ಜಮೀನಿನಲ್ಲಿ ಕೆಲಸ ಮಾಡುವಾಗ ಜೇನು ಹಿಂಡು ದಾಳಿ, ಆಸ್ಪತ್ರೆಯಲ್ಲಿ ವೃದ್ಧ ಸಾವು

ಕುಮಟಾ ತಾಲೂಕಿನ ತದಡಿ ಗ್ರಾಮದಲ್ಲಿ ಜೇನು ನೊಣಗಳ ದಾಳಿಗೆ 65 ವರ್ಷದ ರಮೇಶ್ ನಾಯ್ಕ ಮೃತಪಟ್ಟಿದ್ದಾರೆ.

ಜಮೀನಿನಲ್ಲಿ ಕೆಲಸ ಮಾಡುವಾಗ ಜೇನು ಹಿಂಡು ದಾಳಿ, ಆಸ್ಪತ್ರೆಯಲ್ಲಿ ವೃದ್ಧ ಸಾವು
ಸಾಂದರ್ಭಿಕ ಚಿತ್ರ

Updated on: Dec 19, 2020 | 11:09 AM

ಕಾರವಾರ: ಜೇನು ನೊಣಗಳ ದಾಳಿಗೊಳಗಾಗಿದ್ದ ವೃದ್ಧ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ತದಡಿ ಗ್ರಾಮದಲ್ಲಿ ನಡೆದಿದೆ. ರಮೇಶ್ ನಾಯ್ಕ(65) ಮೃತ ವ್ಯಕ್ತಿ.

ಕಳೆದ ಎರಡು ದಿನಗಳ ಹಿಂದೆ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ರಮೇಶ್ ಮೇಲೆ ಜೇನು ದಾಳಿ ಆಗಿತ್ತು. ಹೀಗಾಗಿ ಆತನನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮನೆ, ಕುಟುಂಬಸ್ಥರಲ್ಲಿ ನೀರವ ಮೌನ ಆವರಿಸಿದೆ. ಹೂವಿಂದ ಮಕರಂದ ಹೀರಿ ಸಿಹಿ ಉಣಿಸೋ ಜೇನು ನೊಣಗಳು ರಮೇಶನ ಪ್ರಾಣ ತೆಗೆದುಕೊಂಡಿವೆ.

ಬೇಡಪ್ಪಾ ಬೇಡ ಜೇನುತುಪ್ಪ..! ಈ ಪ್ರತಿಷ್ಠಿತ ಕಂಪನಿಗಳ ‘ಪ್ಯೂರ್ ಹನಿ’ ನೀವು ಬಳಸುತ್ತಿದ್ದರೆ ಎಚ್ಚರ ಎಚ್ಚರಾ!