ಪ್ರತ್ಯೇಕ ಘಟನೆ: ಪತ್ನಿಯರ ಮೇಲೆ ಅನುಮಾನ, ಗಂಡ ಹೆಂಡರ ಜಗಳದಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರು ಸಾವು

|

Updated on: Jun 07, 2023 | 11:31 AM

ಪತ್ನಿಯನ್ನು ಬರ್ಬರವಾಗಿ ಕೊಂದು ಬಳಿಕ ಪತಿ ಸಹ ಆತ್ಮಹತ್ಯಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಇನ್ನೊಂದೆ ಪತಿರಾಯನೊಬ್ಬ ಶೀಲಶಂಕಿಸಿ ಹೆಂಡತಿಯನ್ನು ಕೊಂದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಈ ಎರಡು ಪ್ರತ್ಯೇಕ ಘಟನೆ ವಿವರ ಇಲ್ಲಿದೆ.

ಪ್ರತ್ಯೇಕ ಘಟನೆ: ಪತ್ನಿಯರ ಮೇಲೆ ಅನುಮಾನ, ಗಂಡ ಹೆಂಡರ ಜಗಳದಲ್ಲಿ ಇಬ್ಬರು ಮಹಿಳೆಯರು ಸೇರಿ  ಮೂವರು ಸಾವು
ಪ್ರಾತಿನಿಧಿಕ ಚಿತ್ರ
Follow us on

ಹಾವೇರಿ/ರಾಯಚೂರು: ಗಂಡ-ಹೆಂಡತಿ ಸಂಬಂಧ ಇತರ ಎಲ್ಲಾ ಸಂಬಂಧಗಳಿಗಿಂತಲೂ ಒಂದು ವಿಶೇಷ ಸಂಬಂಧ. ಎಲ್ಲೋ ಹುಟ್ಟಿ ಬೆಳೆದ ಎರಡು ಜೀವಗಳನ್ನು ಒಂದಾಗುವಂತೆ ಮಾಡುವ ಬಂಧನವೇ ವಿವಾಹ ಬಂಧನ. ಆದರೆ, ಹಲವು ಬಾರಿ ಚೆನ್ನಾಗಿದ್ದ ಸಂಸಾರಗಳು ಕೂಡ ಸಣ್ಣ-ಪುಟ್ಟ ಕಾರಣಕ್ಕೆ ದೂರಾಗುವುದನ್ನು ನಾವು ಕಾಣುತ್ತೇವೆ. ಇದಕ್ಕೆ ಮುಖ್ಯ ಕಾರಣ ಪತಿ-ಪತ್ನಿ ನಡುವೆ ಮೂಡುವ ಅಪನಂಬಿಕೆ. ಈ ಅನುಮಾನದಿಂದಲೇ ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಗಂಡದಿರುವ ತಮ್ಮ ಹೆಂಡತಿಯರನ್ನು ಕೊಲೆ ಮಾಡಿದ್ದಾರೆ. ಹೌದು..ಶೀಲಶಂಕಿಸಿ ಪತ್ನಿಯನ್ನು ಕೊಂದಿರುವ ಘಟನೆ ರಾಯಚೂರು ಮತ್ತು ಹಾವೇರಿಯಲ್ಲಿ ನಡೆದಿದೆ.

ಇದನ್ನೂ ಓದಿ: ರಾಯಚೂರು: ಪತ್ನಿಯ ಶೀಲಶಂಕಿಸಿ ಮಕ್ಕಳನ್ನು ಕತ್ತು ಹಿಸುಕಿ ಕೊಂದ ತಂದೆ

ಹೆಂಡ್ತಿಯನ್ನ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಪತ್ನಿಯನ್ನು(Wife) ಬರ್ಬರವಾಗಿ ಕೊಂದು ಬಳಿಕ ಪತಿ(Husband) ಸಹ ಆತ್ಮಹತ್ಯಗೆ (Suicide) ಶರಣಾಗಿರುವ ಘಟನೆ ಹಾವೇರಿ(Haveri) ತಾಲೂಕಿನ ಸಂಗೂರು ಗ್ರಾಮದಲ್ಲಿ ನಡೆದಿದೆ. ಪತ್ನಿ ದ್ರಾಕ್ಷಾಯಿಣಿಯನ್ನು ಕೊಲೆಗೈದು ಬಳಿಕ ಪತಿ ಪ್ರಭು ವಾರತಿ(52) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಶೀಲಶಂಕಿಸಿ ನಿತ್ಯ ಗಲಾಟೆ ಮಾಡುತ್ತಿದ್ದ ಪತಿ ಪ್ರಭು, ನಿನ್ನೆಯೂ (ಜೂನ್ 06) ಇದೇ ವಿಷಯಕ್ಕೆ ಪತ್ನಿ ಜೊತೆ ಗಲಾಟೆ ಮಾಡಿದ್ದ. ಈ ವೇಳೆ ಮಚ್ಚಿನಿಂದ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ತಾನು ಸಹ ಮನೆ ಮುಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಸ್ಥಳಕ್ಕೆ ಹಾವೇರಿ ಎಸ್​​ಪಿ ಶಿವಕುಮಾರ್ ಗುಣಾರೆ ಭೇಟಿ, ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಹಾವೇರಿ ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೀಲಶಂಕಿಸಿ ಹೆಂಡತಿಯನ್ನು ಕೊಂದ ಪತಿ

ಇನ್ನು ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಸಹ ಪತಿಯೊಬ್ಬ ಶೀಲಶಂಕಿಸಿ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ನಿನ್ನೆ(ಜೂನ್ 06) ಶೀಲ ಶಂಕಿಸಿ ಸಿದ್ದು ಪತ್ನಿ ಜೊತೆ ಗಲಾಟೆ ಮಾಡಿದ್ದ. ಗಲಾಟೆ ವೇಳೆ ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಶಿಲ್ಪಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಬಗ್ಗೆ ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ಆರೋಪಿ ಸಿದ್ದುನನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