ಮಹಾಶಿವರಾತ್ರಿಯಂದು ಮಲೆ ಮಹದೇಶ್ವರನಿಗೆ ಸಿದ್ದರಾಮಯ್ಯ, ಜಮೀರ್​ರಿಂದ ಜೋಡಿ ತೆಂಗಿನಕಾಯಿ ಆರತಿ!

ಮಹಾಶಿವರಾತ್ರಿಯ ಪ್ರಯುಕ್ತ ಇಂದು ರಾಜ್ಯದ ರಾಜಕೀಯ ನಾಯಕರು ದೇವಸ್ಥಾನಕ್ಕೆ ತೆರಳಿ ಈಶ್ವರನ ದರ್ಶನ ಪಡೆದರು. ಅಂತೆಯೇ, ಹಬ್ಬದ ಪ್ರಯುಕ್ತ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನಗರದ ಚಾಮರಾಜಪೇಟೆಯಲ್ಲಿರುವ ದೇವಸ್ಥಾನಕ್ಕೆ ಭೇಟಿಕೊಟ್ಟರು.

ಮಹಾಶಿವರಾತ್ರಿಯಂದು ಮಲೆ ಮಹದೇಶ್ವರನಿಗೆ ಸಿದ್ದರಾಮಯ್ಯ, ಜಮೀರ್​ರಿಂದ ಜೋಡಿ ತೆಂಗಿನಕಾಯಿ ಆರತಿ!
ಮಲೆ ಮಹದೇಶ್ವರನಿಗೆ ಸಿದ್ದರಾಮಯ್ಯರಿಂದ ಜೋಡಿ ತೆಂಗಿನಕಾಯಿ ಆರತಿ
Follow us
|

Updated on:Mar 11, 2021 | 9:13 PM

ಬೆಂಗಳೂರು: ಮಹಾಶಿವರಾತ್ರಿಯ ಪ್ರಯುಕ್ತ ಇಂದು ರಾಜ್ಯದ ರಾಜಕೀಯ ನಾಯಕರು ದೇವಸ್ಥಾನಕ್ಕೆ ತೆರಳಿ ಈಶ್ವರನ ದರ್ಶನ ಪಡೆದರು. ಅಂತೆಯೇ, ಹಬ್ಬದ ಪ್ರಯುಕ್ತ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನಗರದ ಚಾಮರಾಜಪೇಟೆಯಲ್ಲಿರುವ ದೇವಸ್ಥಾನಕ್ಕೆ ಭೇಟಿಕೊಟ್ಟರು. ಚಾಮರಾಜಪೇಟೆಯ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಿ ದೇವರ ದರ್ಶನ ಪಡೆದರು.

BNG SIDDARAMAIAH SHIVARATHRI 8

ಚಾಮರಾಜಪೇಟೆಯ ಮಲೆ ಮಹದೇಶ್ವರನ ಸನ್ನಿಧಿ

BNG SIDDARAMAIAH SHIVARATHRI 7

ಶಾಸಕ ಜಮೀರ್​ ಅಹ್ಮದ್​ ಜೊತೆ ದೇವಸ್ಥಾನಕ್ಕೆ ಬಂದ ಸಿದ್ದರಾಮಯ್ಯ

BNG SIDDARAMAIAH SHIVARATHRI 6

ಸಿದ್ದರಾಮಯ್ಯ

ಅಂದ ಹಾಗೆ, ಸಿದ್ದರಾಮಯ್ಯ ಪ್ರತಿ ವರ್ಷ ಶಿವರಾತ್ರಿ ಹಬ್ಬದಂದು ಇದೇ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಬಾರಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್​ ಖಾನ್​ ಸಿದ್ದರಾಮಯ್ಯಗೆ ಸಾಥ್​ ನೀಡಿದರು.

