Divya Suresh: ದಿವ್ಯಾ ಸುರೇಶ್ ಈಗ ರೌಡಿ ಬೇಬಿ; ಮಾದಕ ಲುಕ್ನಲ್ಲಿ ಬಿಗ್ ಬಾಸ್ ಸ್ಪರ್ಧಿ
‘ರೌಡಿ ಬೇಬಿ‘ ಚಿತ್ರವನ್ನು ರೆಡ್ಡಿ ಕೃಷ್ಣ ನಿರ್ದೇಶಿಸಿದ್ದಾರೆ. ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಕಾರ್ಯ ನಿರ್ವಹಿಸಿ ಅನುಭವವಿರುವ ರೆಡ್ಡಿ ಕೃಷ್ಣ ಅವರಿಗೆ ಇದು ಚೊಚ್ಚಲ ನಿರ್ದೇಶನ.
ಬಿಗ್ ಬಾಸ್ ಮೂಲಕ ನಟಿ ದಿವ್ಯಾ ಸುರೇಶ್ ಖ್ಯಾತಿ ದುಪ್ಪಟ್ಟಾಗಿದೆ. ಮನೆಯಲ್ಲಿ ಅವರು ಸ್ಟ್ರಾಂಗ್ ಮಹಿಳಾ ಸ್ಪರ್ಧಿಯಾಗಿ, ಮಂಜು ಪಾವಗಡ ಜತೆಗಿನ ಗೆಳೆತನದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈಗ ಅವರ ನಟನೆಯ ‘ರೌಡಿ ಬೇಬಿ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಈ ಹಾಡನ್ನು ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ರೌಡಿ ಬೇಬಿ‘ ಚಿತ್ರವನ್ನು ರೆಡ್ಡಿ ಕೃಷ್ಣ ನಿರ್ದೇಶಿಸಿದ್ದಾರೆ. ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಕಾರ್ಯ ನಿರ್ವಹಿಸಿ ಅನುಭವವಿರುವ ರೆಡ್ಡಿ ಕೃಷ್ಣ ಅವರಿಗೆ ಇದು ಚೊಚ್ಚಲ ನಿರ್ದೇಶನ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿಕೊಂಡಿದ್ದು, ಲಾಕ್ ಡೌನ್ ಮುಕ್ತಾಯದ ಬಳಿಕ ರಿಲೀಸ್ ಆಗಲಿದೆ.
ಎಸ್ ಎಸ್ ರವಿಗೌಡ ನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ ದಿವ್ಯಾ ಸುರೇಶ್ ಹಾಗೂ ಹೀರ್ ಕೌರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ನಾ ನೀನಾದರೆ..’ ಎಂಬ ಹಾಡಿನ ಲಿರಿಕಲ್ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಈ ಹಾಡಿನಲ್ಲಿ ಅವರು ಗ್ಲಾಮರ್ ಅವತಾರ ತಾಳಿದ್ದಾರೆ. ಈ ಹಾಡಿನಲ್ಲಿ ಅವರು ಲಿಪ್ ಲಾಕ್ ಕೂಡ ಮಾಡಿದ್ದು ಸ್ಟಿಲ್ಗಳು ವೈರಲ್ ಆಗಿವೆ. ಈ ಹಾಡಿನಿಂದ ಚಿತ್ರಕ್ಕೆ ಮೈಲೇಜ್ ಹೆಚ್ಚಾಗುವ ಎಲ್ಲಾ ಲಕ್ಷಣ ಇದೆ.
ಅರಮಾನ್ ಹಾಗೂ ಅಭಿಷೇಕ್ ರಫಸ್ ಸಂಗೀತ ನಿರ್ದೇಶನ, ಸಾಮ್ರಾಟ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ ಹಾಗೂ ಚಂದ್ರು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿರುವ ನಾಲ್ಕು ಹಾಡುಗಳಿಗೆ ವಿ.ನಾಗೇಂದ್ರ ಪ್ರಸಾದ್, ಸಿಂಪಲ್ ಸುನಿ ಹಾಗೂ ಕಿನಾಲ್ ರಾಜ್ ಸಾಹಿತ್ಯ ಬರೆದಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿಗಳಿಗೆ ಸಿನಿಮಾ ಆಫರ್ ಹೆಚ್ಚುತ್ತಿದೆ. ರಘು ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅವರ ನಟನೆಯ ದ್ವಿಪಾತ್ರ ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಈಗ ದಿವ್ಯಾ ಸುರೇಶ್ ನಟಿಸುತ್ತಿರುವ ಸಿನಿಮಾದ ಸಾಂಗ್ ರಿಲೀಸ್ ಆಗಿದೆ.
ಇದನ್ನೂ ಓದಿ: Bigg Boss Kannada: ನೀನೆಂಥ ಮೋಸಗಾರ ಅಂತ 10 ವಾರದ ನಂತರ ಗೊತ್ತಾಯ್ತು; ಮಂಜುಗೆ ತಿವಿದ ದಿವ್ಯಾ
Divya Suresh: ‘ನನ್ನನ್ನು ಮದುವೆಗೆ ಆಮಂತ್ರಿಸು’ ಎನ್ನುವ ಮೂಲಕ ಮಂಜುಗೆ ಎಲ್ಲವನ್ನೂ ಸ್ಪಷ್ಟಪಡಿಸಿದ ದಿವ್ಯಾ ಸುರೇಶ್
Published On - 5:11 pm, Wed, 19 May 21