ಬೆಂಗಳೂರು: ಮಂತ್ರಾಲಯಕ್ಕೆ ಹೋಗಿಬಂದಿದ್ದ ವೃದ್ಧನಿಗೆ ಕೊರೊನಾ ದೃಢಪಟ್ಟಿದೆ. ಬೆಂಗಳೂರಿನ ನಾಗರಬಾವಿಯ ಅಪಾರ್ಟ್‌ಮೆಂಟ್‌ನಲ್ಲಿದ್ದ ವೃದ್ಧ ಇತ್ತೀಚೆಗೆ ಮಂತ್ರಾಲಯಕ್ಕೆ ಹೋಗಿದ್ದರು. ಈಗ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಸೋಂಕಿತ ವೃದ್ಧ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರನ್ನು ಟೆಸ್ಟ್ಗೆ ಒಳಪಡಿಸಿದ್ದು ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ವೃದ್ಧನ ಸಂಪರ್ಕದಲ್ಲಿದ್ದವರಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ನ ಮೊದಲನೇ ಮಹಡಿಯಲ್ಲಿದ್ದ 40 ಜನರಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಹಾಗೂ ಅಪಾರ್ಟ್‌ಮೆಂಟ್ ಬಳಿಯ ಸರ್ಕಾರಿ ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ.
ಒಂದೇ ಮನೆಯಲ್ಲಿ 6 ಜನರಿಗೆ ಕೊರೊನಾ
ಇದೇ ರೀತಿ ಸಿಲಿಕಾನ್ ಸಿಟಿಯ ಮತ್ತೊಂದು ಅಪಾರ್ಟ್‌ಮೆಂಟ್‌ನಲ್ಲೂ ಕೊರೊನಾ ಸ್ಫೋಟಗೊಂಡಿದೆ. ಬಿಟಿಎಂ ಲೇಔಟ್‌ನ ಒಂದೇ ಮನೆಯಲ್ಲಿ 6 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮತ್ತೊಂದು ಕಡೆ ಎಲ್ಐಸಿ ಕೋಟ್ರಸ್ನಲ್ಲಿ ಓರ್ವ ವ್ಯಕ್ತಿ ಗೆ ಕೊರೊನಾ ಸೋಂಕು ತಗುಲಿದೆ. ಕೊವಿಡ್ ಪಾಸಿಟಿವ್ನಿಂದಾಗಿ ಕೋಟ್ರಸ್ ಹಾಗೂ ಮನೆಗೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಕೋಟ್ರಸ್ ಮತ್ತು ಮನೆಯ ಸುತ್ತ ಮುತ್ತಲಿರುವ ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಕೋಟ್ರಸ್ನಲ್ಲಿ ಬಹುತೇಕ ಜನರು ಬ್ಯಾಂಕ್ನಲ್ಲಿ ಕೆಲಸ ಮಾಡುವವರು ಹೀಗಾಗಿ ಬ್ಯಾಂಕ್ಗೆ ಬರುವ ಜನರ ಜೊತೆಗೆ ಸಂಪರ್ಕ ಜಾಸ್ತಿ ಇರುತ್ತದೆ. ಇದೇ ಕಾರಣಕ್ಕಾಗಿ ಆರೋಗ್ಯ ಅಧಿಕಾರಿಗಳಿಗೆ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಇಂದು 1,179 ಕೊರೊನಾ ಕೇಸ್ ಪತ್ತೆ
Published On - 1:56 pm, Tue, 23 March 21