ಮನೆಯಲ್ಲೇ ವರ್ಕೌಟ್ ಮಾಡಿ ಫಿಟ್ ಆಗಿದ್ದಾರೆ 49ರ ಪ್ರಾಯದ ನಟಿ ಮಂದಿರಾ ಬೇಡಿ
ಎಲ್ಲೆಲ್ಲೂ ಕೊರೊನಾ ವೈರಸ್ ಹರಡುತ್ತಿರುವ ಈ ಕಷ್ಟದ ಕಾಲದಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯ ಇದೆ. ಹಾಗಾಗಿ ಮನೆಯಲ್ಲೇ ವರ್ಕೌಟ್ ಮಾಡುವುದು ಅನಿವಾರ್ಯ ಆಗಿದೆ.
ಧಾರಾವಾಹಿ, ಸಿನಿಮಾ, ವೆಬ್ ಸಿರೀಸ್ ಕಿರುತೆರೆ ಕಾರ್ಯಕ್ರಮಗಳ ನಿರೂಪಣೆ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ತೊಡಗಿಕೊಂಡವರು ನಟಿ ಮಂದಿರಾ ಬೇಡಿ. ಸೋಶಿಯಲ್ ಮೀಡಿಯಾದಲ್ಲೂ ಅವರು ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ. ಸದ್ಯ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 14 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಅದಕ್ಕೆ ಕಾರಣ ಅವರು ಫಿಟ್ನೆಸ್ ಕುರಿತಂತೆ ಹಂಚಿಕೊಳ್ಳುವ ವಿಡಿಯೋ ಮತ್ತು ಮಾಹಿತಿಗಳು. ಸದ್ಯ ಎಲ್ಲರಂತೆ ಮಂದಿರಾ ಬೇಡಿ ಕೂಡ ಮನೆಯಲ್ಲೇ ಲಾಕ್ ಆಗಿದ್ದಾರೆ. ಮನೆಯಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಮಂದಿರಾ ಬೇಡಿ ಅವರಿಗೆ ಫಿಟ್ನೆಸ್ ಬಗ್ಗೆ ಅಪಾರ ಕಾಳಜಿ. ಈಗ ಅವರಿಗೆ 49ರ ಪ್ರಾಯ. ಈ ವಯಸ್ಸಿನಲ್ಲೂ ಅವರು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ವ್ಯಾಯಾಮದ ವಿಚಾರದಲ್ಲಿ ಕಟ್ಟುನಿಟ್ಟಾಗಿ ಇರುವುದೇ ಅದಕ್ಕೆಲ್ಲ ಕಾರಣ. ಸದ್ಯ ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ಅನೇಕ ಕಡೆಗಳಲ್ಲಿ ಜಿಮ್ಗಳು ಮುಚ್ಚಿವೆ, ಹಾಗಾಗಿ ಮನೆಯಲ್ಲೇ ವರ್ಕೌಟ್ ಮಾಡುವುದು ಅನಿವಾರ್ಯ ಆಗಿದೆ.
ಇತ್ತೀಚೆಗೆ ಮಂದಿರಾ ಬೇಡಿ ಶೇರ್ ಮಾಡಿಕೊಂಡಿರುವ ಒಂದು ವಿಡಿಯೋ ಗಮನ ಸೆಳೆಯುತ್ತಿದೆ. ಸಿಂಪಲ್ ಆಗಿ ಮನೆಯಲ್ಲಿ ಯಾವೆಲ್ಲ ವರ್ಕೌಟ್ ಮಾಡಬೇಕು ಎಂಬುದನ್ನು ಈ ವಿಡಿಯೋ ಮೂಲಕ ತಿಳಿಸಲು ಮಂದಿರಾ ಪ್ರಯತ್ನಿಸಿದ್ದಾರೆ.
ಎಲ್ಲೆಲ್ಲೂ ಕೊರೊನಾ ವೈರಸ್ ಹರಡುತ್ತಿರುವ ಈ ಕಷ್ಟದ ಕಾಲದಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯ ಇದೆ. ಪ್ರತಿ ಕ್ಷಣವೂ ನಕಾರಾತ್ಮಕ ಸುದ್ದಿಗಳು ಕೇಳಿಬರುತ್ತಿವೆ. ಎಲ್ಲ ಕಡೆಯಿಂದ ಸಾವು-ನೋವು ವರದಿ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಫಿಟ್ನೆಸ್ ಕಡೆಗೆ ಗಮನ ನೀಡಿದರೆ ಒಳಿತು ಎಂಬುದನ್ನು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ಗಳ ಮೂಲಕ ಮಂದಿರಾ ಬೇಡಿ ತಿಳಿಸಿಹೇಳುವ ಪ್ರಯತ್ನ ಮಾಡುತ್ತಿದ್ದಾರೆ.
View this post on Instagram
ಲಾಕ್ಡೌನ್ ಕಾರಣದಿಂದ ರನ್ನಿಂಗ್ ಮಾಡಲು ಹೊರಗಡೆ ಪಾರ್ಕ್ನಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಮಂದಿರಾ ದೂರಿಲ್ಲ. ಅದರ ಬದಲು ಕಳೆದೊಂದು ವರ್ಷದಿಂದ ಮನೆಯೊಳಗೆ, ಇರುವ ಸ್ವಲ್ಪ ಜಾಗದಲ್ಲೇ ಹೇಗೆ ಓಡಬಹುದು ಎಂಬುದನ್ನು ಅವರು ತಿಳಿದುಕೊಂಡಿದ್ದಾರೆ. ಆ ವಿಡಿಯೋಗಳನ್ನು ಕೂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸ್ಫೂರ್ತಿ ತುಂಬುತ್ತಿದ್ದಾರೆ.
ಇದನ್ನೂ ಓದಿ:
ಈ ಕಷ್ಟದಲ್ಲೂ ಅಕ್ಷಯ್ ಕುಮಾರ್ ಏನೂ ಸಹಾಯ ಮಾಡ್ತಿಲ್ವಾ? ಪತ್ನಿ ಟ್ವಿಂಕಲ್ ಖನ್ನಾ ಕೊಟ್ರು ಖಡಕ್ ಉತ್ತರ
ಸೋನು ಸೂದ್ಗೆ ಫ್ರಾಡ್ ಎಂದ ಕಂಗನಾ; ಈ ಸಮಯದಲ್ಲಿ ದುಡ್ಡು ಮಾಡ್ತಿದ್ದಾರಾ ರಿಯಲ್ ಹೀರೋ?