ದರ್ಶನ್​ಗೆ ಬೇಲ್ ಸಿಗದಿದ್ದರೂ ಚಿಂತೆಯಿಲ್ಲ, ಮುಂದೆ ಖಂಡಿತ ಸಿಗುತ್ತದೆ ಎನ್ನುತ್ತಾರೆ ಅಭಿಮಾನಿಗಳು

ದರ್ಶನ್​ಗೆ ಬೇಲ್ ಸಿಗದಿದ್ದರೂ ಚಿಂತೆಯಿಲ್ಲ, ಮುಂದೆ ಖಂಡಿತ ಸಿಗುತ್ತದೆ ಎನ್ನುತ್ತಾರೆ ಅಭಿಮಾನಿಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 14, 2024 | 6:57 PM

ದರ್ಶನ್ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ. ನವರಾತ್ರಿ ಉತ್ಸವದ ಬಳಿಕ ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಬಾಸ್ ಗೆ ಬೇಲ್ ಸಿಗುತ್ತದೆ ಎಂಬ ನಂಬಿಕೆ ಇತ್ತು, ಮುಂದೆ ಸಿಗಲಿದೆ, ತಪ್ಪೋ ಒಪ್ಪೋ ನಮಗೆ ಗೊತ್ತಿಲ್ಲ, ಆದರೆ ನಮ್ಮ ಬಾಸ್ ಹೊರಗೆ ಬಂದೇ ಬರುತ್ತಾರೆ ಎಂದು ಟಿವಿ9ಗೆ ಅಭಿಮಾನಿಗಳು ತಿಳಿಸಿದ್ದಾರೆ.

ಬಳ್ಳಾರಿ: ದರ್ಶನ್ ಅಭಿಮಾನಿಗಳ ನಿರೀಕ್ಷೆ ಹುಸಿ ಹೋಗಿದೆ. ರಾಜ್ಯದ ಖ್ಯಾತ ಕ್ರಿಮಿನಲ್ ಲಾಯರ್ ಸಿವಿ ನಾಗೇಶ್ ಅವರು ನಟನ ಜಾಮೀನಿಗಾಗಿ ವಾದಿಸಿದರೂ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ. ಹಾಗಂತ, ಇವತ್ತು ತಮ್ಮ ನೆಚ್ಚಿನ ನಟ ಬಳ್ಳಾರಿ ಸೆಂಟ್ರಲ್ ಜೈಲಿಂದ ಬಿಡುಗಡೆ ಆಗೇ ಆಗುತ್ತಾರೆ ಅಂತ ಕಾಯುತ್ತಾ ನಿಂತಿದ್ದ ಅಭಿಮಾನಿ ಉತ್ಸಾಹವೇನೂ ಕುಗ್ಗಿಲ್ಲ. ಇಂದು ಸಿಗದಿದ್ದರೇನಾಯ್ತು ನಾಳೆ ಸಿಕ್ಕೇ ಸಿಕ್ಕುತ್ತೆ ಎಂಬ ವಿಶ್ವಾಸದಲ್ಲಿ ಅವರಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದರ್ಶನ್​ಗೆ ಜಾಮೀನು ಕೊಡಲು ನಿರಾಕರಿಸಿದ ಕೋರ್ಟ್; ದಾಸನಿಗೆ ಜೈಲೇ ಗತಿ