Bigg Boss Kannada: ನೀನೆಂಥ ಮೋಸಗಾರ ಅಂತ 10 ವಾರದ ನಂತರ ಗೊತ್ತಾಯ್ತು; ಮಂಜುಗೆ ತಿವಿದ ದಿವ್ಯಾ
Manju Pavagada: ಬಿಗ್ ಬಾಸ್ನಲ್ಲಿ ಇನ್ನು ಕೆಲವೇ ವಾರಗಳು ಉಳಿದಿವೆ. ಮಂಜು ಸ್ಟ್ರಾಂಗ್ ಸ್ಪರ್ಧಿ ಎಂಬುದು ನಿಜ. ಆದರೆ ಅವರು ದಿವ್ಯಾ ಸುರೇಶ್ ಗುಂಗಲ್ಲಿ ಕಳೆದುಹೋಗುತ್ತಿದ್ದಾರೆ ಎಂಬ ಆರೋಪ ಮೊದಲಿನಿಂದಲೂ ಇದೆ.
ಬಿಗ್ ಬಾಸ್ ಕನ್ನಡ 8ನೇ ಸೀಸನ್ನ ಮೊದಲ ದಿನದಿಂದಲೇ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಸಿಕ್ಕಾಪಟ್ಟೆ ಕ್ಲೋಸ್ ಆಗಿಬಿಟ್ಟರು. ಅವರಿಬ್ಬರ ನಡುವಿನ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಬಂತು. ಈಗ ಬಿಗ್ ಬಾಸ್ ಮನೆಯಲ್ಲಿ ಹತ್ತು ವಾರ ಕಳೆದಿದೆ. ಈ ಸಂದರ್ಭದಲ್ಲಿ ಮಂಜು ವರ್ತನೆ ಬದಲಾಗಿದೆ. ಅದನ್ನು ದಿವ್ಯಾ ಸುರೇಶ್ ಗಮನಿಸಿದ್ದಾರೆ. ಎಲ್ಲವನ್ನೂ ಕಣ್ಣಾರೆ ಕಂಡ ಬಳಿಕ ಅವರು ಮಂಜುಗೆ ನೇರವಾಗಿ ಹೇಳಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಅನ್ಸೀಸ್ ವಿಡಿಯೋದಲ್ಲಿ ಈ ವಿಚಾರ ಬಹಿರಂಗ ಆಗಿದೆ.
ಕೆಲವೇ ದಿನಗಳ ಹಿಂದೆ ಮಂಜುಗೆ ಕಿಚ್ಚ ಸುದೀಪ್ ಒಂದು ಕಿವಿಮಾತು ಹೇಳಿದ್ದರು. ‘ಒಂದೇ ಪ್ರಕಾರದ ಸಿನಿಮಾ ಮಾಡುತ್ತಿದ್ದರೆ ಬೋರ್ ಆಗುತ್ತದೆ’ ಎನ್ನುವ ಮೂಲಕ ದಿವ್ಯಾ ಜೊತೆ ಮಾತ್ರ ಮಂಜು ಹೆಚ್ಚು ಸಮಯ ಕಳೆಯುತ್ತಾರೆ ಎಂಬುದನ್ನು ಸುದೀಪ್ ಪರೋಕ್ಷವಾಗಿ ಹೇಳಿದ್ದರು. ಅದೇ ಕಾರಣಕ್ಕೋ ಏನೂ ಮಂಜು ಈಗ ದಿವ್ಯಾ ಅವರಿಂದ ಕೊಂಚ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ ಎನಿಸುತ್ತಿದೆ. ಆ ವಿಚಾರವಾಗಿ ದಿವ್ಯಾ ಮಾತನಾಡಿದ್ದಾರೆ.
‘ಮಾತಾಡಿಸೋಕೆ ಸಿಗಲ್ಲ. ಬೇಗ ಮಲಗಿಕೊಂಡು, ಬೇಗ ಎದ್ದೇಳ್ತೀಯ. ಏನ್ ಮಂಜಾ? ಕಾಫಿ ಒಬ್ಬನೇ ಮಾಡಿಕೊಳ್ತೀಯ. ನನಗೆ ತಗೊಂಡು ಬರಲ್ಲ. ಕಾಫಿನೂ ಇಲ್ಲ, ಟೀನೂ ಇಲ್ಲ. 10 ವಾರ ಆದ ಮೇಲೆ ನನಗೆ ಅರಿವಾಗ್ತಾ ಇದೆಯಲ್ಲ.. ನೀನೆಂಥ ಮೋಸಗಾರ’ ಎಂದು ನಗುನಗುತ್ತಲೇ ಮಂಜುಗೆ ದಿವ್ಯಾ ತಿವಿದಿದ್ದಾರೆ. ಈ ದೃಶ್ಯವನ್ನು ಕಂಡು ಪಕ್ಕದಲ್ಲಿದ್ದ ಅರವಿಂದ್ ಕೆ.ಪಿ. ನಕ್ಕಿದ್ದಾರೆ.
View this post on Instagram
ಬಿಗ್ ಬಾಸ್ನಲ್ಲಿ ಇನ್ನು ಕೆಲವೇ ವಾರಗಳು ಉಳಿದಿವೆ. ಮಂಜು ಸ್ಟ್ರಾಂಗ್ ಸ್ಪರ್ಧಿ ಎಂಬುದು ನಿಜ. ಆದರೆ ಅವರು ದಿವ್ಯಾ ಸುರೇಶ್ ಗುಂಗಲ್ಲಿ ಕಳೆದುಹೋಗುತ್ತಿದ್ದಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ಈಗ ಫಿನಾಲೆ ಸಮೀಪ ಆಗುತ್ತಿರುವುದರಿಂದ ಅವರು ಟಾಸ್ಕ್ ಮತ್ತು ತಮ್ಮ ಸ್ಟ್ರಾಟಜಿ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಅದೇ ಕಾರಣಕ್ಕಾಗಿ ದಿವ್ಯಾಯಿಂದ ಮಂಜು ಅಂತರ ಕಾಪಾಡಿಕೊಳ್ಳುತ್ತಿರಬಹುದು.
ಇದನ್ನೂ ಓದಿ: