ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ

ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ

ಮದನ್​ ಕುಮಾರ್​
|

Updated on: Oct 14, 2024 | 8:12 PM

ದಿನ ಕಳೆದಂತೆಲ್ಲ ಬಿಗ್​ ಬಾಸ್ ಮನೆಯ ಸದಸ್ಯರ ನಡುವೆ ಸಾಮರಸ್ಯ ಕಡಿಮೆ ಆಗುತ್ತಿದೆ. ಪೈಪೋಟಿ ಹೆಚ್ಚಾದಂತೆಲ್ಲ ಮಾತಿಗೆ ಮಾತು ಬೆಳೆಯುತ್ತಿದೆ. ನಟಿಯರಾದ ಐಶ್ವರ್ಯಾ ಸಿಂಧೋಗಿ ಮತ್ತು ಅನುಷಾ ರೈ ಅವರ ನಡುವೆ ಜೋರು ಜಗಳ ನಡೆದಿದೆ. ಇಬ್ಬರೂ ಪರಸ್ಪರ ಬೈಯ್ದುಕೊಂಡಿದ್ದಾರೆ. ತ್ರಿಕೋನ ಪ್ರೇಮಕಥೆಯ ಕಾರಣಕ್ಕೆ ಸುದ್ದಿಯಾಗಿದ್ದ ಈ ಸುಂದರಿಯರ ನಡುವೆ ಈಗ ಜಗಳ ಆಗಿದೆ.

‘ಈ ವಾರ ಮೊದಲನೇ ನೇರ ನಾಮಿನೇಷನ್​ ಅನುಷಾ ಅವರು’ ಎಂದು ಕ್ಯಾಪ್ಟನ್​ ಶಿಶಿರ್​ ಹೇಳಿದ್ದಾರೆ. ‘ನಮಗೆ ಬಕೆಟ್​ ಹಿಡಿಯೋಕೆ ಬರಲ್ಲ ಗುರೂ. ನಾವು ಇರೋದೇ ಹೀಗೆ’ ಎಂದಿದ್ದಾರೆ ಅನುಷಾ. ಈ ವಿಚಾರವಾಗಿ ಜೋರು ಚರ್ಚೆ ನಡೆದಿದೆ. ಅನುಷಾ ರೈ ಮತ್ತು ಐಶ್ವರ್ಯಾ ಸಿಂಧೋಗಿ ಅವರು ಜಗಳ ಮಾಡಿಕೊಂಡಿದ್ದಾರೆ. ಅನುಷಾ ಹೇಳಿದ ಮಾತುಗಳನ್ನು ಕೇಳಿದ ಬಳಿಕ ಐಶ್ವರ್ಯಾ ಅವರು ಕೆಂಡಾಮಂಡಲ ಆಗಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದ ಮೂರನೇ ವಾರದಲ್ಲಿ ಗದ್ದಲ ಜಾಸ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.