ಬೆಂಗಳೂರು: ಮಹಾಮಾರಿ ಕೊರೊನಾದಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ತಮ್ಮ ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಣ್ಣ ಮುಂದೆಯೇ ನರಳಿ ನರಳಿ ಸಾಯುವಂತೆ ಮಾಡಿದೆ. ಇಂತಹದೇ ಮನಕಲುಕುವ ಘಟನೆ ಬೆಂಗಳೂರಿನ ಬಿಟಿಎಮ್ ಲೇಔಟ್ನಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ದಂಪತಿ ಬಾಳಿನಲ್ಲಿ ವಿಧಿ ಬಿರುಗಾಳಿ ಬೀಸಿದೆ.
ಪ್ರೀತಿಸಿ ಮದುವೆಯಾಗಿದ್ದ ಪತಿ ಒಂದೇ ವಾರಕ್ಕೆ ಉಸಿರಾಟದ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ. ಪತ್ನಿಯ ಬಾಳಲ್ಲಿ ವಿಧಿ ಕ್ರೂರವಾಗಿ ವರ್ತಿಸಿದೆ. ಬಿಟಿಎಮ್ ಲೇಔಟ್ನ ಪಿಜಿಯಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಹೀಗಾಗಿ BTM ಲೇಔಟ್ನ ಒಂದು ಖಾಸಗಿ ಹಾಸ್ಪಿಟಲ್ಗೆ ಹೋಗಿದ್ದರು. ಆದ್ರೆ ಆಸ್ಪತ್ರೆಯಲ್ಲಿ ವೈದ್ಯರು ವ್ಯಕ್ತಿಗೆ ಯಾವುದೇ ಸಮಸ್ಯೆ ಇಲ್ಲ. ಮನೆಗೆ ಕರೆದುಕೊಂಡು ಹೋಗಿ ರೆಸ್ಟ್ ಮಾಡಿ ಎಂದಿದ್ದರು.
ಸದ್ಯ ನಿಟ್ಟುಸಿರು ಬಿಟ್ಟ ವ್ಯಕ್ತಿ ಪಿಜಿಗೆ ಬಂದು ರೆಸ್ಟ್ ಮಾಡಿದ್ದ. ಆದ್ರೆ ವಿಶ್ರಾಂತಿಗೆಂದು ಮಲಗಿದವ ಮತ್ತೆ ಏಳಲೇ ಇಲ್ಲ. ಮದುವೆಯಾದ ಒಂದೇ ವಾರಕ್ಕೆ ದಂಪತಿ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಅಲ್ಲದೆ ಮಾಲೀಕ ತೀರಿಕೊಂಡ ಬಳಿಕ ಮನೆಯಲ್ಲಿದ್ದ ನಾಯಿ ಕೂಡ ಸಾವನ್ನಪ್ಪಿದೆ. ವ್ಯಕ್ತಿಯ ಮೃತದೇಹ ಮನೆಯಿಂದ ಹೊರಗೆ ಹೋಗ್ತಿದ್ದಂತೇ ಮನೆಯಲ್ಲಿದ್ದ ನಾಯಿ ಕೂಡ ಸಾವನ್ನಪ್ಪಿದೆ.
ಕೊರೊನಾದಿಂದಲೇ ನನ್ನ ಪತಿ ತೀರಿಕೊಂಡಿದ್ದಾರೆ. ಅವರೇ ಇಲ್ಲದ ಮೇಲೆ ನಾನೂ ಇರಲ್ಲ ಎಂದು ಪತ್ನಿ ಕಣ್ಣೀರು ಹಾಕಿದ್ದಾರೆ. ಇನ್ನು ಮಹಿಳೆ ಅತ್ತು ಅತ್ತು ಅಸ್ತವ್ಯಸ್ತಗೊಂಡಿದ್ದು ಈಗ ಸದ್ಯ ಮಹಿಳೆ ಖಾಸಗಿ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ
ಚಿಕ್ಕಬಳ್ಳಾಪುರ: ಮಾಸ್ಕ್ ಧರಿಸಲು ಸೂಚಿಸಿದ್ದಕ್ಕೆ ಪಿಡಿಓ ದಂಪತಿ ಮೇಲೆ ಹಲ್ಲೆ ಮಾಡಿದ ಪುಂಡರು
ಕೊಡಗಿನಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ; ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರ
(Man died over breathing problem in bengaluru)