ಬೆಂಗಳೂರು: ಚಲಿಸುತ್ತಿದ್ದ ಕಾರಿ ಬೋನೆಟ್​ಗೆ ಅರೆಬೆತ್ತಲೆ ಸ್ಥಿತಿಯಲ್ಲಿ ಜಿಗಿದ ಯುವಕ, ವಿಡಿಯೋ ವೈರಲ್

ಬೆಂಗಳೂರಿನ ಔಟರ್ ರಿಂಗ್ ರೋಡ್ ಬಳಿಯ ಟ್ರಾಫಿಕ್​ನಲ್ಲಿ ಅರೆಬೆತ್ತಲೆ ಅವಸ್ಥೆಯಲ್ಲಿ ಕಾರಿನ ಮೇಲೆ ಜಿಗಿದ ವ್ಯಕ್ತಿ ಬೋನಟ್​ ಮೇಲೆ ಕುಳಿತುಬಿಟ್ಟಿದ್ದಾನೆ. ವಾಹನ ಚಾಲಕ ಕಾರು ಚಲಾಯಿಸಲು ಮುಂದಾದರೂ ಅಟ್ಟಿಸಿಕೊಂಡು ಬಂದು ಮತ್ತೊಮ್ಮೆ ಕಾರಿನ ಮೇಲೆ ಜಿಗಿದಿದ್ದಾನೆ. ಈತನ ದುರ್ವರ್ತನೆ ನೆಟ್ಟಿಗರು ಹಲವಾರು ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಚಲಿಸುತ್ತಿದ್ದ ಕಾರಿ ಬೋನೆಟ್​ಗೆ ಅರೆಬೆತ್ತಲೆ ಸ್ಥಿತಿಯಲ್ಲಿ ಜಿಗಿದ ಯುವಕ, ವಿಡಿಯೋ ವೈರಲ್
ಟ್ರಾಫಿಕ್ ಮಧ್ಯದಲ್ಲಿ ಕಾರಿನ ಮೇಲೆ ಜಿಗಿದ ವ್ಯಕ್ತಿ

Updated on: Sep 26, 2025 | 10:54 AM

ಬೆಂಗಳೂರು, ಸೆಪ್ಟೆಂಬರ್ 26: ಬೆಂಗಳೂರಿನ  ನೋವೋಟೆಲ್ ಹೋಟೆಲ್ ಬಳಿಯ  ಔಟರ್ ರಿಂಗ್ ರೋಡ್​ನಲ್ಲಿ ಆಶ್ಚರ್ಯಕರ ಘಟನೆಯೊಂದು ಬೆಳಕಿಗೆ ಬಂದಿದೆ.  ಹೆಚ್ಚಿನ ಟ್ರಾಫಿಕ್ ಸಮಯದಲ್ಲಿ ಓಡಾಡುತ್ತಿರುವ ವಾಹನಗಳನ್ನೂ ಲೆಕ್ಕಿಸದೆ ವ್ಯಕ್ತಿಯೊಬ್ಬ ಕಾರಿನ  ಮೇಲೆ ಹಠಾತ್ತನೆ ಜಿಗಿದಿದ್ದಾನೆ. ಅರೆಬೆತ್ತಲೆ ಅವಸ್ಥೆಯಲ್ಲಿದ್ದ ಈತ ವಾಹನದ ಬೋನೆಟ್ ಮೇಲೆ ಕುಳಿತಿದ್ದ. ವಾಹನ ಚಾಲಕ ಕಾರನ್ನು ಚಲಾಯಿಸಲು ಮುಂದಾದರೂ ಆತನ ಮೇಲೆ ಕಿರುಚಾಡಿ ಅಸಭ್ಯ ವರ್ತನೆ ತೋರಿದ್ದಾನೆ. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವ್ಯಕ್ತಿಯ ಅಸಭ್ಯ ವರ್ತನೆಯ ವೈರಲ್ ವೀಡಿಯೋ ಇಲ್ಲಿದೆ.

ಈತ ಕೇವಲ ಆ ವಾಹನದ ಬೋನೆಟ್ ಮೇಲೆ ಕುಳಿತುಕೊಳ್ಳುವುದಷ್ಟೇ ಅಲ್ಲದೇ ಕಾರ್ ಚಾಲಕ ವಾಹನ ಚಲಾಯಿಸಲು ಮುಂದಾದಾಗ ಆತನ ಮೇಲೆ ಕಿರುಚಿ ಅಸಭ್ಯವಾಗಿ ವರ್ತಿಸಿದ್ದಾನೆ. ವಾಹನವನ್ನು ಅಟ್ಟಿಸಿಕೊಂಡು ಹೋಗಿ ಹಿಂದಿನಿಂದ ವಾಹನವನ್ನು ಮತ್ತೊಮ್ಮೆ ಹತ್ತಲು ಪ್ರಯತ್ನಿಸಿದಾಗ ಕೆಳಗೆ ಬಿದ್ದಿದ್ದಾನೆ.

ಇದನ್ನೂ ಓದಿ ಬೆಂಗಳೂರಿನ ಈ ಭಾಗದಲ್ಲೇ ಟ್ರಾಫಿಕ್​​ ಹೆಚ್ಚು, ವೈರಲ್ ಆಯ್ತು ಪೋಸ್ಟ್

ಈ ವೀಡಿಯೋಕ್ಕೆ ನೆಟ್ಟಿಗರ ರಿಯಾಕ್ಷನ್ ಏನು?

ಈತನ ಈ ದುರ್ವರ್ತನೆಗೆ ಉಳಿದವರೆಲ್ಲರೂ ದಿಗ್ಭ್ರಮೆಯಿಂದ ನೊಡುತ್ತಿದ್ದರೆ, ಹಲವರು ಈ ಸನ್ನಿವೇಶದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಅರೆ ಬೆತ್ತಲೆಯಾಗಿ ಹೀಗೆ ಅಸಭ್ಯ ವರ್ತನೆ ಮಾಡಿರುವ ಈ ವ್ಯಕ್ತಿ  ಯಾವುದಾದರೂ ಮಾದಕ ವಸ್ತುವಿನ ಪ್ರಭಾವದಲ್ಲಿದ್ದಿರಬಹುದು ಎಂದು ಊಹಿಸಿದ್ದಾರೆ. ಇನ್ನೂ ಕೆಲವರು ಆತ ಮಾನಸಿಕ ಅಸ್ವಸ್ಥತೆಯಿಂದಲೂ ಬಳಲುತ್ತಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಊಹಾಪೋಹಗಳು ಏನೇ ಇದ್ದರೂ ಬೆಂಗಳೂರಿಗರು ರಸ್ತೆಯಲ್ಲಿ ಸುರಕ್ಷಿತವಾಗಿ ಓಡಾಡಬೇಕಿದ್ದಲ್ಲಿ ಮಯ್ಯೆಲ್ಲಾ ಕಣ್ಣಾಗಿದ್ದರೂ ಸಾಲದು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:48 am, Fri, 26 September 25