BNG SIDDARAMAIAH SHIVARATHRI 5

ಸಿದ್ದರಾಮಯ್ಯರಿಂದ ವಿಶೇಷ ಪೂಜೆ ಸಲ್ಲಿಕೆ

BNG SIDDARAMAIAH SHIVARATHRI 4

ಸಿದ್ದರಾಮಯ್ಯರಿಂದ ಜೋಡಿ ತೆಂಗಿನಕಾಯಿ ಆರತಿ

ಶಾಸಕ ಜಮೀರ್​ ಅಹ್ಮದ್​ರಿಂದ ದೇವರಿಗೆ ಜೋಡಿ ತೆಂಗಿನಕಾಯಿ ಆರತಿ

BNG SIDDARAMAIAH SHIVARATHRI 2

ದೇವರ ದರ್ಶನ ಪಡೆದ ನಾಯಕರು

‘ಜನ ಸುಖ-ಶಾಂತಿಯಿಂದ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ’ ಈ ಸಲ, ವಿಪಕ್ಷ ನಾಯಕ ಸಿದ್ದರಾಮಯ್ಯ ದೇವರಿಗೆ ಜೋಡಿ ತೆಂಗಿನಕಾಯಿಯ ಆರತಿ ಬೆಳಗಿದರು. ಬಳಿಕ, ಮಾದಪ್ಪನ ಹಾಡಿಗೆ ತಾಳ ಸಹ ಹೊಡೆದರು. ಪೂಜೆ ನಂತರ ಮಾತನಾಡಿದ ಸಿದ್ದರಾಮಯ್ಯ ಪ್ರತಿವರ್ಷವೂ ಶಿವರಾತ್ರಿ ದಿನ ನಾನು ಮಲೆ ಮಹದೇಶ್ವರನ ದರ್ಶನಕ್ಕೆ ಬರ್ತೀನಿ. ದೇವಸ್ಥಾನಕ್ಕೆ ಬಂದು ದರ್ಶನ ಮಾಡಿಕೊಂಡು ಹೋಗ್ತೀನಿ ಎಂದು ಹೇಳಿದರು. ರಾಜ್ಯದ ಜನತೆಗೆ ಒಳ್ಳೇದಾಗಲಿ. ಒಳ್ಳೇ ಮಳೆ-ಬೆಳೆ ಆಗಿ ಜನ ಸುಖ-ಶಾಂತಿ ಹಾಗೂ ಸಮೃದ್ಧಿಯಿಂದ ನೆಲೆಸುವಂತೆ ಮಾಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಅಂತಾ ಸಿದ್ದರಾಮಯ್ಯ ಹೇಳಿದರು.

BNG SIDDARAMAIAH SHIVARATHRI 1

ಮಾದಪ್ಪನ ಹಾಡಿಗೆ ತಾಳ ಹೊಡೆದ ಸಿದ್ದರಾಮಯ್ಯ

ಕಾಡು ಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಸಿಎಂ BSY ಭೇಟಿ ಅತ್ತ, ಮಲ್ಲೇಶ್ವರಂನಲ್ಲಿರುವ  ಕಾಡು ಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಸಿಎಂ B.S.ಯಡಿಯೂರಪ್ಪ ಭೇಟಿಕೊಟ್ಟರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬಿಎಸ್​ವೈ ಕಾಡು ಮಲ್ಲೇಶ್ವರಸ್ವಾಮಿಯ ದರ್ಶನ ಪಡೆದರು.

BSY SHIVA PUJE 3

ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಸಿಎಂ BSY

BSY SHIVA PUJE 2

ದೇವರ ದರ್ಶನ ಪಡೆದ ಯಡಿಯೂರಪ್ಪ

BSY SHIVA PUJE 1

ಮಂಗಳಾರತಿ ಪಡೆದ ಯಡಿಯೂರಪ್ಪ

BSY SHIVA PUJE 4

ಕಾಡು ಮಲ್ಲೇಶ್ವರನ ದರ್ಶನದ ಬಳಿಕ ಮಾತನಾಡಿದ ಸಿಎಂ ಒಳ್ಳೆಯ ಮಳೆ, ಬೆಳೆಯಾಗಿ ಜನರು ನೆಮ್ಮದಿಯಿಂದ ಜೀವನ ನಡೆಸಲಿ ಎಂದು ಪ್ರಾರ್ಥಿಸಿದ್ದೇನೆ. ಕೊರೊನಾ ಹಿನ್ನೆಲೆ ಜನ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕು. ಜನ ಎಚ್ಚರ ವಹಿಸಬೇಕು. ಮಾಸ್ಕ್, ದೈಹಿಕ ಅಂತರ ಕಾಪಾಡಬೇಕೆಂದು ಬೇಡಿಕೊಳ್ಳುವೆ. ಕೈಮುಗಿದು ಬೇಡಿಕೊಳ್ಳುತ್ತೇನೆಂದು ಸಿಎಂ ಯಡಿಯೂರಪ್ಪ ಹೇಳಿದರು.

