ಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್​ ತಡೆಗೆ ಕ್ರಮಕೈಗೊಳ್ಳದ ಪೊಲೀಸರಿಗೆ ಹೈಕೋರ್ಟ್​ ತರಾಟೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 16, 2021 | 10:11 PM

ಬೆಂಗಳೂರು ನಗರದ ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳಿಂದ ಆಗುತ್ತಿರುವ ಶಬ್ದಮಾಲಿನ್ಯ ತಡೆಗೆ ಕ್ರಮಕೈಗೊಳ್ಳದ ಪೊಲೀಸರನ್ನು ಹೈಕೋರ್ಟ್​ ಬುಧವಾರ ತರಾಟೆಗೆ ತೆಗೆದುಕೊಂಡಿತು.

ಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್​ ತಡೆಗೆ ಕ್ರಮಕೈಗೊಳ್ಳದ ಪೊಲೀಸರಿಗೆ ಹೈಕೋರ್ಟ್​ ತರಾಟೆ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ನಗರದ ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳಿಂದ ಆಗುತ್ತಿರುವ ಶಬ್ದಮಾಲಿನ್ಯ ತಡೆಗೆ ಕ್ರಮಕೈಗೊಳ್ಳದ ಪೊಲೀಸರನ್ನು ಹೈಕೋರ್ಟ್​ ಬುಧವಾರ ತರಾಟೆಗೆ ತೆಗೆದುಕೊಂಡಿತು. ನಗರದ ಶಬ್ದಮಾಲಿನ್ಯ ಕುರಿತು ಪ್ರಮಾಣಪತ್ರ ಸಲ್ಲಿಸಿದ್ದ ಗುಪ್ತಚರ ವಿಭಾಗದ ಡಿಸಿಪಿ ಸಂತೋಷ್​ ಬಾಬು, ಟ್ರಾಫಿಕ್‌ನಿಂದಲೇ ಹೆಚ್ಚಿನ ಶಬ್ದ ಮಾಲಿನ್ಯವಾಗುತ್ತಿದೆ. ಶಬ್ದಮಾಲಿನ್ಯದ ನಿಯಮವನ್ನೇ ಬದಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.

ಡಿಸಿಪಿ ಸಲ್ಲಿಸಿದ್ದ ಪ್ರಮಾಣಪತ್ರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಧಾರ್ಮಿಕ ಕೇಂದ್ರಗಳ ಲೌಡ್ ಸ್ಪೀಕರ್ ಬಳಕೆಯ ಬಗ್ಗೆ ಪೊಲೀಸರು ಸರಿಯಾಗಿ ಮಾಹಿತಿ ಸಂಗ್ರಹಿಸಿಲ್ಲ. ಲೌಡ್ ಸ್ಪೀಕರ್‌ಗೆ ಅನುಮತಿ ಇತ್ತೋ ಇಲ್ಲವೋ ತಿಳಿಸಿಲ್ಲ. ಶಬ್ದಮಾಲಿನ್ಯದ ನಿಯಮ ಜಾರಿಗೊಳಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ನಿಯಮವನ್ನೇ ಬದಲಿಸಲು ಬಯಸಿದ್ದಾರೆ. ಪೊಲೀಸರು ಮತ್ತು ಡಿಸಿಪಿ ವರ್ತನೆ ಬಗ್ಗೆ ಜುಲೈ 1ರ ಒಳಗೆ ಪೊಲೀಸ್ ಆಯುಕ್ತರು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿತು.

ಅಕ್ರಮ ಧ್ವನಿವರ್ಧಕಗಳ ವಿರುದ್ಧ ಕೈಗೊಂಡ ಕ್ರಮದ ಮಾಹಿತಿ ಮತ್ತು ಠಾಣೆಗಳಲ್ಲಿ ಶಬ್ದ ಮಾಪಕಗಳ ಲಭ್ಯತೆ ಬಗ್ಗೆ ವಿವರ ನೀಡಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸೂಚನೆ ನೀಡಿತು.

(Loudspeakers at religious places Karnataka HC raps Bengaluru Police)

ಇದನ್ನೂ ಓದಿ: Kangana Ranaut: ಬಾಂಬೇ ಹೈಕೋರ್ಟ್​ನಲ್ಲಿ ಕಂಗನಾ ರಣಾವತ್​ಗೆ ತೀವ್ರ ಹಿನ್ನಡೆ

ಇದನ್ನೂ ಓದಿ: ಕರ್ನಾಟಕ ರಾಜ್ಯವ್ಯಾಪಿ ಕೆರೆಗಳ ಸರ್ವೆಗೆ ಹೈಕೋರ್ಟ್​ ಸೂಚನೆ: ನೀರಿ ವರದಿ ಆಧರಿಸಿ ಸಮೀಕ್ಷೆ ಸರ್ಕಾರದ ಒಪ್ಪಿಗೆ

Published On - 10:10 pm, Wed, 16 June 21