ದಿವ್ಯಾ ಉರುಡುಗ ನೀಡಿದ ಉಂಗುರ ಮತ್ತೆ ಕಳೆದುಕೊಂಡು ಹುಡುಕಾಡಿದ ಅರವಿಂದ್​; ವಿಡಿಯೋ ವೈರಲ್

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಪ್ರೇಮ ಪಕ್ಷಿಗಳಂತೆ ಇದ್ದರು. ಅರವಿಂದ್ ಎಂದರೆ ತುಂಬಾನೇ ಇಷ್ಟ ಎಂದು ದಿವ್ಯಾ ಸಾಕಷ್ಟು ಬಾರಿ ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ.

ದಿವ್ಯಾ ಉರುಡುಗ ನೀಡಿದ ಉಂಗುರ ಮತ್ತೆ ಕಳೆದುಕೊಂಡು ಹುಡುಕಾಡಿದ ಅರವಿಂದ್​; ವಿಡಿಯೋ ವೈರಲ್
ಅರವಿಂದ್ ಕೆಪಿ
Rajesh Duggumane

|

Jun 16, 2021 | 7:58 PM

 ದಿವ್ಯಾ ಉರುಡುಗ ಹಾಗೂ ಅರವಿಂದ್​ ಕೆ.ಪಿ. ಬಿಗ್​ ಬಾಸ್ ಮನೆಯಲ್ಲಿ ತುಂಬಾನೇ ಅನ್ಯೋನ್ಯವಾಗಿದ್ದರು. ಇದರ ಸಂಕೇತವಾಗಿ ದಿವ್ಯಾ ತಮ್ಮ ಕೈಯಲ್ಲಿದ್ದ ಉಂಗುರವನ್ನು ಅರವಿಂದ್​ಗೆ ನೀಡಿದ್ದರು. ಆದರೆ, ಬಿಗ್​ ಬಾಸ್​ ಮನೆಯಲ್ಲಿ ಈ ಉಂಗುರ ಕಳೆದುಕೊಂಡು ಅರವಿಂದ್ ಪೇಚಿಗೆ ಸಿಲುಕಿದ್ದರು. ಈಗ ಅವರು ಮತ್ತೆ ಇದೇ ತಪ್ಪು ಮಾಡಿದ್ದಾರೆ! ಈ ವಿಡಿಯೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಪ್ರೇಮ ಪಕ್ಷಿಗಳಂತೆ ಇದ್ದರು. ಅರವಿಂದ್ ಎಂದರೆ ತುಂಬಾನೇ ಇಷ್ಟ ಎಂದು ದಿವ್ಯಾ ಸಾಕಷ್ಟು ಬಾರಿ ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ ಪ್ರಕಾರ, ಪ್ರತಿ ಸ್ಪರ್ಧಿಗಳು ತಮ್ಮಿಷ್ಟದ ವಸ್ತುಗಳನ್ನು ತಮ್ಮ ಪ್ರೀತಿಪಾತ್ರರಿಗೆ ನೀಡಬೇಕು.

ಆಗ ದಿವ್ಯಾ ಅವರು ತಮ್ಮ ತಂದೆ ನೀಡಿದ ಡೈಮಂಡ್​ ರಿಂಗ್​ಅನ್ನು ಅರವಿಂದ್​ಗೆ ನೀಡಿದ್ದರು. ಅಲ್ಲದೆ, ಇದನ್ನು ಜೋಪಾನವಾಗಿ ನೋಡಿಕೊಳ್ಳುವಂತೆ ಕೋರಿದ್ದರು. ಆದರೆ, ಅರವಿಂದ್​ ಉಂಗುರ ಕಳೆದುಕೊಂಡಿದ್ದರು. ಇದಕ್ಕಾಗಿ ಮನೆ ಮಂದಿಯೆಲ್ಲ ಹುಡುಕಾಡಿದ್ದರು. ಕೊನೆಗೂ ಈ ಉಂಗುರ ಸಿಕ್ಕಿತ್ತು. ನಂತರ ಆ ರಿಂಗ್​ ಅನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎನ್ನುವ ಭರವಸೆಯನ್ನು ದಿವ್ಯಾಗೆ ಅರವಿಂದ್ ನೀಡಿದ್ದರು.

ಬಿಗ್ ಬಾಸ್​​ ಎರಡನೇ ಇನ್ನಿಂಗ್ಸ್​ ಆರಂಭವಾಗುತ್ತಿದೆ. ಇದಕ್ಕೆ ಕಲರ್ಸ್​ ಕನ್ನಡ ವಾಹಿನಿ ಪ್ರೋಮೋಗಳನ್ನು ಹಂಚಿಕೊಳ್ಳುತ್ತಿದೆ. ಈ ವಿಡಿಯೋದಲ್ಲಿ ಅರವಿಂದ್, ‘ಇಲ್ಲೇ ಇಟ್ಟಿದ್ನಲ್ಲ, ಸಿಗುತ್ತಿಲ್ಲ. ಎಲ್ಲೋಯ್ತು? ಮತ್ತೆ ಕಳೆದುಕೊಂಡ್ರೆ ಅಷ್ಟೇ’ ಎಂದು ಉಂಗುರಕ್ಕಾಗಿ ಹುಡುಕಾಡಿದ್ದಾರೆ. ಕೊನೆಗೆ ಆ ಉಂಗುರ ಅವರ ಕೈನಲ್ಲೇ ಇರೋದು ಗಮನಕ್ಕೆ ಬಂದಿದೆ. ‘ಈ ಬಾರಿ ಕಳೆದುಕೊಳ್ಳೋ ಸೀನೆ ಇಲ್ಲ. ನಾನ್​ ರೆಡಿ’ ಎಂದು ಅರವಿಂದ್ ಹೇಳಿದ್ದಾರೆ.

ಈ ವಿಡಿಯೋ ನೋಡಿ ಸಾಕಷ್ಟು ಜನರು ಖುಷಿಪಟ್ಟಿದ್ದಾರೆ. ದಿವ್ಯಾ ಹಾಗೂ ಅರವಿಂದ್​ ಕೆಮಿಸ್ಟ್ರಿ ನೋಡೋಕೆ ನಾವು ರೆಡಿ ಆಗಿದ್ದೇವೆ ಎಂದಿದ್ದಾರೆ. ಬಿಗ್​ ಬಾಸ್​ ಸೀಸನ್​ 8 ಅರ್ಧಕ್ಕೆ ನಿಲ್ಲುವುದಕ್ಕೂ ಮೊದಲು ದಿವ್ಯಾ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇದು ಅರವಿಂದ್​ಗೆ ಸಾಕಷ್ಟು ನೋವುಂಟು ಮಾಡಿತ್ತು. ಆದರೆ, ಈಗ ಇಬ್ಬರೂ ಮತ್ತೆ ಒಟ್ಟಾಗಿ ಬಿಗ್​ ಬಾಸ್​ ಮನೆ ಸೇರುತ್ತಿರುವುದಕ್ಕೆ ವೀಕ್ಷಕರು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: Divya Suresh: ದಿವ್ಯಾ ಸುರೇಶ್ ಈಗ ರೌಡಿ ಬೇಬಿ; ಮಾದಕ ಲುಕ್​ನಲ್ಲಿ ಬಿಗ್​ ಬಾಸ್​ ಸ್ಪರ್ಧಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada