ಉಡುಪಿ, ಅಕ್ಟೋಬರ್ 14: ಹಾಸ್ಟೆಲ್ ಬಾತ್ರೂಮಿನಲ್ಲಿ ಮದರಸ ವಿದ್ಯಾರ್ಥಿ (student) ನೇಣಿಗೆ ಶರಣಾಗಿರುವಂತಹ ಘಟನೆ ಬ್ರಹ್ಮಾವರ ತಾಲೂಕಿನ ರಂಗನಕೆರೆ ಮದರಸ ಹಾಸ್ಟೆಲ್ನಲ್ಲಿ ನಡೆದಿದೆ. ಸಿದ್ದಾಪುರ ಮೂಲದ ರಿಹಾನ್ ಬೇಗಮ್ ಎನ್ನುವವರ ಪುತ್ರ ಮಹಮ್ಮದ್ ಜಹೀದ್ (12) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಸದ್ಯ ಮಗನ ಸಾವಿನ ಕುರಿತು ತಾಯಿ ರಿಹಾನ ಬೇಗಂ ಸಂಶಯ ವ್ಯಕ್ತಪಡಿಸಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಮೃತ ಮಹಮ್ಮದ್ ಜಹೀದ್ ಕಳೆದ ನಾಲ್ಕು ತಿಂಗಳಿಂದ ಮದರಸ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದ. ಹೇರಾಡಿ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ. ರಜೆಯಲ್ಲಿ ಮನೆಗೆ ತೆರಳಿದ್ದ ಜಹೀದ್ ರಜೆ ಮುಗಿಸಿ ಹಾಸ್ಟೆಲ್ ಮರಳಿದ್ದ. ರಾತ್ರಿ ವೇಳೆ ಮದರಸ ಹಾಸ್ಟೆಲ್ ಬಾತ್ರೂಮಿನಲ್ಲಿ ನೇಣಿಗೆ ಶರಣಾಗಿದ್ದಾನೆ.
ಚಿಕ್ಕಮಗಳೂರು: ಎಂಡಿಎಂಎ ಕ್ರಿಸ್ಟಲ್, ಹಶಿಶ್ ಎಣ್ಣೆ ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ಸೆನ್ ಠಾಣೆಯ ಪೊಲೀಸರಿಂದ ದಾಳಿ ಮಾಡಿದ್ದು, 1,10,000 ಲಕ್ಷ ಮೌಲ್ಯದ ಹೆಚ್ಚು ಮೌಲ್ಯದ ಎಂಡಿಎಂಎ ಮತ್ತು ಹಶಿಶ್ ಎಣ್ಣೆ ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರು ಮೂಲದ ನವಾಜ್, ಅಮೀದ್, ಯಾಕೂಬ್ ಬಂಧಿತ ಆರೋಪಿಗಳು.
ಇದನ್ನೂ ಓದಿ: ರಾಯಚೂರಿನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ: ಮೂವರು ದುರ್ಮರಣ
ಮಾದಕ ಎಂಡಿಎಂಎ ಬೆಂಗಳೂರಿನಿಂದ ತಂದು ಮೂವರು ವ್ಯಕ್ತಿಗಳು ಮಾರಾಟ ಮಾಡುತ್ತಿದ್ದರು. ಚಿಕ್ಕಮಗಳೂರು ನಗರದ ಹೊರಹೊಲಯದ ಉಪ್ಪಳ್ಳಿ ಸಮೀಪದ ತಾವರೆಕೆರೆ ಬಳಿ ಮಾರಾಟ ಮಾಡುವ ವೇಳೆ ದಾಳಿ ಮಾಡಿದ್ದಾರೆ.
ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಮಹಿಳೆ ಸಾವನ್ನಪ್ಪಿದ್ದರೆ ಮತ್ತಿಬ್ಬರಿಗೆ ಗಾಯವಾಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಂಬಿಲ ನಡೆದಿದೆ. ಮಂಗಳೂರಿನ ಕೊಡಿಯಾಲುಬೈಲು ನಿವಾಸಿ ಭಾಗೀರಥಿ(62) ಮೃತ ಮಹಿಳೆ.
ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಹಿಂದಿನ ಅಸಲಿ ಕಾರಣ ಬಹಿರಂಗ
ಬೆಳ್ತಂಗಡಿಯಿಂದ ಮಂಗಳೂರು ಕಡೆ ಕಾರು ಬರುತ್ತಿತ್ತು. ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಹೆದ್ದಾರಿಯಿಂದ 200ಮೀ ದೂರದ ಅಡಿಕೆ ತೋಟಕ್ಕೆ ನುಗ್ಗಿದೆ. ಮಣ್ಣಿನ ದಿಬ್ಬವೊಂದರ ಮೇಲೆ ಪಲ್ಟಿಯಾಗಿ ಬಿದ್ದಿದೆ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.