ದಿವ್ಯಾ ಮಾಡಿದ ತಪ್ಪಿಗೆ ಮಂಜುಗೆ ಶಿಕ್ಷೆ; ಗಳಗಳನೆ ಅತ್ತ ಗೆಳತಿ
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆಯುತ್ತಿದೆ. ಮನೆಯ ಎಲ್ಲಾ ಸದಸ್ಯರು ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಟಾಸ್ಕ್ ಒಂದರಲ್ಲಿ ಬಿಸ್ಕತ್ ತಿನ್ನುವ ಚಟುವಟಿಕೆ ನೀಡಲಾಗಿತ್ತು.
ಬಿಗ್ ಬಾಸ್ ಮನೆಯಲ್ಲಿ ತಪ್ಪು ಮಾಡಿದರೆ ಶಿಕ್ಷೆ ಖಚಿತ. ಈ ಮೊದಲು ಮನೆಯ ಟೀ ಕಪ್ ಹಾಗೂ ಗ್ಲಾಸ್ಗಳನ್ನು ಒಡೆದು ಹಾಕಿದ ಮಂಜು ಪಾವಗಡ, ನಿಧಿ ಸುಬ್ಬಯ್ಯ ಹಾಗೂ ವೈಷ್ಣವಿ ಗೌಡ ಅವರಿಗೆ ಬಿಗ್ ಬಾಸ್ ಫನ್ನಿ ಶಿಕ್ಷೆ ನೀಡಿದ್ದರು. ಆದರೆ, ಈ ಬಾರಿ ದಿವ್ಯಾ ಸುರೇಶ್ ಹಾಗೂ ನಿಧಿ ಸುಬ್ಬಯ್ಯ ಮಾಡಿದ ತಪ್ಪಿಗೆ ಮಂಜು ಸೇರಿದಂತೆ ಮನೆಯ ಇತರೆ ಸದಸ್ಯರಿಗೆ ಶಿಕ್ಷೆ ಸಿಕ್ಕಿದೆ. ಇದಕ್ಕೆ ದಿವ್ಯಾ ಸುರೇಶ್ ಗಳಗಳನೆ ಅತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆಯುತ್ತಿದೆ. ಮನೆಯ ಎಲ್ಲಾ ಸದಸ್ಯರು ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಟಾಸ್ಕ್ ಒಂದರಲ್ಲಿ ಬಿಸ್ಕತ್ ತಿನ್ನುವ ಚಟುವಟಿಕೆ ನೀಡಲಾಗಿತ್ತು. ಹಣೆಯ ಮೇಲೆ ಬಿಸ್ಕತ್ ಇಟ್ಟುಕೊಳ್ಳಬೇಕು. ಅದನ್ನು ಉರುಳಿಸುತ್ತಾ ಬಾಯಿಗೆ ತರಬೇಕು. ನೀಡಿದ ಸಮಯಾವಕಾಶದಲ್ಲಿ ಹೆಚ್ಚು ಬಿಸ್ಕತ್ ತಿಂದವರು ಗೆದ್ದಂತೆ. ಈ ಟಾಸ್ಕ್ನಲ್ಲಿ ರಘು ಗೌಡ ಹಾಗೂ ಪ್ರಿಯಾಂಕಾ ತಿಮ್ಮೇಶ್ ಭಾಗಿಯಾಗಿದ್ದರು. ಟಾಸ್ಕ್ನ ಉಸ್ತುವಾರಿ ಮಂಜು ಹಾಗೂ ಶಮಂತ್ ಬ್ರೋ ಗೌಡಗೆ ನೀಡಲಾಗಿತ್ತು.
ಟಾಸ್ಕ್ ಪೂರ್ಣಗೊಂಡ ನಂತರದಲ್ಲಿ ಬಿಸ್ಕತ್ ಬಳಿ ಬಂದ ದಿವ್ಯಾ ಹಾಗೂ ನಿಧಿ ಅದನ್ನು ತಿನ್ನೋಕೆ ನೋಡಿದರು. ಆಗ ಶಮಂತ್ ಹಾಗೂ ಮಂಜು ಇದನ್ನು ತಿನ್ನಬಾರದು ಎನ್ನುವ ಆದೇಶ ಇದೆ ಎಂದು ತಿಳಿಸಿದರು. ಆದರೂ ಇದನ್ನು ಕೇಳದ ದಿವ್ಯಾ ಹಾಗೂ ನಿಧಿ ಬಿಸ್ಕತ್ ತುಂಡನ್ನು ಬಾಯಲ್ಲಿ ಹಾಕಿಕೊಂಡು ಚಪ್ಪರಿಸಿದರು.
ಇದಾದ ಸ್ವಲ್ಪ ಸಮಯದ ನಂತರದಲ್ಲಿ ಬಿಗ್ ಬಾಸ್ನಿಂದ ಧ್ವನಿ ಬಂದಿತ್ತು. ಅಷ್ಟೇ ಅಲ್ಲ, ಆಟ ಮುಗಿದ ಮೇಲೆ ಮನೆಯ ಪ್ರಾಪರ್ಟಿ ಮುಟ್ಟಿದ್ದಕ್ಕೆ ನಿಧಿ ಹಾಗೂ ದಿವ್ಯಾ ಬಳಿ ಇದ್ದ 100 ಪಾಯಿಂಟ್ ಹಿಂಪಡೆಯಲಾಯಿತು. ಈ ಆಟದ ಉಸ್ತುವಾರಿ ವಹಿಸಿಕೊಂಡಿದ್ದ ಶಮಂತ್ ಹಾಗೂ ಮಂಜುಗೂ ಇದೇ ಶಿಕ್ಷೆ ನೀಡಲಾಯಿತು. ಕ್ಯಾಪ್ಟನ್ ಆಗಿದ್ದ ಚಕ್ರವರ್ತಿ ಚಂದ್ರಚೂಡ್ ಕೂಡ ಪಾಯಿಂಟ್ ಕಳೆದುಕೊಂಡರು.
ಈ ವಿಚಾರದಲ್ಲಿ ದಿವ್ಯಾ ಸುರೇಶ್ಗೆ ತುಂಬಾನೇ ಬೇಸರವಾಯಿತು. ಅಲ್ಲದೇ ಅವರು ಕಣ್ಣೀರು ಹಾಕಿದರು. ಈ ವೇಳೆ ಮಾತನಾಡಿದ ದಿವ್ಯಾ, ಬಿಗ್ ಬಾಸ್ ನಾವು ಮಾಡಿದ ತಪ್ಪಿಗೆ ಇವರಿಗೇಕೆ ಶಿಕ್ಷೆ ನೀಡಿದಿರಿ? ದಯವಿಟ್ಟು ನಮಗೆ ಶಿಕ್ಷೆ ನೀಡಿ ಎಂದು ಕೇಳಿಕೊಂಡರು.
ಇದನ್ನೂ ಓದಿ: Prashanth Sambargi: ಸುದೀಪ್ ಮಾತಿಗೆ ಬೆಲೆಕೊಟ್ಟು ದೊಡ್ಡ ನಿರ್ಧಾರ ತೆಗೆದುಕೊಂಡ ಪ್ರಶಾಂತ್ ಸಂಬರಗಿ; ಮನೆಯವರಿಗೆ ಶಾಕ್