5 ವರ್ಷಗಳಲ್ಲಿ ಕಾಂಗ್ರೆಸ್ಗೆ ಟಾಟಾ ಹೇಳಿದ ಶಾಸಕರೆಷ್ಟು?
ವಿವಿಧ ರಾಜ್ಯಗಳಲ್ಲಿ ಈ ಪಕ್ಷಾಂತರದಿಂದ ಸರ್ಕಾರಗಳು ಅಳಿದಿವೆ, ಹೊಸ ಸರ್ಕಾರಗಳು ಹುಟ್ಟಿಕೊಂಡಿವೆ. ಉದಾಹರಣೆಗೆ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಮಣಿಪುರ, ಮಧ್ಯಪ್ರದೇಶ.

ಕಾಂಗ್ರೆಸ್ ಕೆಲ ವರ್ಷಗಳಿಂದ ಮುಳುಗುತ್ತಿರುವ ಹಡಗು ಎಂಬ ಅಪಖ್ಯಾತಿಗೆ ತುತ್ತಾಗಿತ್ತು. ಎಷ್ಟೇ ಅಬ್ಬರದ ಪ್ರಚಾರ ಮಾಡಿದರೂ ಸಹಿತ, ಚುನಾವಣೆಗಲಲ್ಲಿ ಗೆಲ್ಲುವುದು ಮರೀಚಿಕೆಯಾಗಿಯೇ ಪರಿಣಮಿಸಿತ್ತು. ಜತೆಗೆ ನಾಯಕತ್ವದ ಕೊರತೆ, ಗೊಂದಲವೂ ಅಷ್ಟೇ ತೀವ್ರವಾಗಿ ಪುರಾತನ ಪಕ್ಷವನ್ನು ಬಾಧಿಸುತ್ತಿದೆ. ಇಂತಿಪ್ಪ ಛಪ್ಪನ್ನೈವತ್ತಾರು ಕಾರಣಗಳಿಂದ ಕಾಂಗ್ರೆಸ್ ತ್ಯಜಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಮುಳುಗುತ್ತಿರುವ ಹಡಗಿಗಿಂತ ಸದಾಕಾಲ ತೇಲುವ ತೆಪ್ಪವಾದರೂ ಸರಿ, ಇಲ್ಲವೆ ವೈಭವೊಪೇತ ಕ್ರೂಸರ್ ಸಿಕ್ಕರಂತೂ ಸ್ವರ್ಗಕ್ಕೆ ಮೂರೇ ಗೇಣು. ಇಂಥದ್ದೇ ಮನೋಭಾವದಲ್ಲಿ ಕಾಂಗ್ರೆಸ್ ಶಾಸಕರು, ನಾಯಕರು ಬಿಜೆಪಿ ಸರಿ ದೇಶದ ಇತರ ರಾಜಕೀಯ ಪಕ್ಷಗಳಿಗೆ ಟವೆಲ್ ಹಾಸಿದ್ದಾರೆ. ಆದರೆ ಎಷ್ಟು ಜನ ಕಾಂಗ್ರೆಸ್ ಸೇರಿದ್ದಾರೆ? ಇಲ್ಲಿದೆ ಅಂಕಿಅಂಶ.
2016ರಿಂದ 2020ರ ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಟ್ಟು 170 ಶಾಸಕರು ಟಾಟಾ ಬಾಯ್ ಬಾಯ್ ಹೇಳಿದ್ದಾರೆ ಎನ್ನುತ್ತದೆ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ. ಹಾಗೆಯೇ ಈ ಅವಧಿಯಲ್ಲಿ ಬಲಾಢ್ಯವಾಗಿ ಬೆಳೆದ, ಅಧಿಕಾರದ ಪಟ್ಟದಲ್ಲಿ ರಾಜಾರೋಷವಾಗಿ ಕುಳಿತಿರುವ ಭಾರತೀಯ ಜನತಾ ಪಾರ್ಟಿಯಿಂದಲೂ 18 ಶಾಸಕರು ಇತರ ಪಕ್ಷಗಳೆಡೆಗೆ ಮುಖ ಮಾಡಿದ್ದಾರೆ.
