ಕಿಡ್ನಿ ತೊಂದರೆಯಿಂದ ಬಳಲ್ತಿದ್ದ ತಂದೆ ಚಿಕಿತ್ಸೆಗಾಗಿ.. ಸ್ನೇಹಿತೆ ಮನೆಗೆ ಕನ್ನ ಹಾಕಿದವಳು ಅಂದರ್​

|

Updated on: Jan 08, 2021 | 9:07 PM

ತಂದೆ ಚಿಕಿತ್ಸೆಗಾಗಿ ಸ್ನೇಹಿತೆ ಮನೆಯಲ್ಲಿ ಕಳ್ಳತನ ಮಾಡಿದ್ದ ಮಹಿಳೆಯನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತೇಜಸ್ವಿನಿ ಅಲಿಯಾಸ್​ ತೇಜ(26) ಬಂಧಿತ ಆರೋಪಿ.

ಕಿಡ್ನಿ ತೊಂದರೆಯಿಂದ ಬಳಲ್ತಿದ್ದ ತಂದೆ ಚಿಕಿತ್ಸೆಗಾಗಿ.. ಸ್ನೇಹಿತೆ ಮನೆಗೆ ಕನ್ನ ಹಾಕಿದವಳು ಅಂದರ್​
ಸ್ನೇಹಿತೆ ಮನೆಗೆ ಕನ್ನ ಹಾಕಿದ ತೇಜಸ್ವಿನಿ ಅರೆಸ್ಟ್​
Follow us on

ನೆಲಮಂಗಲ: ತಂದೆ ಚಿಕಿತ್ಸೆಗಾಗಿ ಸ್ನೇಹಿತೆ ಮನೆಯಲ್ಲಿ ಕಳ್ಳತನ ಮಾಡಿದ್ದ ಮಹಿಳೆಯನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತೇಜಸ್ವಿನಿ ಅಲಿಯಾಸ್​ ತೇಜ(26) ಬಂಧಿತ ಆರೋಪಿ.

ತೇಜಸ್ವಿನಿ ತನ್ನ ಸ್ನೇಹಿತೆ ಪವಿತ್ರಾ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಸದ್ಯ, ಬಂಧಿತ ತೇಜಸ್ವಿನಿಯಿಂದ 5.5 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಅಂದ ಹಾಗೆ, ತೇಜಸ್ವಿನಿ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ತನ್ನ ತಂದೆ ಚಿಕಿತ್ಸೆಗಾಗಿ ಸ್ನೇಹಿತೆ ಮನೆಯಲ್ಲಿ ಕಳ್ಳತನ ಮಾಡಿದ್ದಳು ಎಂದು ತಿಳಿದುಬಂದಿದೆ. ಸ್ನೇಹಿತೆ ಮನೆ ಬೀಗದ ಕೈ ಡೂಪ್ಲಿಕೇಟ್ ಮಾಡಿಕೊಂಡು ಕಳ್ಳತನ ಮಾಡಿದ್ದಳು ಎಂದು ಹೇಳಲಾಗಿದೆ.

ನನ್ನ ತಂಗಿಯ ಮದುವೆ ಜೋರು ಜೋರು ಅಂತಾ.. ಸೋದರಿಯ ವಿವಾಹಕ್ಕೋಸ್ಕರ ಕಳ್ಳತನ ಮಾಡಿದ ಅಣ್ಣ ಜೈಲುಪಾಲು!