ ಕೂಡಾ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಐನಾಪುರಿ ತಿಳಿಸಿದ್ದಾರೆ.
ಹುಬ್ಬಳ್ಳಿಯ ಮುಲ್ಲಾನ ಓಣಿ, ಕೌಲಪೇಟ ಸುತ್ತಮುತ್ತಲಿನ ಮುಸಲ್ಮಾನ ಮುಖಂಡರು ಹಾಗೂ ವಿವಿಧ ಪೂರ್ವ ಕ್ಷೇತ್ರದ ಮುಸಲ್ಮಾನ ಮುಂಖಡರು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ರವರ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿ ತತ್ವ ಸಿದ್ಧಾಂತ ಮೆಚ್ಚಿ ಅಭಿವೃದ್ಧಿ ಕಾರ್ಯಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಈಗ ಬಿಜೆಪಿ ಸೇರ್ಪಡೆಗೊಂಡಿದ್ದಕ್ಕೆ ಮುಸ್ಲಿಂ ಸಮಾಜದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಜಮಾತ್ನಲ್ಲಿ ನಡೆದ ಗಲಾಟೆಯ ವಿಡಿಯೋ ವೈರಲ್ ಆಗಿದ್ದು, ಪ್ರಕರಣ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಕೆಲಸ ಮೆಚ್ಚಿ ಪಕ್ಷ ಸೇರಿದ್ದೆನೆ: ನನ್ನ ನಿಲುವಿನಿಂದ ಹಿಂದೆ ಸರಿಯೋಲ್ಲ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಬ್ದುಲ ಮುನಾಫ ಐನಾಪುರಿ ನಾನು ಬಿಜೆಪಿ ಪಕ್ಷ ಹಾಗೂ ಸ್ಥಳೀಯ ನಾಯಕ ಕೆಲಸ ಮೆಚ್ಚಿ ಸ್ವ ಇಚ್ಛೆಯಿಂದ ಪಕ್ಷ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ನಾಯಕರ ವರ್ತನೆಗೆ ಬೇಸತ್ತಿದ್ದು, ಕಳೆದ ಹತ್ತು ವರ್ಷದಿಂದ ಪಕ್ಷದಲ್ಲಿ ದುಡಿದರು ಯಾವುದೇ ರೀತಿಯ ಸ್ಥಾನಮಾನ ನೀಡಿಲ್ಲ. ಅಲ್ಲದೆ ಇಲ್ಲಿ ಯಾವುದೇ ಸಾಮಾಜಿಕ ಕೆಲಸ ಆಗುತ್ತಿಲ್ಲ. ಹೀಗಾಗಿ ಬಿಜೆಪಿ ಪಕ್ಷ ಸೇರಿದ್ದೇನೆ. ಎಷ್ಟೇ ಕಿರುಕುಳ ನೀಡಿದರು ನಾನು ನನ್ನ ನಿಲುವಿನಿಂದ ಹಿಂದೆ ಸರಿಯಲ್ಲ ಎಂದರು. ಅಲ್ಲದೆ ವಕ್ಫ್ ಬೋಡ್೯ ನೀಡಿರುವ ಅಂಗಡಿ ತೆರವು ಮಾಡಲು ಜಮಾತ್ನಿಂದ ಒಂದು ವಾರದ ಗಡುವು ನೀಡಲಾಗಿದೆ. ಆದರೆ ನಾನು ಖಾಲಿ ಮಾಡಲ್ಲ. ಈ ಬಗ್ಗೆ ವಕ್ಫ್ ಬೋಡ್೯ಗೆ ಪತ್ರ ಬರೆಯುತ್ತೆನೆ ಎಂದು ಹೇಳಿದ್ದಾರೆ.
ಇದನ್ನೂ ಒದಿ
ಟಾಸ್ಕ್ ರದ್ದು ಮಾಡಲು ಕಾರಣರಾದವರಿಗೆ ಬಿಗ್ ಬಾಸ್ನಿಂದ ಶಿಕ್ಷೆ; ನಿಧಿ ಮುಖಕ್ಕೆ ಮಸಿ!
Published On - 3:39 pm, Thu, 11 March 21