Kangana Ranaut: ಬಾಂಬೇ ಹೈಕೋರ್ಟ್ನಲ್ಲಿ ಕಂಗನಾ ರಣಾವತ್ಗೆ ತೀವ್ರ ಹಿನ್ನಡೆ
ಕಂಗನಾ ಸಿನಿಮಾ ಶೂಟಿಂಗ್ಗಾಗಿ ಆಗಸ್ಟ್ 30ರವರೆಗೆ ಹಂಗೇರಿಯಲ್ಲೇ ಇರಬೇಕಾಗುತ್ತದೆ. ಈ ಸಿನಿಮಾಗಾಗಿ ನಿರ್ಮಾಪಕರು ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಇಡೀ ಚಿತ್ರತಂಡ ಅಲ್ಲಿಗೆ ತೆರಳುತ್ತಿರುವುದರಿಂದ ಮೊದಲೇ ಎಲ್ಲವೂ ಬುಕ್ ಆಗಿದೆ. ಶೂಟಿಂಗ್ ವಿಸ್ತರಣೆ ಕೂಡ ಆಗಬಹುದು. ಹೀಗಾಗಿ, ಪಾಸ್ಪೋರ್ಟ್ ರಿನಿವಲ್ ಆಗಲೇಬೇಕಿದೆ.
ನಟಿ ಕಂಗನಾ ರಣಾವತ್ಗೆ ಬಾಂಬೇ ಹೈಕೋರ್ಟ್ನಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ. ಪಾಸ್ಪೋರ್ಟ್ ನವೀಕರಿಸಲು ಕೋರಿದ್ದ ಅರ್ಜಿ ವಿಚಾರಣೆಯನ್ನು ತಕ್ಷಣಕ್ಕೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಅವರು ವಿದೇಶಕ್ಕೆ ತೆರಳುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕಂಗನಾ ನಟಿ ಕಳೆದ ವರ್ಷ ಟ್ವೀಟ್ ಒಂದನ್ನು ಮಾಡಿದ್ದು, ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಇವರ ವಿರುದ್ಧ ದೂರು ಕೂಡ ದಾಖಲಾಗಿತ್ತು. ದೂರನ್ನು ಪರಿಶೀಲಿಸಿದ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಸೆಪ್ಟೆಂಬರ್ 15ರಂದು ಕಂಗನಾ ಅವರ ಪಾಸ್ಪೋರ್ಟ್ ಅವಧಿ ಪೂರ್ಣಗೊಳ್ಳುತ್ತಿದೆ. ಹೀಗಾಗಿ, ಅದನ್ನು ನವೀಕರಿಸಲು ಕಂಗನಾ ತೆರಳಿದ್ದರು. ಆದರೆ, ಕಂಗನಾ ವಿರುದ್ಧ ಎಫ್ಐಆರ್ ದಾಖಲಾಗಿರುವುದರಿಂದ ಪಾಸ್ಪೋರ್ಟ್ ನವೀಕರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಂಗನಾ ಎಷ್ಟೇ ಮನವಿ ಮಾಡಿಕೊಂಡರೂ ಈ ಮನವಿಗೆ ಅಧಿಕಾರಿಗಳು ಒಪ್ಪಿಲ್ಲ. ಈ ಕಾರಣಕ್ಕೆ ಕಂಗನಾ ಬಾಂಬೇ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕಂಗನಾ ಸಿನಿಮಾ ಶೂಟಿಂಗ್ಗಾಗಿ ಆಗಸ್ಟ್ 30ರವರೆಗೆ ಹಂಗೇರಿಯಲ್ಲೇ ಇರಬೇಕಾಗುತ್ತದೆ. ಈ ಸಿನಿಮಾಗಾಗಿ ನಿರ್ಮಾಪಕರು ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಇಡೀ ಚಿತ್ರತಂಡ ಅಲ್ಲಿಗೆ ತೆರಳುತ್ತಿರುವುದರಿಂದ ಮೊದಲೇ ಎಲ್ಲವೂ ಬುಕ್ ಆಗಿದೆ. ಶೂಟಿಂಗ್ ವಿಸ್ತರಣೆ ಕೂಡ ಆಗಬಹುದು. ಹೀಗಾಗಿ, ಪಾಸ್ಪೋರ್ಟ್ ರಿನಿವಲ್ ಆಗಲೇಬೇಕಿದೆ. ದಯವಿಟ್ಟು ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಬೇಕು ಎಂದು ಕಂಗನಾ ಪರ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ಕಂಗನಾ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಹೀಗಾಗಿ, ಅರ್ಜಿಯನ್ನು ತಕ್ಷಣಕ್ಕೆ ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ಬಾಂಬೇ ಹೈಕೋರ್ಟ್ ಹೇಳಿದೆ. ಇದರಿಂದ ಕಂಗನಾಗೆ ತೀವ್ರ ಹಿನ್ನಡೆ ಉಂಟಾಗಿದೆ.
ಇದನ್ನೂ ಓದಿ: Kangana Ranaut: ಹೈಕೋರ್ಟ್ ಮೆಟ್ಟಿಲೇರಿದ ಕಂಗನಾ ರಣಾವತ್; ಈ ಬಾರಿ ಮತ್ತೇನು ಕಿರಿಕ್?