ಯಾದಗಿರಿ: ಕೋಟ್ಯಧಿಪತಿಯ ಏಕೈಕ ಪುತ್ರಿ ಸನ್ಯಾಸತ್ವ ಸ್ವೀಕರಿಸಿದ್ದು, ಯಾದಗಿರಿಯಲ್ಲಿ ಜೈನ ಸಮುದಾಯದಿಂದ ಅದ್ಧೂರಿಯಾಗಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಮಹಾರಾಷ್ಟ್ರದ ರತ್ನಗಿರಿ ಮೂಲದ ದೀಪಕ್ ಹಾಗೂ ಮೀನಾ ದಂಪತಿಯ ಪುತ್ರಿ ಜೈನ ಧರ್ಮದ ಯತಿಶಾ (20) ಪದವಿ ಮುಗಿಸಿದ್ದು, ಇದೀಗ ದೀಕ್ಷೆ ಪಡೆದಿದ್ದಾರೆ. ಫ್ಯಾಷನೇಬಲ್ ಬದುಕ ಹಾಗೂ ಕೋಟ್ಯಂತರ ರೂಪಾಯಿ ಆಸ್ತಿ ಬಿಟ್ಟ ಯತಿಶಾ ಸನ್ಯಾಸತ್ವದ ಮಾರ್ಗ ಕಂಡುಕೊಂಡಿದ್ದಾರೆ.
ಕುಟುಂಬದಿಂದ ದೂರವಿರಲು ನಿರ್ಧರಿಸಿದ ಈಕೆಗೆ ಜೈನ ಸಮುದಾಯದ ನೂರಾರು ಜನ ಸೇರಿ ರಥದ ಮೆರವಣಿಗೆಯ ಜೊತೆಗೆ ಬ್ಯಾಂಡ್ ಬಾಜಾ ಬಾರಿಸುತ್ತ ಬೀಳ್ಕೊಡುಗೆ ಮಾಡಿದ್ದರು.
ಕೆಲವು ನಿಯಮಗಳು: ಸನ್ಯಾಸತ್ವ ಸ್ವೀಕರಿಸಿದ ಬಳಿಕ ಕೆಲವು ನಿಯಮಗಳಿದ್ದು, ಅವುಗಳನ್ನು ಪಾಲಿಸಲೇಬೇಕು. ಮೊದಲಿಗೆ ವಾಹನ ಬಳಸುವಂತಿಲ್ಲ. ದೂರ ಪ್ರಯಾಣ ಕೈಗೊಂಡರೂ ಕಾಲಿಗೆ ಚಪ್ಪಲಿ ಹಾಕಬಾರದು. ಬರೀ ಕಾಲಿನಲ್ಲಿ ನಡೆಯಬೇಕು. ಕರೆಂಟ್ ಇಲ್ಲದ ಕೋಣೆಯಲ್ಲಿ ವಾಸಿಸುವ ಮೂಲಕ ಟಿವಿ, ಎಸಿ, ಫ್ಯಾನ್ಗಳನ್ನು ಬಳಸದಂತೆ ದೂರವಿರಬೇಕು.
ಜೈನ ಸಮುದಾಯ ನೀಡಿದ ಬೀಳ್ಕೊಡುಗೆಯ ಚಿತ್ರಗಳು ಇಲ್ಲಿವೆ..
Published On - 3:52 pm, Fri, 18 December 20