ಮಂಡ್ಯದತ್ತ ಮುಖಮಾಡದ ಸಂಸದೆ; ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪದ ನಂತರ ಅಧಿಕಾರಿಗಳ ಸಭೆ ಕರೆದ ಸುಮಲತಾ
ಸುಮಕ್ಕಾ ಎಲ್ಲಿದ್ದೀಯಕ್ಕಾ ಎಂದು ಮಂಡ್ಯ ಜನತೆ ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಂಸದೆ ಸುಮಲತಾ ಮಾರ್ಚ್ 8 ರಂದು ಜಿಲ್ಲೆಗೆ ಭೇಟಿ ನೀಡಿದ್ದರು ಬಳಿಕ ಅತ್ತ ಕಡೆ ತಲೆ ಹಾಕಿಲ್ಲ.
ಮಂಡ್ಯ: ಮಹಾಮಾರಿ ಕೊರೊನಾ ಸಂಕಷ್ಟದ ಸಮಯದಲ್ಲಿ ಜನಪ್ರತಿನಿಧಿಗಳು ಜನರೊಂದಿಗೆ ಬೆರೆತು ಅವರ ಕಷ್ಟಗಳನ್ನು ಆಲಿಸಿ ಅವರಿಗೆ ಸಹಾಯ ಮಾಡಬೇಕು. ಆದ್ರೆ ನಮ್ಮ ಅನೇಕ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳತ್ತ ಮುಖ ಮಾಡುತ್ತಿಲ್ಲ. ತಮ್ಮ ಕ್ಷೇತ್ರದಲ್ಲಿ ಏನಾಗುತ್ತಿದೆ, ಯಾರಿಗೆ ಯಾವ ಸಮಸ್ಯೆ ಇದೆ ಎಂಬ ಯಾವುದೇ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದೇ ರೀತಿ ಕಳೆದ 54 ದಿನಗಳಿಂದ ಮಂಡ್ಯದತ್ತ ಸಂಸದೆ ಸುಮಲತಾ ಮುಖಮಾಡಿಲ್ಲವಂತೆ. ಹೀಗಾಗಿ ಸಂಸದೆ ಸುಮಲತಾ ನಡೆಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಮಕ್ಕಾ ಎಲ್ಲಿದ್ದೀಯಕ್ಕಾ ಎಂದು ಮಂಡ್ಯ ಜನತೆ ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಂಸದೆ ಸುಮಲತಾ ಮಾರ್ಚ್ 8 ರಂದು ಜಿಲ್ಲೆಗೆ ಭೇಟಿ ನೀಡಿದ್ದರು ಬಳಿಕ ಅತ್ತ ಕಡೆ ತಲೆ ಹಾಕಿಲ್ಲ. ಹೀಗಾಗಿ ಕಾಣೆಯಾಗಿದ್ದಾರೆ ಸ್ವಾಭಿಮಾನಿ ಸಂಸದೆ. ಕೊರೊನಾದಿಂದ ಮಂಡ್ಯದ ಜನತೆ ಪರದಾಡುತ್ತಿರುವಾಗ ಎರಡು ತಿಂಗಳಿನಿಂದ ಮಂಡ್ಯಕ್ಕೆ ಕಾಲಿಡದ ಸಂಸದೆ. ಸುಮಕ್ಕಾ ಎಲ್ಲೀದ್ದಿಯಕ್ಕಾ ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.
ಸದ್ಯ ಸಾರ್ವಜನಿಕರು ಪ್ರಶ್ನಿಸಿದ ಬಳಿಕ ಎಚ್ಚೆತ್ತ ಸುಮಲತಾ ಇಂದು ಮಧ್ಯಾಹ್ನ 3 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿರೊ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಏಪ್ರಿಲ್ 21 ರಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು.
ಮಿಮ್ಸ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಇತರೇ ಆಸ್ಪತ್ರೆಗಳಲ್ಲಿ ಬೆಡ್ಗಳ ಸಮಸ್ಯೆಯ ಬಗೆಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಇದೇ 20 ರಂದು ಸಭೆ ಕೈಗೊಂಡಿದ್ದು ಬೆಡ್ ಮ್ಯಾನೇಜ್ ಮೆಂಟ್ ಕ್ರಿಯಾ ಯೋಜನೆಯ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ಗಳನ್ನ ಪಡೆಯಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ನನ್ನ ಮನವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದೀಗ ಸಾರ್ವಜನಿಕರ ಆಕ್ಷೇಪ ಹೆಚ್ಚಾದ ಹಿನ್ನಲೆಯಲ್ಲಿ ವಿಡಿಯೋ ಸಂವಾದದ ಮೂಲಕ ಅಧಿಕಾರಿಗಳ ಜೊತೆ ಸಭೆ ನಡೆಸಲು ಸುಮಲತಾ ಮುಂದಾಗಿದ್ದಾರೆ.
ಇದನ್ನೂ ಓದಿ: ಹೇಳದೇ ಕೇಳದೇ ಅಂಬರೀಶ್ ಮನೆಗೆ ಬಂದಿದ್ದ ನಟ ವಿವೇಕ್; ವಿಶೇಷ ಘಟನೆ ನೆನಪಿಸಿಕೊಂಡ ಸುಮಲತಾ