ಶಿವರಾತ್ರಿಯಂದು ಮನೆ ದೇವರ ದರ್ಶನ ಮಾಡಿದ ದೊಡ್ಡಗೌಡರು ಅತ್ತ, ಹಾಸನದಲ್ಲಿ ಶಿವರಾತ್ರಿಯ ಪ್ರಯುಕ್ತ ತಮ್ಮ ಮನೆ ದೇವರಾದ ದೇವೇಶ್ವರನ ದರ್ಶನಕ್ಕೆ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಆಗಮಿಸಿದರು. ದೇವರಿಗೆ ವಿಶೇಷ ಪೂಜೆ ಸಹ ಸಲ್ಲಿಸಿದರು.

ದೇವರ ದರ್ಶನದ ಬಳಿಕ ಮಾತನಾಡಿದ ದೇವೇಗೌಡ ಮುಂದಿನ ವರ್ಷ ನನ್ನ ಆರೋಗ್ಯ ಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ. ಹೀಗಾಗಿ, ಈ ಬಾರಿ ದರ್ಶನ ಪಡೆಯೋಣ ಎಂದು ಬಂದಿದ್ದೇನೆ. ಪ್ರಯಾಣ ಮಾಡದಂತೆ ನನಗೆ ವೈದ್ಯರು ಸಲಹೆ ನೀಡಿದ್ದಾರೆ. ತುಂಬಾ ಜ್ವರ ಬಂದಿದೆ, ದೆಹಲಿಯಲ್ಲಿ ಚಿಕಿತ್ಸೆ ಪಡೆದಿದ್ದೆ. ಆರಾಮಾಗಿ ನಡೆದಾಡುತ್ತಿದ್ದೆ, ಈಗ ಅಷ್ಟೊಂದು ಶಕ್ತಿ‌ ಇಲ್ಲ ಎಂದು ಹೇಳಿದರು.

ಇನ್ನು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ಆರೋಪ ವಿಚಾರವಾಗಿ ಅವರಿಗೆ ಈ ರೀತಿ ಆಗಬಾರದಿತ್ತು. ಎಡಗಾಲಿಗೆ ಪೆಟ್ಟು ಬಿದ್ದಿದೆ ಎಂದು ತಿಳಿದಿದ್ದೇನೆ. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ. ಇಂತಹ ಮಟ್ಟಕ್ಕೆ ರಾಜಕೀಯ ಪರಿಸ್ಥಿತಿ ಹೋಗಬಾರದು ಎಂದು ಬೇಸರ ವ್ಯಕ್ತಪಡಿಸಿದರು.

ನಾನು ನಂದಿಗ್ರಾಮದಲ್ಲೇ ಸ್ಪರ್ಧಿಸುತ್ತೇನೆ ಎಂದು ಅವರು ಪಣತೊಟ್ಟಿದ್ದಾರೆ. ಅವರ ಎದುರಾಳಿಗಳು ನಡೆದುಕೊಂಡ ರೀತಿ ಖಂಡನೀಯ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಸಾಮಾನ್ಯ. ಕೂಡಲೇ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.

ಹರದನಹಳ್ಳಿ ದೇವೇಶ್ವರನಿಗೆ HDKಯಿಂದ ವಿಶೇಷ ಪೂಜೆ ಸಲ್ಲಿಕೆ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.​ಡಿ.ಕುಮಾರಸ್ವಾಮಿ ಮನೆದೇವರ ದರ್ಶನ ಪಡೆದರು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ತಮ್ಮ ಹುಟ್ಟೂರಿನ ಹರದನಹಳ್ಳಿ ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮೈಸೂರಿನಿಂದ ಆಗಮಿಸಿ ಪೂಜೆ ಸಲ್ಲಿಸಿದರು.

HSN HDK PUJE 1

ಹರದನಹಳ್ಳಿ ದೇವೇಶ್ವರನಿಗೆ HDKಯಿಂದ ನಮನ

HSN HDK PUJE 2

ದೇವರ ಸನ್ನಿಧಾನದಲ್ಲಿ ಕುಮಾರಸ್ವಾಮಿ

HSN HDK PUJE 3

ದೇವರಿಗೆ ವಿಶೇಷ ಪೂಜೆ ಸಲ್ಲಿಕೆ

HSN HDK PUJE 4

ಪಕ್ಷದ ಮುಖಂಡರ ಜೊತೆ ಪ್ರಸಾದ ಸ್ವೀಕರಿಸಿದ ಮಾಜಿ ಸಿಎಂ

ಇದನ್ನೂ ಓದಿ: TV9 Kannada Anchor Anand Burali | ಟಿವಿ9 ನಿರೂಪಕ ಆನಂದ ಬುರಲಿಗೆ ಮಹಾಂತಶ್ರೀ ಪ್ರಶಸ್ತಿ

Published On - 7:16 pm, Thu, 11 March 21

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