2019ರ ಲೋಕಸಭಾ ಚುನಾವಣೆಯು ಪಕ್ಷ ತೊರೆಯುವವರಿಗೆ ಸರಿಯಾದ ಸಮಯ ಎನಿಸಿದೆ. ಬಿಜೆಪಿಯ 18 ಸಂಸದರು ಈ ವೇಳೆ ಕಮಲ ಪಾಳಯ ತೊರೆದಿದ್ದರೆ, ಕಾಂಗ್ರೆಸ್ನ 7 ರಾಜ್ಯಸಭಾ ಸಂಸದರು ಕಾಂಗ್ರೆಸ್ನ ಸಹವಾಸ ಸಾಕು ಎಂದಿದ್ದಾರಂತೆ.
ವಿವಿಧ ರಾಜ್ಯಗಳಲ್ಲಿ ಈ ಪಕ್ಷಾಂತರದಿಂದ ಸರ್ಕಾರಗಳು ಅಳಿದಿವೆ, ಹೊಸ ಸರ್ಕಾರಗಳು ಹುಟ್ಟಿಕೊಂಡಿವೆ. ಉದಾಹರಣೆಗೆ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಮಣಿಪುರ, ಮಧ್ಯಪ್ರದೇಶ. ಈ ರಾಜ್ಯಗಳಲ್ಲಿ ಹಿಂದೆ ಇದ್ದ ಸರ್ಕಾರಗಳು ಪತನಗೊಂಡು ಹೊಸ ಸರ್ಕಾರ ರಚನೆಯಾಗಲು ಕಾರಣವಾದದ್ದು ಶಾಸಕರ ಪಕ್ಷಾಂತರದ ಕಾರಣದಿಂದಲೇ. ಇಂತಹ ಶಾಸಕರ ಸಂಖ್ಯೆಯನ್ನೂ ಸಹ ಈ ಸಮೀಕ್ಷೆ ಒಳಗೊಂಡಿದೆ.
ದೇಶದ ವಿವಿಧ ಪಕ್ಷಗಳನ್ನು ತೊರೆದ ಸಂಸದರಲ್ಲಿ ಐವರು ಕಾಂಗ್ರೆಸ್ ಸೇರಿದ್ದಾರಂತೆ. ಈ ಸಂಗತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಅಲ್ಲದೇ 2016ರಿಂದ 2020ರಲ್ಲಿ ಮತ್ತೊಮ್ಮೆ ಸ್ಪರ್ಧೆಗಿಳಿದ 402 ಶಾಸಕರಲ್ಲಿ 182 ಜನಪ್ರತಿನಿಧಿಗಳು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ನ್ನೂ ಕೆಲವರು ಆರಿಸಿಕೊಂಡಿದ್ದು, ಅಂತಹ ಶಾಸಕರ ಸಂಖ್ಯೆ 38. ಇನ್ನು ಪ್ರಾದೇಶಿಕ ಪಕ್ಷ ತೆಲಂಗಾಣ ರಾಷ್ಟ್ರೀಯ ಸಮಿತಿಯೂ ಈ ಲೆಕ್ಕದಲ್ಲಿ ಹಿಂದೆ ಬಿದ್ದಿಲ್ಲ. 17 ಶಾಸಕರು ಈ ಪಕ್ಷ ಸೇರಿದ್ದಾರೆ ಎನ್ನುತ್ತದೆ ಅಂಕಿಅಂಶ.
ಇದನ್ನೂ ಓದಿ: Explainer: ಕಾಂಗ್ರೆಸ್ ಪಕ್ಷದ ಬೊಕ್ಕಸ ಖಾಲಿಖಾಲಿ; ಹಣ ಶೇಖರಿಸುವಂತೆ ರಾಜ್ಯ ಘಟಕಗಳಿಗೆ ತುರ್ತು ಸಂದೇಶ!
ಮಧು ಬಂಗಾರಪ್ಪ ಕಾಂಗ್ರೆಸ್ ತೆಕ್ಕೆಗೆ, ಮುಂದಿನ ಚುನಾವಣೆಯಲ್ಲಿ ಅಣ್ಣ ಕುಮಾರ್ಗೆ ಸವಾಲು ನೀಡಲು ತಯಾರು