ಪಾಟಿ ಸವಾಲಿಗೆ ಅವಕಾಶ ನೀಡದೇ ಶಿಕ್ಷೆ ವಿಧಿಸುವುದು ಸೂಕ್ತವಲ್ಲ -ಹೈಕೋರ್ಟ್ ಮಹತ್ತರ ತೀರ್ಪು
ಪಾಟಿ ಸವಾಲಿಗೆ ಅವಕಾಶ ನೀಡದೇ ಶಿಕ್ಷೆ ವಿಧಿಸುವುದು ಸೂಕ್ತವಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ತರ ತೀರ್ಪು ಹೊರಬಿದ್ದಿದೆ.
ಬೆಂಗಳೂರು: ಪಾಟಿ ಸವಾಲಿಗೆ ಅವಕಾಶ ನೀಡದೇ ಶಿಕ್ಷೆ ವಿಧಿಸುವುದು ಸೂಕ್ತವಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಮಹತ್ತರ ತೀರ್ಪು ಹೊರಬಿದ್ದಿದೆ.
ಏನಿದು ಪ್ರಕರಣ? ಪೋಕ್ಸೊ ಪ್ರಕರಣದಲ್ಲಿ ಗೋವಿಂದರಾಜು ಎಂಬಾತನಿಗೆ ಶಿಕ್ಷೆ ವಿಧಿಸಲಾಗಿತ್ತು. ಪ್ರಕರಣದ ಸಾಕ್ಷ್ಯ ವಿಚಾರಣೆ ವೇಳೆ ಆರೋಪಿ ಪರ ವಕೀಲ ಗೈರಾಗಿದ್ದರು. ಹೀಗಾಗಿ, ಪಾಟಿ ಸವಾಲಿಗೆ ಅವಕಾಶ ನೀಡದೇ ಬೆಂಗಳೂರಿನ ಸೆಷನ್ಸ್ ಕೋರ್ಟ್ ಶಿಕ್ಷೆ ವಿಧಿಸಿತ್ತು.
ಹಾಗಾಗಿ, ಕೋರ್ಟ್ ತೀರ್ಪು ಪ್ರಶ್ನಿಸಿ ಗೋವಿಂದರಾಜು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ, ಗೋವಿಂದರಾಜುಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿ ಮರುವಿಚಾರಣೆ ನಡೆಸಬೇಕೆಂದು ನ್ಯಾ.ಬಿ.ವೀರಪ್ಪ, ನ್ಯಾ.ಕೆ.ನಟರಾಜನ್ರವರ ಪೀಠ ಆದೇಶ ನೀಡಿದೆ. ಜೊತೆಗೆ, ಆರೋಪಿಗೆ ವಕೀಲರಿಲ್ಲದಿದ್ದರೆ ಕಾನೂನು ನೆರವು ನೀಡಿ ಎಂದು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪೀಠ ಸೂಚನೆ ಕೊಟ್ಟಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್: ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್